'ನಿನ್ನ ಕಾಲಿಗೆ ಬೀಳ್ತೀನಿ ಹೋಗ್ಬೇಡಮ್ಮ': ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳ ಕಾಲಿಗೆ ಬಿದ್ದು ಅಂಗಲಾಚಿದ ತಂದೆ, Video Viral
ಪ್ರೀತಿ ಎಂಬ ಮಾಯೆಗೆ ಬಿದ್ದ ಯುವಜನರು ತಂದೆತಾಯಂದಿರನ್ನೂ ದಿಕ್ಕರಿಸಿ ಪ್ರೇಮಿಗಳ ಜೊತೆ ಓಡಿ ಹೋಗುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಎಲ್ಲವೂ ಸರಿಇದ್ದರೂ ಸಂಸಾರ ಎಂದು ಬಂದಾಗ ನಾನಾ ರೀತಿಯ ಕಷ್ಟ ಪಡುತ್ತಾರೆ.

ಚೆನ್ನೈ: ಅವನು ಸರಿಯಿಲ್ಲ.. ನಿನ್ನ ದುಡಿಮೆ ಮೇಲೆ ಬದುಕುತ್ತಾನೆ..ನಿನ್ನ ಸುಖವಾಗಿ ನೋಡಿಕೊಳ್ಳಲ್ಲ.. ಕಾಲಿಗೆ ಬೇಕಾದರೂ ಬೀಳುತ್ತೇನೆ.. ಹೋಗಬೇಡಮ್ಮ.. ಇದು ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳಿಗೆ ಅಸಾಹಯಕ ತಂದೆಯೋರ್ವ ಅಂಗಲಾಚುತ್ತಿರುವ ಪರಿ..
ಹೌದು.. ಪ್ರೀತಿ ಎಂಬ ಮಾಯೆಗೆ ಬಿದ್ದ ಯುವಜನರು ತಂದೆತಾಯಂದಿರನ್ನೂ ದಿಕ್ಕರಿಸಿ ಪ್ರೇಮಿಗಳ ಜೊತೆ ಓಡಿ ಹೋಗುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಎಲ್ಲವೂ ಸರಿಇದ್ದರೂ ಸಂಸಾರ ಎಂದು ಬಂದಾಗ ನಾನಾ ರೀತಿಯ ಕಷ್ಟ ಪಡುತ್ತಾರೆ. ಆ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದವರು ಸಕ್ಸಸ್ ಫುಲ್ ಜೋಡಿಯಾದರೆ, ಆ ಕಷ್ಟಗಳನ್ನು ಎದುರಿಸಲಾಗದೇ ಕೆಲವರು ದೂರಾಗುತ್ತಾರೆ. ಆದರೆ ಈ ಹಂತದಲ್ಲಿ ಮಕ್ಕಳ ಕಳೆದುಕೊಂಡು ಕೊರಗುವವರು ಮಾತ್ರ ಪೋಷಕರು.
ಅಂತಹುದೇ ಒಂದು ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾದ ಮಗಳ ಕಾಲಿಗೆ ಬಿದ್ದು, ನಮ್ಮನ್ನ ಬಿಟ್ ಹೋಗ್ಬೇಡ ಮಗಳೇ ಎಂದು ತಂದೆಯೋರ್ವ ಗೋಗರೆದಿದ್ದಾರೆ. ಯುವತಿಯೊಬ್ಬಳು ನಡು ರಾತ್ರಿಯಲ್ಲಿ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿದ್ದಾಳೆ.
ಆ ಸಂದರ್ಭದಲ್ಲಿ ಅಸಹಾಯಕ ತಂದೆ ಮಗಳ ಕಾಲಿಗೆ ಬಿದ್ದು, ದಯವಿಟ್ಟು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಗೋಗರೆದಿದ್ದಾರೆ. ಇಲ್ಲಿ ಅಪ್ಪ ತನಗೆ ಮಗಳು ಬೇಕೆಂದು ಬಯಸಿದರೆ, ಮಗಳು ಮಾತ್ರ ಹೆತ್ತು-ಹೊತ್ತು ಸಾಕಿ ಸಲಹಿದ ತಂದೆ ತಾಯಿಯನ್ನೇ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾಗಿದ್ದಾಳೆ. ಈ ನಾಟಕೀಯ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಗಳು ತನ್ನ ಗೆಳೆಯನೊಂದಿಗೆ ನಡು ರಾತ್ರಿ ಓಡಿ ಹೋಗಲು ಯತ್ನಿಸಿದಾಗ, ಕಣ್ಣೀರಿಡುತ್ತಾ ಆಕೆಯ ಹಿಂದೆಯೇ ಬಂದ ತಂದೆ ಮಗಳ ಕಾಲಿಗೆ ಬಿದ್ದು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಬೇಡಿಕೊಂಡಿದ್ದಾರೆ. ಈ ಮನಕಲಕುವ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.
ಶಾರ್ಟ್ ಫಿಲ್ಮ್ ಚಿತ್ರೀಕರಣ
ಇಷ್ಟಕ್ಕೂ ಇದು ನೈಜ ಘಟನೆಯೇ ಅಥವಾ ಸ್ಕ್ರಿಪ್ಟೆಡ್ ವಿಡಿಯೋನಾ? ಎಂದು ಕೆಲವರು ಪ್ರಶ್ನೆಗಳನ್ನು ಎತ್ತಿದ್ದು, ಇದಕ್ಕೆ ಉತ್ತರ ಇದೊಂದು ಸ್ಕ್ರಿಪ್ಟೆಡ್ ವಿಡಿಯೋ.. ಹೌದು.. ತಮಿಳುನಾಡಿನಲ್ಲಿ ನಡೆದ ಘಟನೆಯ ಈ ವಿಡಿಯೋವನ್ನು ಪರಿಶೀಲಿಸಿದಾಗ ಇದು ನೈಜ ಘಟನೆಯಲ್ಲ ಬದಲಿಗೆ ಇದೊಂದು ಶಾರ್ಟ್ ಫಿಲ್ಮ್ ಎಂಬುದು ತಿಳಿದು ಬಂದಿದೆ. ಈ ಕುರಿತ ವಿಡಿಯೋವನ್ನು UttarandhraNow ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಮಾರ್ಚ್ 22 ರಂದು ಶೇರ್ ಮಾಡಲಾದ ಈ ವಿಡಿಯೋ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜವಲ್ಲ, ಕಿರು ಚಿತ್ರವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದೆ. ಇನ್ನೊಬ್ಬ ಬಳಕೆದಾರರು ʼಸಾಕಿ ಸಲುಹಿದ ತಂದೆ-ತಾಯಿಯೇ ಬೇಡವಾದರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸ್ಕ್ರಿಪ್ಟೆಡ್ ವಿಡಿಯೋʼ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



