ದೇಶ

ಕ್ರಿಪ್ಟೊ ಕರೆನ್ಸಿ ಹೆಸರಲ್ಲಿ ವಂಚನೆ: 79 ಲಕ್ಷ ರೂ ಕಳೆದುಕೊಂಡ ಮುಂಬೈ ಮಹಿಳೆ!

"ತಾನು ಹೂಡಿಕೆ ಮಾಡಿದ ಹಣ ವಾಪಸ್ ನೀಡುವಂತೆ ಮಹಿಳೆ ಕೇಳಿದಾಗ, ಆರೋಪಿಯು ಆಕೆಗೆ ಹಣ ನೀಡಲು ನಿರಾಕರಿಸಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಪ್ಟೊ ಕರೆನ್ಸಿ ಹೆಸರಲ್ಲಿ ವಂಚನೆ: 79 ಲಕ್ಷ ರೂ ಕಳೆದುಕೊಂಡ ಮುಂಬೈ ಮಹಿಳೆ!
ಕ್ರಿಪ್ಟೋ ಕರೆನ್ಸಿ (ಸಾಂಕೇತಿಕ ಚಿತ್ರ)
Published On :

ಮುಂಬೈ: ಕ್ರಿಪ್ಟೊ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಉತ್ತಮ ಆದಾಯ ಪಡೆಯಬಹುದು ಎಂದು ನಂಬಿಸಿ 53 ವರ್ಷದ ಮಹಿಳೆಯೊಬ್ಬರಿಗೆ ಆಕೆಯ ಫೇಸ್‌ಬುಕ್ 'ಸ್ನೇಹಿತ', ಕಳೆದ ನಾಲ್ಕೂವರೆ ವರ್ಷಗಳಲ್ಲಿ 79 ಲಕ್ಷ ರೂ. ವಂಚಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

"ಜುಬೇರ್ ಶಂಶಾದ್ ಖಾನ್ ಎಂದು ಗುರುತಿಸಲಾದ ಆರೋಪಿ, ಮುಂಬೈನ ಗೋರೆಗಾಂವ್ ನಿವಾಸಿ ಮಹಿಳೆಗೆ ಕ್ರಿಪ್ಟೊಕರೆನ್ಸಿ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ್ದಾನೆ ಮತ್ತು ಹೆಚ್ಚಿನ ಆದಾಯದ ಭರವಸೆ ನೀಡಿದ್ದಾನೆ" ಎಂದು ನವಿ ಮುಂಬೈನ ಖಾರ್ಘರ್ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಹಿಳೆ ಅಕ್ಟೋಬರ್ 2020 ರಿಂದ ಮಾರ್ಚ್ 2025 ರವರೆಗೆ ಹಲವು ವಹಿವಾಟುಗಳಲ್ಲಿ 78,82,684 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಹಿಳೆ ತಾನು ಹೂಡಿಕೆ ಮಾಡಿದ ಬಂಡವಾಳವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.

"ತಾನು ಹೂಡಿಕೆ ಮಾಡಿದ ಹಣ ವಾಪಸ್ ನೀಡುವಂತೆ ಮಹಿಳೆ ಕೇಳಿದಾಗ, ಆರೋಪಿಯು ಆಕೆಗೆ ಹಣ ನೀಡಲು ನಿರಾಕರಿಸಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 15 ರಂದು ಖಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.