ಜಲೇಬಿ, ಬೇಸನ್ ಲಡ್ಡು ತಯಾರಿಸಿದ ರಾಹುಲ್ ಗಾಂಧಿ: ವಿಪಕ್ಷ ನಾಯಕನಿಗೆ ಸ್ವೀಟ್ ಅಂಗಡಿ ಮಾಲೀಕ ನೀಡಿದ ಸಲಹೆ ಏನು ಗೊತ್ತೆ?
ಈ ವೇಳೆ ಮಾಲೀಕ ಸುಶಾಂತ್ ಜೈನ್, ರಾಹುಲ್ ಗಾಂಧಿಗೆ, ನೀವು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಇದ್ದೀರಿ, ನೀವು ಬೇಗ ಮದುವೆಯಾಗಿ, ನಾವು ಕಾಯುತ್ತಿದ್ದೇವೆ ಎಂದು ಸುಶಾಂತ್ ಜೈನ್ ಹೇಳಿದ್ದಾರೆ.

ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ 235 ವರ್ಷ ಹಳೆಯ ದೆಹಲಿ ಬೇಕರಿಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ದೆಹಲಿಯ ಐತಿಹಾಸಿಕ ಗಂಟೆವಾಲ ಸ್ವೀಟ್ ಶಾಪ್ಗೆ ಭೇಟಿ ನೀಡಿ ಕೆಲ ಸಿಹಿ ತಿನಿಸುಗಳನ್ನು ಕೈಯಾರೆ ಮಾಡಿದ್ದಾರೆ. ಇಷ್ಟೇ ಅಲ್ಲ ಮಾಲೀಕರ ಜೊತೆಗಿನ ಮಾತುಕತೆ ವಿಡಿಯೋಗಳು ಇದೀಗ ಸದ್ದು ಮಾಡುತ್ತಿದೆ.
ಈ ವೇಳೆ ಅಂಗಡಿ ಮಾಲೀಕ ಸುಶಾಂತ್ ಜೈನ್, ರಾಹುಲ್ ಜಿ ಬೇಗ ಮದ್ವೆ ಆಗಿ, ನಿಮ್ಮ ಮದ್ವೆಗೆ ಸಿಹಿ ತಿಂಡಿ ಆರ್ಡರ್ ಪಡೆಯಲು ನಾವು ಕಾಯ್ತಿದ್ದೇವೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಸ್ವೀಟ್ ಶಾಪ್ಗೆ ಭೇಟಿ ನೀಡಿ ಜಿಲೇಬಿ ಸೇರಿದಂತೆ ಕೆಲ ಸಿಹಿ ತಿನಿಸುಗಳನ್ನು ತಯಾರಿಸಿದ್ದಾರೆ.
ಈ ವೇಳೆ ಮಾಲೀಕ ಸುಶಾಂತ್ ಜೈನ್, ರಾಹುಲ್ ಗಾಂಧಿಗೆ, ನೀವು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಇದ್ದೀರಿ, ನೀವು ಬೇಗ ಮದುವೆಯಾಗಿ, ನಾವು ಕಾಯುತ್ತಿದ್ದೇವೆ ಎಂದು ಸುಶಾಂತ್ ಜೈನ್ ಹೇಳಿದ್ದಾರೆ.
ಸುಶಾಂತ್ ಜೈನ್ ಮಾತುಗಳನ್ನು ಕೇಳಿಸಿಕೊಂಡ ರಾಹುಲ್ ಗಾಂಧಿ ನಕ್ಕಿದ್ದಾರೆ. ಆದರೆ ಬಳಿಕ ಹೇಳಿದ ಮಾತು, ರಾಹುಲ್ ಗಾಂಧಿ ಮುಖದಲ್ಲಿ ಮತ್ತಷ್ಟು ನಗು ತರಿಸಿತ್ತು. ಕಾರಣ ನೀವು ಮದುವೆಯಾಗಿ, ಕಾರಣ ನಿಮ್ಮ ಮದುವೆ ಸ್ವೀಟ್ಸ್ ಆರ್ಡರ್ ಪಡೆಯಲು ನಾವು ಕಾಯುತ್ತಿದ್ದೇವೆ ಎಂದು ಸುಶಾಂತ್ ಜೈನ್ ಹೇಳಿದ್ದಾರೆ.
ದೆಹಲಿಯ ಗಂಟೆವಾಲ ಸ್ವೀಟ್ ಶಾಪ್ಗೆ ಸುದೀರ್ಘ ಇತಿಹಾಸವಿದೆ. ರಾಜೀವ್ ಗಾಂಧಿ ಕಾಲದಲ್ಲೇ ಈ ಸ್ವೀಟ್ ಶಾಪ್ ಅತ್ಯಂತ ಜನಪ್ರಿಯವಾಗಿತ್ತು. ಹಲವು ದಶಕಗಳಿಂದ ದೆಹಲಿಯಲ್ಲಿ ಸ್ವೀಟ್ಸ್ ವ್ಯವಹಾರದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ರಾಹುಲ್ ಗಾಂಧಿ ಭೇಟಿ ವೇಳೆ, ನಿಮ್ಮ ತಂದೆ ರಾಜೀವ್ ಗಾಂಧಿಗೆ ಜಿಲೇಬಿ ತುಂಬಾ ಇಷ್ಟದ ಸಿಹಿ ತಿಂಡಿಯಾಗಿತ್ತು.
ನೀವು ಟ್ರೈ ಮಾಡಿ, ಇದರ ಜೊತೆಗೆ ಅವರಿಗೆ ಬೇಸನ್ ಲಡ್ಡುಕೂಡ ತುಂಬಾ ಇಷ್ಟವಿತ್ತು ಎಂದಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಜಲೇಬಿ ಹಾಗೂ ಬೇಸನ್ ಲಡ್ಡು ಸ್ವೀಟ್ ಕೈಯಾರಿ ತಯಾರಿಸಿದ್ದಾರೆ. ಸ್ವೀಟ್ ಶಾಪ್ ಮಾಲೀಕ ಹಾಗೂ ಚೆಫ್ ಮಾರ್ಗದರ್ಶನದಲ್ಲಿ ಸ್ವೀಟ್ಸ್ ತಯಾರಿಸಿದ್ದಾರೆ. ಇಷ್ಟೇ ಅಲ್ಲ ಜಿಲೇಬಿ ಹಾಗೂ ಬೇಸನ್ ಲಡ್ಡು ಖರೀದಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ವೀಟ್ ಶಾಪ್ ಭೇಟಿಯ ವಿಡಿಯೋ ಹಂಚಿಕೊಂಡಿದ್ದಾರೆ. ಶತಮಾನಗಳ ಹಳೆಯ ಸ್ವೀಟ್ ಶಾಪ್ನಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಿ ಸಂಭ್ರಮಿಸಿದ್ದೇನೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಾಪ್ಗೆ ಬೇಟಿ ನೀಡಿ ಸ್ವೀಟ್ಸ್ ತಯಾರಿಸಿದ್ದೇನೆ. ಈ ಸ್ವೀಟ್ ಶಾಪ್ನಲ್ಲಿ ದಶಕಗಳ ಹಿಂದೆ ಇದ್ದ ಅದೇ ಸ್ವಾದ, ಅದೇ ಸಿಹಿ, ಅದೇ ರುಚಿ ಈಗಲೂ ಇದೆ. ಸಾಂಪ್ರದಾಯಿಕ ರೀತಿಯ ತಯಾರಿಕೆ, ವಿಶೇಷ ಖಾದ್ಯಗಳು ಈ ಶಾಪ್ ಜೊತೆಗಿನ ಸಂಬಂಧ ಮತ್ತಷ್ಟುಗಟ್ಟಿಗೊಳಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



