ದೇಶ

ತಮ್ಮ ಪಕ್ಷದ ಡಿಸಿಎಂಗೆ ಮತ ಹಾಕಬೇಡಿ ಎಂದು ಬಿಹಾರಿಗಳಿಗೆ ಬಿಜೆಪಿ ನಾಯಕ ಮನವಿ!

ಭಾನುವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸಿಂಗ್ ಅವರು, "ನಿಮ್ಮ ಜಾತಿಗೆ ಸೇರಿದವರಾಗಿದ್ದರೂ ಸಹ" ಅಪರಾಧ ಹಿನ್ನೆಲೆ ಹೊಂದಿರುವ ಯಾವುದೇ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಜನರಿಗೆ ಸಲಹೆ ನೀಡಿದರು.

ತಮ್ಮ ಪಕ್ಷದ ಡಿಸಿಎಂಗೆ ಮತ ಹಾಕಬೇಡಿ ಎಂದು ಬಿಹಾರಿಗಳಿಗೆ ಬಿಜೆಪಿ ನಾಯಕ ಮನವಿ!
ಆರ್ ಕೆ ಸಿಂಗ್
Published On :

ಪಾಟ್ನಾ: ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಆರ್.ಕೆ. ಸಿಂಗ್ ಅವರು ಪಕ್ಷದ ಪ್ರಮುಖ ಅಭ್ಯರ್ಥಿ ಹಾಗೂ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಮತ ಹಾಕಬೇಡಿ ಎಂದು ಬಿಹಾರದ ಜನತೆಗೆ ಒತ್ತಾಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಭಾನುವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸಿಂಗ್ ಅವರು, "ನಿಮ್ಮ ಜಾತಿಗೆ ಸೇರಿದವರಾಗಿದ್ದರೂ ಸಹ" ಅಪರಾಧ ಹಿನ್ನೆಲೆ ಹೊಂದಿರುವ ಯಾವುದೇ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಜನರಿಗೆ ಸಲಹೆ ನೀಡಿದರು.

"ಕಳಂಕವಿಲ್ಲದ ಯಾವುದೇ ಅಭ್ಯರ್ಥಿ ಲಭ್ಯವಿಲ್ಲದೆ ಇದ್ದರೆ" ನೋಟಾ ಆಯ್ಕೆ ಮಾಡಿಕೊಳ್ಳುವಂತೆಯೂ ಆರ್.ಕೆ. ಸಿಂಗ್ ಅವರು ಬಿಹಾರ ಜನತೆಗೆ ಮನವಿ ಮಾಡಿದ್ದಾರೆ.

ಆರ್.ಕೆ. ಸಿಂಗ್ ಅವರು ಹೆಸರಿಸಿದ ಕಳಂಕಿತ ಎನ್ ಡಿಎ ಅಭ್ಯರ್ಥಿಗಳಲ್ಲಿ ಡಿಸಿಎಂ ಚೌಧರಿ(ತಾರಾಪುರ) ಮತ್ತು ಮೊಕಾಮಾದ ಜೆಡಿ(ಯು) ಅಭ್ಯರ್ಥಿ ಅನಂತ್ ಸಿಂಗ್ ಸೇರಿದ್ದಾರೆ.

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅರಾಹ್ ಕ್ಷೇತ್ರದಲ್ಲಿ ಸೋತ ನಂತರ ರಾಜಕೀಯವಾಗಿ ಅತಂತ್ರರಾಗಿರುವ ಸಿಂಗ್ ಅವರು, ಜಗದೀಶಪುರ ಮತ್ತು ಸಂದೇಶ್‌ನ ಜೆಡಿ(ಯು) ಅಭ್ಯರ್ಥಿಗಳನ್ನು ಸಹ ಹೆಸರಿಸಿದ್ದಾರೆ.

ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರ್‌ಜೆಡಿ ಅಭ್ಯರ್ಥಿಗಳಾದ ದೀಪು ಸಿಂಗ್(ಅರ್ರಾ) ಮತ್ತು ಒಸಾಮಾ ಶಹಾಬ್(ರಘುನಾಥಪುರ) ಅವರ ಹೆಸರುಗಳನ್ನು ಸಿಂಗ್ ಹೆಸರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.