ದೇಶ

ಕ್ಷಮೆ ಕೇಳಲು ಕುನಾಲ್ ಕಾಮ್ರಾ ನಿರಾಕರಣೆ: ಸರಿಯಾದ ನಿರ್ಧಾರ ಎಂದ ಕಾಂಗ್ರೆಸ್!

ಯಾರೊಬ್ಬರು ನಗಿಸುವುದಕ್ಕಾಗಿ ಹಾಸ್ಯ ಮಾಡಿದ್ದರೆ ಸರ್ಕಾರ ನಗಬೇಕಿತ್ತು. ನಿಮ್ಮ ನಾಯಕರ ಬಗ್ಗೆ ಇನ್ನಷ್ಟು ಅವಹೇಳನಕಾರಿ ಮಾತುಗಳನ್ನಾಡಿದ್ದು, ವಾಕ್ ಸ್ವಾತಂತ್ರ್ಯ ಎಂದು ಕಂಗನಾ ರಣಾವತ್ ಹೇಳುತ್ತಾರೆ.

ಕ್ಷಮೆ ಕೇಳಲು ಕುನಾಲ್ ಕಾಮ್ರಾ ನಿರಾಕರಣೆ: ಸರಿಯಾದ ನಿರ್ಧಾರ ಎಂದ ಕಾಂಗ್ರೆಸ್!
ಕುನಾಲ್ ಕಾಮ್ರಾ, ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್
Published On :

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆಗೆ ಕ್ಷಮೆ ಯಾಚಿಸಲು ಸ್ಟ್ಯಾಂಡ್ ಅಪ್ ಕಾಮಿಡಿಯಿನ್ ಕುನಾಲ್ ಕಾಮ್ರಾ ಕುನಾಲ್ ಕಮ್ರಾ ನಿರಾಕರಿಸಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್, ಕಾಮ್ರಾ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಹೀಗಾಗಿ ಕ್ಷಮೆಯಾಚಿಸದಿರಲು ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದರು.

ಹ್ಯಾಬಿಟೆಟ್ ಸೆಂಟರ್ ಧ್ವಂಸವನ್ನು ಟೀಕಿಸಿದ ವಡೆತ್ತಿವಾರ್, ಹೋಟೆಲ್ ಧ್ವಂಸ ಹಾಗೂ ಯಾವುದೇ ವ್ಯಕ್ತಿಯ ಧ್ವನಿಯನ್ನು ಅಡಗಿಸುವುದು ಸರಿಯಲ್ಲ. ಒಂದು ವೇಳೆ ತಪ್ಪಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಿ. ಆದರೆ, ಹೀಗೆ ಧ್ವಂಸಗೊಳಿಸುವ ಕೃತ್ಯ, ಧ್ವನಿಯನ್ನು ಅಡಗಿಸುವುದು ಸರಿಯಲ್ಲ. ಸರ್ಕಾರ ಟೀಕೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಯಾರೊಬ್ಬರು ನಗಿಸುವುದಕ್ಕಾಗಿ ಹಾಸ್ಯ ಮಾಡಿದ್ದರೆ ಸರ್ಕಾರ ನಗಬೇಕಿತ್ತು. ನಿಮ್ಮ ನಾಯಕರ ಬಗ್ಗೆ ಇನ್ನಷ್ಟು ಅವಹೇಳನಕಾರಿ ಮಾತುಗಳನ್ನಾಡಿದ್ದು, ವಾಕ್ ಸ್ವಾತಂತ್ರ್ಯ ಎಂದು ಕಂಗನಾ ರಣಾವತ್ ಹೇಳುತ್ತಾರೆ. ಕ್ಷಮೆಯಾಚಿಸಲು ಕುನಾಲ್ ಕಾಮ್ರಾ ಅವರ ನಿರ್ಧಾರ ಸರಿಯಾದದ್ದು ಎಂದರು.

ಕುನಾಲ್ ಕಾಮ್ರಾ ಯಾರೊಬ್ಬರ ಹೆಸರನ್ನು ತೆಗೆದುಕೊಂಡಿಲ್ಲ. ಕಾನೂನನ್ನು ಯಾರೂ ಗೌರವಿಸುತ್ತಿಲ್ಲ. ಇಂತಹ ಸರ್ಕಾರ ಹೆಚ್ಚು ದಿನ ಇರಲು ಸಾಧ್ಯವಿಲ್ಲ. ಒಂದು ಅಥವಾ ಇನ್ನೊಂದು ದಿನ ಜನರು ಆಕ್ರೋಶಗೊಳ್ಳುತ್ತಾರೆ ಮತ್ತು ಸರ್ಕಾರ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

ಇತ್ತೀಚಿನ ವಿವಾದದ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಸುಧೀರ್ ಮುಂಗಂಟಿವಾರ್, ಈ ವಿಷಯದಲ್ಲಿ ಕಾನೂನು ಪ್ರಕ್ರಿಯೆಯು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.