ದೇಶ

ದೆಹಲಿಯಲ್ಲಿ ಎನ್‌ಕೌಂಟರ್‌: ವೈದ್ಯನ ಕೊಲೆ, ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನೇಪಾಳ ಪ್ರಜೆ ಸಾವು..!

ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ನೇಪಾಳದ ಲಾಲ್‌ಪುರ ಮೂಲದ ಭೀಮ್ ಮಹಾಬಹಾದ್ದೂರ್ ಜೋರಾ (39) ಎಂದು ಗುರ್ತಿಸಲಾಗಿದೆ. ಈತ ದೆಹಲಿ, ಗುರುಗ್ರಾಮ್, ಗುಜರಾತ್ ಮತ್ತು ಬೆಂಗಳೂರಿನಾದ್ಯಂತ ಹಲವಾರು ಕೊಲೆ, ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ.

ದೆಹಲಿಯಲ್ಲಿ ಎನ್‌ಕೌಂಟರ್‌: ವೈದ್ಯನ ಕೊಲೆ, ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನೇಪಾಳ ಪ್ರಜೆ ಸಾವು..!
ಸಂಗ್ರಹ ಚಿತ್ರ
Published On :

ನವದೆಹಲಿ: ವೈದ್ಯನ ಕೊಲೆ, ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನೇಪಾಳ ಪ್ರಜೆ ಪೊಲೀಸರ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ.

ದೆಹಲಿ ಮತ್ತು ಗುರುಗ್ರಾಮ್ ಪೊಲೀಸರ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಆಗ್ನೇಯ ದೆಹಲಿಯ ಅಸ್ತಾ ಕುಂಜ್ ಪಾರ್ಕ್ ಬಳಿ ಎನ್ಕೌಂಟರ್ ನಡೆದಿದೆ.

ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ನೇಪಾಳದ ಲಾಲ್‌ಪುರ ಮೂಲದ ಭೀಮ್ ಮಹಾಬಹಾದ್ದೂರ್ ಜೋರಾ (39) ಎಂದು ಗುರ್ತಿಸಲಾಗಿದೆ. ಈತ ದೆಹಲಿ, ಗುರುಗ್ರಾಮ್, ಗುಜರಾತ್ ಮತ್ತು ಬೆಂಗಳೂರಿನಾದ್ಯಂತ ಹಲವಾರು ಕೊಲೆ, ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ.

ಮೇ 2024 ರಲ್ಲಿ ಜಂಗ್‌ಪುರ ಮೂಲದ ವೈದ್ಯ ಡಾ. ಯೋಗೇಶ್ ಚಂದರ್ ಪಾಲ್ ಅವರ ಕೊಲೆಗೆ ಸಂಬಂಧಿಸಿದಂತೆ ಈತ ಬೇಕಾಗಿದ್ದ. ಈತನ ಕುರಿತು ಸುಳಿವು ನೀಡಿದವರಿಗೆ ಅಧಿಕಾರಿಗಳು 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು.

ಈ ನಡುವೆ ಸುಳಿವು ದೊರೆತ ಹಿನ್ನೆಲೆಯಲ್ಲಿ, ಗುರುಗ್ರಾಮ ಅಪರಾಧ ನಿಗ್ರಹ ದಳ ಮತ್ತು ದೆಹಲಿ ಪೊಲೀಸರ ವಿಶೇಷ ಪಡೆ ಬೆಳಗಿನ ಜಾವ 12:20 ರ ಸುಮಾರಿಗೆ ಆಸ್ತಾ ಕುಂಜ್ ಪಾರ್ಕ್ ಬಳಿ ಆರೋಪಿಯನ್ನು ತಡೆದಿದ್ದಾರೆ. ಆದರೆ, ಆರೋಪಿ ಪೊಲೀಸರ ಮೇಲೆ 6 ಸುತ್ತು ಗುಂಡುಗಳನ್ನು ಹಾರಿಸಿದ್ದು, ಅಧಿಕಾರಿಗಳು ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಗಾಯಗೊಂಡ ಆರೋಪಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.