ದೇಶ

BJP, ECಯಿಂದ ಬಹಿರಂಗವಾಗಿಯೇ ಮತಗಳ್ಳತನ; ಒಬ್ಬ ವ್ಯಕ್ತಿಯಿಂದ ಹಲವು ಕಡೆ ಮತದಾನ: ಪೋಸ್ಟ್ ಹಂಚಿಕೊಂಡ ರಾಹುಲ್

ಒಬ್ಬ ವ್ಯಕ್ತಿ ಹರಿಯಾಣ, ದೆಹಲಿ ಮತ್ತು ಬಿಹಾರ ಚುನಾವಣೆಗಳಲ್ಲಿ ಚಲಾಯಿಸಿದ್ದಾರೆ ಎಂದು ಹೇಳುವ ಕಾಂಗ್ರೆಸ್ ಪೋಸ್ಟ್ ಅನ್ನು ರಾಹುಲ್ ಗಾಂಧಿ X ನಲ್ಲಿ ಹಂಚಿಕೊಂಡಿದ್ದಾರೆ.

BJP, ECಯಿಂದ ಬಹಿರಂಗವಾಗಿಯೇ ಮತಗಳ್ಳತನ; ಒಬ್ಬ ವ್ಯಕ್ತಿಯಿಂದ ಹಲವು ಕಡೆ ಮತದಾನ: ಪೋಸ್ಟ್ ಹಂಚಿಕೊಂಡ ರಾಹುಲ್
ರಾಹುಲ್ ಗಾಂಧಿ
Published On :

ನವದೆಹಲಿ: ಬಿಜೆಪಿ ಮತ್ತು ಚುನಾವಣಾ ಆಯೋಗ "ಮತಗಳ್ಳತನ ಮಾಡಲು" ಕೈಜೋಡಿಸುತ್ತಿವೆ ಹಾಗೂ "ಪ್ರಜಾಪ್ರಭುತ್ವದ ಕಗ್ಗೊಲೆ"ಯ ನೇರ ಪ್ರಸಾರವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಕಿಡಿ ಕಾರಿದ್ದಾರೆ.

ಒಬ್ಬ ವ್ಯಕ್ತಿ ಹರಿಯಾಣ, ದೆಹಲಿ ಮತ್ತು ಬಿಹಾರ ಚುನಾವಣೆಗಳಲ್ಲಿ ಚಲಾಯಿಸಿದ್ದಾರೆ ಎಂದು ಹೇಳುವ ಕಾಂಗ್ರೆಸ್ ಪೋಸ್ಟ್ ಅನ್ನು ರಾಹುಲ್ ಗಾಂಧಿ X ನಲ್ಲಿ ಹಂಚಿಕೊಂಡಿದ್ದಾರೆ.

"ಲಕ್ಷಾಂತರ ಬಿಜೆಪಿ ಸದಸ್ಯರು ವಿವಿಧ ರಾಜ್ಯಗಳಲ್ಲಿ ಬಹಿರಂಗವಾಗಿ ಮತ ಚಲಾಯಿಸುತ್ತಿದ್ದಾರೆ. ಆದರೆ ಈ ಕಳ್ಳತನವನ್ನು ಮುಚ್ಚಿಹಾಕಲು, ಎಲ್ಲಾ ಪುರಾವೆಗಳನ್ನು ಅಳಿಸಲಾಗುತ್ತಿದೆ" ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ಬಹಿರಂಗವಾಗಿಯೇ ಮತಗಳನ್ನು ಕದಿಯುತ್ತಿವೆ - ಪ್ರಜಾಪ್ರಭುತ್ವದ ಕಗ್ಗೊಲೆಯ ನೇರ ಪ್ರಸಾರವಾಗುತ್ತಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗ, ಬಿಜೆಪಿ ಜೊತೆ ಶಾಮೀಲಾಗಿ "ವೋಟ್ ಚೋರಿ" ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ಅವರು ಹಲವು ದಿನಗಳಿಂದ ಆರೋಪಿಸುತ್ತಿದ್ದಾರೆ.

ಎರಡು ಹಂತದ ಬಿಹಾರ ವಿಧಾನಸಭಾ ಚುನಾವಣೆಯ ಮತದಾನ ನವೆಂಬರ್ 11 ರಂದು ಮುಕ್ತಾಯಗೊಂಡಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ. ಬಿಹಾರ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಮತ್ತೆ ಗುಡುಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.