ದೇಶ

ಹಮಾಸ್ ಉಗ್ರರಂತೆ ಅಗ್ಗದ ರಾಕೆಟ್ ಬಳಸುತ್ತಿರುವ ಪಾಕ್ ಸೇನೆ: ರಕ್ಷಣಾ ಮೂಲಗಳು

ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ, ಪಾಕಿಸ್ತಾನ ಸೇನೆಯು ಪ್ಯಾಲೆಸ್ತೀನ್ ಉಗ್ರರ ಗುಂಪು ಹಮಾಸ್‌ನಂತೆ ಕಾರ್ಯನಿರ್ವಹಿಸುತ್ತಿದೆ ಮತ್ತು ವರ್ತಿಸುತ್ತಿದೆ ಎಂಬುದು ಕಂಡುಬಂದಿದೆ.

ಹಮಾಸ್ ಉಗ್ರರಂತೆ ಅಗ್ಗದ ರಾಕೆಟ್ ಬಳಸುತ್ತಿರುವ ಪಾಕ್ ಸೇನೆ: ರಕ್ಷಣಾ ಮೂಲಗಳು
ಪಾಕ್ ಕ್ಷಿಪಣಿ ದಾಳಿ ಚಿತ್ರ
Published On :

ನವದೆಹಲಿ: ಭಾರತದ 'ಆಪರೇಷನ್ ಸಿಂಧೂರ' ಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಗುರುವಾರ ರಾತ್ರಿ ಭಾರತದ ಹಲವೆಡೆ ಕ್ಷಿಪಣಿ, ಡ್ರೋನ್ ಹಾಗೂ ಗುಂಡಿನ ದಾಳಿ ನಡೆಸಿದ್ದು, ಹಮಾಸ್ ಉಗ್ರರಂತೆ ದಾಳಿ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ, ಪಾಕಿಸ್ತಾನ ಸೇನೆಯು ಪ್ಯಾಲೆಸ್ತೀನ್ ಉಗ್ರರ ಗುಂಪು ಹಮಾಸ್‌ನಂತೆ ಕಾರ್ಯನಿರ್ವಹಿಸುತ್ತಿದೆ ಮತ್ತು ವರ್ತಿಸುತ್ತಿದೆ ಎಂಬುದು ಕಂಡುಬಂದಿದೆ.

ಏಪ್ರಿಲ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಹಮಾಸ್‌ನೊಂದಿಗೆ ಸಭೆ ನಡೆಸಿತ್ತು ಎಂದು ರಕ್ಷಣಾ ಮೂಲಗಳಿಂದ ತಿಳಿದುಬಂದಿದೆ.

ರಾಜಸ್ಥಾನದ ಜೈಸಲ್ಮಾರ್ ವಾಯುನೆಲೆ ಗುರಿಯಾಗಿಸಿಕೊಂಡು ಪಾಕ್ ಡ್ರೋನ್ ದಾಳಿಗೆ ಯತ್ನಿಸಿದೆ. ಆದರೆ, ಜೈಸಲ್ಮಾರ್ ನಲ್ಲಿನ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯಿಂದ ಪಾಕ್ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ.

ಸತ್ವಾರಿ, ಸಾಂಬಾ, ಆರ್‌ಎಸ್ ಪುರ ಮತ್ತು ಅರ್ನಿಯಾ ಸೆಕ್ಟರ್‌ನಲ್ಲಿ ಪಾಕಿಸ್ತಾನ ಉಡಾಯಿಸಿದ 8 ಕ್ಷಿಪಣಿಗಳನ್ನು ಭಾರತೀಯ ವಾಯು ರಕ್ಷಣಾ ಘಟಕಗಳು ತಡೆದಿವೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.