ಜಾರ್ಖಂಡ್: ಕ್ಷುಲ್ಲಕ ಕಾರಣಕ್ಕೆ ಐಆರ್‌ಬಿ ಯೋಧನಿಗೆ ಗುಂಡಿಕ್ಕಿ ಹತ್ಯೆ
ಮೃತ ಯೋಧನನ್ನು ಚಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಆದರ್ಶ ಕಾಲೋನಿಯ ಯದುವಂಶ ನಗರದ ನಿವಾಸಿ ಅಜಯ್ ಯಾದವ್(25) ಎಂದು ಗುರುತಿಸಲಾಗಿದೆ.

ಬೊಕಾರೊ: ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಸಣ್ಣ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಮೀಸಲು ಬೆಟಾಲಿಯನ್(ಐಆರ್‌ಬಿ)ನ ಯೋಧನಿಗೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೃತ ಯೋಧನನ್ನು ಚಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಆದರ್ಶ ಕಾಲೋನಿಯ ಯದುವಂಶ ನಗರದ ನಿವಾಸಿ ಅಜಯ್ ಯಾದವ್(25) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಯಾದವ್ ಅವರನ್ನು ಗಿರಿದಿಹ್ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು ಮತ್ತು ಛತ್ ಪೂಜಾ ರಜೆಯ ಸಮಯದಲ್ಲಿ ಚಾಸ್‌ನಲ್ಲಿರುವ ತಮ್ಮ ಊರಿಗೆ ಆಗಮಿಸಿದ್ದರು.
"ಯಾವುದೋ ಕ್ಷುಲ್ಲಕ ಕಾರಣಕ್ಕೆ ಜವಾನ ಮತ್ತು ಬಲರಾಮ್ ತಿವಾರಿ ಎಂಬ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಮಾತಿನ ಚಕಮಕಿ ಗಲಾಟೆಯಾಗಿ ಮಾರ್ಪಟ್ಟಿತು. ಬಲರಾಮ್ ಆರಂಭದಲ್ಲಿ ಸ್ಥಳದಿಂದ ಹೊರಟುಹೋದರು.
ಆದರೆ ಸ್ವಲ್ಪ ಸಮಯದ ನಂತರ, ಅವರು ಪಿಸ್ತೂಲಿನೊಂದಿಗೆ ಬಂದು ಜವಾನನ ಹೊಟ್ಟೆಗೆ ಮೂರು ಸುತ್ತು ಗುಂಡು ಹಾರಿಸಿದರು" ಎಂದು ಚಾಸ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ(ಎಸ್‌ಡಿಪಿಒ) ಪ್ರವೀಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಯಾದವ್ ಅವರನ್ನು ಬೊಕಾರೊ ಜನರಲ್ ಆಸ್ಪತ್ರೆಗೆ(ಬಿಜಿಹೆಚ್) ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



