ದೇಶ

ಪಾಕ್ ಪರ ಬೇಹುಗಾರಿಕೆ: ಗುಜರಾತ್ ಆರೋಗ್ಯ ಕಾರ್ಯಕರ್ತನ ಬಂಧನ

ಇದರೊಂದಿಗೆ ಕೇವಲ ಎಂಟು ತಿಂಗಳಲ್ಲಿ ಗುಜರಾತ್‌ನಲ್ಲಿ ಮೂರನೇ ಉನ್ನತ ಮಟ್ಟದ ಗೂಢಚಾರ ಬಂಧನ ಇದಾಗಿದ್ದು, ರಾಷ್ಟ್ರೀಯ ಭದ್ರತಾ ಸಂಸ್ಥೆಗಳನ್ನು ಆತಂಕಕ್ಕೀಡು ಮಾಡಿದೆ.

ಪಾಕ್ ಪರ ಬೇಹುಗಾರಿಕೆ: ಗುಜರಾತ್ ಆರೋಗ್ಯ ಕಾರ್ಯಕರ್ತನ ಬಂಧನ
ಸಹದೇವ್‌ಸಿನ್ಹ್ ದೀಪುಭಾ ಗೋಹಿಲ್
Published On :

ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್), ಪಾಕಿಸ್ತಾನ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಸೂಕ್ಷ್ಮ ಗಡಿ ಜಿಲ್ಲೆಯಾದ ಕಚ್‌ನ 28 ವರ್ಷದ ಆರೋಗ್ಯ ಕಾರ್ಯಕರ್ತನನ್ನು ಬಂಧಿಸಿದೆ.

ಇದರೊಂದಿಗೆ ಕೇವಲ ಎಂಟು ತಿಂಗಳಲ್ಲಿ ಗುಜರಾತ್‌ನಲ್ಲಿ ಮೂರನೇ ಉನ್ನತ ಮಟ್ಟದ ಗೂಢಚಾರ ಬಂಧನ ಇದಾಗಿದ್ದು, ರಾಷ್ಟ್ರೀಯ ಭದ್ರತಾ ಸಂಸ್ಥೆಗಳನ್ನು ಆತಂಕಕ್ಕೀಡು ಮಾಡಿದೆ.

ಬಂಧಿತ ಆರೋಪಿಯನ್ನು ಮಾತಾ-ನಾ-ಮಧ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯೋಜಿಸಲಾಗಿದ್ದ ಬಹುಪಯೋಗಿ ಆರೋಗ್ಯ ಕಾರ್ಯಕರ್ತ ಸಹದೇವ್‌ಸಿನ್ಹ್ ದೀಪುಭಾ ಗೋಹಿಲ್ ಎಂದು ಗುರುತಿಸಲಾಗಿದೆ.

ಆರೋಪಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಭಾರತೀಯ ನೌಕಾಪಡೆಗೆ ಸಂಬಂಧಿಸಿದ ವರ್ಗೀಕೃತ ಫೋಟೋಗಳು ಮತ್ತು ವಿಡಿಯೋಗಳನ್ನು ಪಾಕಿಸ್ತಾನಿ ಗುಪ್ತಚರ ಏಜೆಂಟ್ ಬಳಸುವ "ಅದಿತಿ ಭಾರದ್ವಾಜ್" ಎಂದು ಮಾತ್ರ ಗುರುತಿಸಲ್ಪಟ್ಟ ಹ್ಯಾಂಡ್ಲರ್‌ಗೆ ರವಾನಿಸಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಎಟಿಎಸ್ ಪತ್ರಿಕಾ ಪ್ರಕಟಣೆಯ ಪ್ರಕಾರ, ಗೋಹಿಲ್ ಜೂನ್ ಅಥವಾ ಜುಲೈ 2023ರಲ್ಲಿ ವಾಟ್ಸಾಪ್ ಮೂಲಕ "ಅದಿತಿ ಭಾರದ್ವಾಜ್" ಅವರ ಸಂಪರ್ಕಕ್ಕೆ ಬಂದಿದ್ದು, ನಂತರ ಅವರನ್ನು ವ್ಯವಸ್ಥಿತವಾಗಿ ಕಛ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮತ್ತು ಇತ್ತೀಚೆಗೆ ಪೂರ್ಣಗೊಂಡ ಮಿಲಿಟರಿ ಸೌಲಭ್ಯಗಳ ಚಿತ್ರಗಳು ಸೇರಿದಂತೆ ಸೂಕ್ಷ್ಮ ವಿಷಯಗಳನ್ನು ಸೋರಿಕೆ ಮಾಡಲು ತರಬೇತಿ ನೀಡಲಾಗಿದೆ ಎಂದು ಎಟಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.