ದೇಶ

Instagram ಫಾಲೋವರ್ಸ್ ಸಂಖ್ಯೆ ಕುಸಿತ: 25ನೇ ವರ್ಷದ ಹುಟ್ಟುಹಬ್ಬಕ್ಕೂ ಮುನ್ನ ಕಂಟೆಂಟ್ ಕ್ರಿಯೇಟರ್ ಆತ್ಮಹತ್ಯೆ

ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕಡಿಮೆಯಾಗಿರುವುದು ಆಕೆಯನ್ನು ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡಿತ್ತು. ಏಪ್ರಿಲ್ ತಿಂಗಳ ಆರಂಭದಿಂದಲೂ ಆಕೆ ತೀವ್ರ ಒತ್ತಡದಲ್ಲಿದ್ದಳು.

Instagram ಫಾಲೋವರ್ಸ್ ಸಂಖ್ಯೆ ಕುಸಿತ: 25ನೇ ವರ್ಷದ ಹುಟ್ಟುಹಬ್ಬಕ್ಕೂ ಮುನ್ನ ಕಂಟೆಂಟ್ ಕ್ರಿಯೇಟರ್ ಆತ್ಮಹತ್ಯೆ
ಮಿಶಾ ಅಗರ್ ವಾಲ್
Published On :

ಮುಂಬಯಿ: ಸಣ್ಣ ವಯಸ್ಸಿನಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದ ಕಂಟೆಂಟ್‌ ಕ್ರಿಯೇಟರ್‌ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕಡಿಮೆಯಾಗುತ್ತಿದ್ದಾರೆ ಎಂದು ಮಾನಸಿಕ ಖಿನ್ನತೆಗೊಳಗಾಗಿ ಕಂಟೆಂಟ್ ಕ್ರಿಯೇಟರ್ ಮಿಶಾ ಅಗರ್ವಾಲ್ ಸಾವಿಗೆ ಶರಣಾಗಿದ್ದಾರೆ.

ಇದೀಗ ಕುಟುಂಬಸ್ಥರು ಅವರ ಸಾವಿನ ಹಿಂದಿನ ಕಾರಣವನ್ನು ರಿವೀಲ್‌ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾ ಪ್ರಭಾವಿ ಆಗಿ, ರೀಲ್ಸ್‌ ಮೂಲಕ ಹಲವು ಕಂಟೆಂಟ್‌ಗಳನ್ನು ಮಾಡಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಮಿಶಾ ಅಗರ್ವಾಲ್ ಏ.24 ರಂದು ತನ್ನ ಹುಟ್ಟುಹಬ್ಬದ ಎರಡು ದಿನದ ಮುನ್ನ ಪ್ರಾಣ ಕಳೆದುಕೊಂಡಿದ್ದಾರೆ.

ಈ ಕುರಿತು ಮೃತಳ ಸಹೋದರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತನ್ನ 25ನೇ ಹುಟ್ಟುಹಬ್ಬ ಸಮೀಪಿಸುತ್ತಿರುವಾಗ ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕಡಿಮೆಯಾಗಿರುವುದು ಆಕೆಯನ್ನು ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡಿತ್ತು. ಏಪ್ರಿಲ್ ತಿಂಗಳ ಆರಂಭದಿಂದಲೂ ಆಕೆ ತೀವ್ರ ಒತ್ತಡದಲ್ಲಿದ್ದಳು. 1 ಮಿಲಿಯನ್ ಫಾಲೋವರ್ಸ್ ಗಳಿಸಬೇಕೆನ್ನುವುದು ಆಕೆಯ ಗುರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫಾಲೋವರ್ಸ್ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಇದೇ ಬೇಸರದಿಂದ ಆತ್ಮಹತ್ಯೆ ಶರಣಾಗಿದ್ದಾ

ಮಿಶಾ ಸೋಶಿಯಲ್‌ ಮೀಡಿಯಾದಲ್ಲೇ ತನ್ನ ಕೆರಿಯರ್‌ ಕಂಡುಕೊಂಡಿದ್ದಳು. ಇನ್ಸ್ಟಾಗ್ರಾಮ್‌ ಕಂಟೆಂಟ್‌ಗಳೇ ಅವಳ ಕೆರಿಯರ್‌ ಬಿಲ್ಡ್‌ ಮಾಡಿತ್ತು. 1 ಮಿಲಿಯನ್‌ ಫಾಲೋವರ್ಸ್‌ಗಳನ್ನು ತಲುಪಬೇಕೆನ್ನುವ ದೊಡ್ಡ ಕನಸು ಮಿಶಾಗಿತ್ತು. ಪ್ರತಿನಿತ್ಯ ಹೇಗೆ ತಾನು ಅಧಿಕ ಫಾಲೋವರ್ಸ್‌ಗಳನ್ನು ಪಡೆಯಬೇಕೆನ್ನುವ ಬಗ್ಗೆ ಮಾತನಾಡುತಿದ್ದಳು.

ಆದರೆ ಏಪ್ರಿಲ್‌ ತಿಂಗಳಿನಿಂದ ಅವಳ ಇನ್ಸ್ಟಾಗ್ರಾಮ್‌ ಖಾತೆಯ ಫಾಲೋವರ್ಸ್‌ಗಳು ಕಡಿಮೆ ಆಗುತ್ತಾ ಬಂದಿತ್ತು. ಇದರಿಂದ ಮಿಶಾ ಖಿನ್ನತೆಗೆ ಒಳಗಾಗಿದ್ದಳು. ಫಾಲೋವರ್ಸ್‌ಗಳು ಕಡಿಮೆ ಆದರೆ ಏನು ಮಾಡಬೇಕೆಂದು ಹೇಳಿ ದುಃಖಿಸುತ್ತಿದ್ದಳು. ಫಾಲೋವರ್ಸ್‌ಗಳು ಕಡಿಮೆ ಆದದ್ದಕ್ಕೆ ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಪೋಸ್ಟ್‌ ಮೂಲಕ ಹೇಳಿದ್ದಾರೆ. ಮಿಶಾಳ ಮೊಬೈಲ್‌ ವಾಲ್‌ಪೇಪರ್‌ನಲ್ಲೂ 1 ಮಿಲಿಯನ್‌ ಫಾಲೋವರ್ಸ್‌ ಆಗುತ್ತದೆ ಎನ್ನುವ ಸ್ಕ್ರೀನ್‌ ಶಾಟ್‌ ಹಾಕಿಕೊಂಡಿದ್ದಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.