ಛತ್ತೀಸ್‌ಗಢ: 28 ಮಾವೋವಾದಿಗಳು ಪೊಲೀಸರಿಗೆ ಶರಣು
19 ಮಹಿಳೆಯರು ಸೇರಿದಂತೆ 28 ನಕ್ಸಲರು, ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು ಎಂದು ಬಸ್ತಾರ್ ರೇಂಜ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಅವರು ಹೇಳಿದ್ದಾರೆ.

ನಾರಾಯಣಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಮಂಗಳವಾರ 28 ಮಾವೋವಾದಿಗಳು ಪೊಲೀಸರು ಶರಣಾಗಿದ್ದಾರೆ. ಅವರಲ್ಲಿ 22 ನಕ್ಸಲರ ತಲೆಗೆ 89 ಲಕ್ಷ ರೂ. ಬಹುಮಾನ ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ 'ನಿಯದ್ ನೆಲ್ಲನಾರ್'(ನಿಮ್ಮ ಒಳ್ಳೆಯ ಗ್ರಾಮ) ಯೋಜನೆ, ಹೊಸ ಶರಣಾಗತಿ ಮತ್ತು ಪುನರ್ವಸತಿ ನೀತಿ ಹಾಗೂ "ಪೂನಾ ಮಾರ್ಗಂ(ಸಾಮಾಜಿಕ ಪುನರ್ವಸತಿ)" ದಿಂದ ಪ್ರಭಾವಿತರಾಗಿ 19 ಮಹಿಳೆಯರು ಸೇರಿದಂತೆ 28 ನಕ್ಸಲರು, ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು ಎಂದು ಬಸ್ತಾರ್ ರೇಂಜ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಅವರು ಹೇಳಿದ್ದಾರೆ.
ನಿಯದ್ ನೆಲ್ಲನಾರ್ ಯೋಜನೆಯು ದೂರದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದ್ದರೆ, ಪೂನಾ ಮಾರ್ಗಂ ಬಸ್ತಾರ್ ರೇಂಜ್ ಪೊಲೀಸರು ಪ್ರಾರಂಭಿಸಿದ ಪುನರ್ವಸತಿ ಉಪಕ್ರಮವಾಗಿದೆ.
ಶರಣಾದವರಲ್ಲಿ, ನಾಲ್ಕು ಹಾರ್ಡ್‌ಕೋರ್ ಕೇಡರ್‌ಗಳಾಗಿದ್ದು, ವಿಭಾಗೀಯ ಸಮಿತಿ ಸದಸ್ಯ ಪಾಂಡಿ ಧ್ರುವ್ ಅಲಿಯಾಸ್ ದಿನೇಶ್(33); ದುಲೆ ಮಾಂಡವಿ ಅಲಿಯಾಸ್ ಮುನ್ನಿ(26), ಛತ್ತೀಸ್ ಪೋಯಂ(18) ಮತ್ತು ಪಡ್ನಿ ಓಯಂ(30) ಸೇರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



