ದೇಶ

8 ಲಕ್ಷ ಕೋಟಿ ರೂ ಕ್ರಿಪ್ಟೋ ವಂಚನೆ: ಅಮೇರಿಕಾಗೆ ಬೇಕಿದ್ದ ವ್ಯಕ್ತಿ ಕೇರಳದಲ್ಲಿ ಬಂಧನ

ಬೆಸಿಯೊಕೊವ್, ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

8 ಲಕ್ಷ ಕೋಟಿ ರೂ ಕ್ರಿಪ್ಟೋ ವಂಚನೆ: ಅಮೇರಿಕಾಗೆ ಬೇಕಿದ್ದ ವ್ಯಕ್ತಿ ಕೇರಳದಲ್ಲಿ ಬಂಧನ
ಅಲೆಕ್ಸೆಜ್ ಬೆಸಿಯೊಕೊವ್ — online desk
Published On :

ನವದೆಹಲಿ: ಅಮೆರಿಕದಲ್ಲಿ ಬೃಹತ್ ಕ್ರಿಪ್ಟೋಕರೆನ್ಸಿ ವಂಚನೆಗಾಗಿ ಬೇಕಾಗಿದ್ದ ಲಿಥುವೇನಿಯಾದ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಅಲೆಕ್ಸೆಜ್ ಬೆಸಿಯೊಕೊವ್, ರಾನ್ಸಮ್‌ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು 'ಗ್ಯಾರಂಟೆಕ್ಸ್' ಎಂಬ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದ.

ಬೆಸಿಯೊಕೊವ್, ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಎಸ್ ಸೀಕ್ರೆಟ್ ಸರ್ವಿಸ್ ದಾಖಲೆಗಳ ಪ್ರಕಾರ, ಬೆಸಿಯೊಕೊವ್ ಸುಮಾರು ಆರು ವರ್ಷಗಳ ಅವಧಿಯಲ್ಲಿ ಗ್ಯಾರಂಟೆಕ್ಸ್ ನ್ನು ನಿಯಂತ್ರಿಸಿ ನಿರ್ವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇದು ಅಂತರರಾಷ್ಟ್ರೀಯ ಕ್ರಿಮಿನಲ್ ಸಂಘಟನೆಗಳಿಂದ (ಭಯೋತ್ಪಾದಕ ಸಂಘಟನೆಗಳು ಸೇರಿದಂತೆ) ಕನಿಷ್ಠ $96 ಬಿಲಿಯನ್ (ರೂ. 8 ಲಕ್ಷ ಕೋಟಿಗೂ ಹೆಚ್ಚು) ಕ್ರಿಪ್ಟೋಕರೆನ್ಸಿ ವಹಿವಾಟುಗಳಲ್ಲಿ ಹಣ ವರ್ಗಾವಣೆಗೆ ಅನುಕೂಲ ಮಾಡಿಕೊಟ್ಟು ನಿರ್ಬಂಧಗಳನ್ನು ಉಲ್ಲಂಘಿಸಿದೆ.

"ಗ್ಯಾರಂಟೆಕ್ಸ್ ನೂರಾರು ಮಿಲಿಯನ್ ಕ್ರಿಮಿನಲ್ ಆದಾಯವನ್ನು ಪಡೆಯಿತು ಮತ್ತು ಹ್ಯಾಕಿಂಗ್, ರಾನ್ಸಮ್‌ವೇರ್, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧಗಳನ್ನು ಸುಗಮಗೊಳಿಸಲು ಬಳಸಲಾಗುತ್ತಿತ್ತು, ಇದು ಸಾಮಾನ್ಯವಾಗಿ ಯುಎಸ್ ಸಂತ್ರಸ್ತರ ಮೇಲೆ ಗಣನೀಯ ಪರಿಣಾಮ ಬೀರುತ್ತದೆ" ಎಂದು ಅದು ಹೇಳಿದೆ.

ಬೆಸ್ಸಿಯೊಕೋವ್ ಗ್ಯಾರೆಂಟೆಕ್ಸ್‌ನ ಪ್ರಾಥಮಿಕ ತಾಂತ್ರಿಕ ನಿರ್ವಾಹಕರಾಗಿದ್ದರು ಮತ್ತು ವೇದಿಕೆಯ ನಿರ್ಣಾಯಕ ಮೂಲಸೌಕರ್ಯವನ್ನು ಪಡೆಯುವುದು ಮತ್ತು ನಿರ್ವಹಿಸುವುದು ಹಾಗೂ ವಹಿವಾಟುಗಳನ್ನು ಪರಿಶೀಲಿಸುವುದು ಮತ್ತು ಅನುಮೋದಿಸುವ ಜವಾಬ್ದಾರಿಯನ್ನು ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಸ್ ನಿಯಮ ಉಲ್ಲಂಘಿಸಿ ಹಣ ವರ್ಗಾವಣೆ ಮಾಡಲು ಪಿತೂರಿ, ಯುಎಸ್ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಉಲ್ಲಂಘಿಸಲು ಪಿತೂರಿ ಮತ್ತು ಪರವಾನಗಿ ಪಡೆಯದ ಹಣ ಸೇವೆಗಳ ವ್ಯವಹಾರವನ್ನು ನಡೆಸಲು ಪಿತೂರಿ ಸೇರಿದಂತೆ ಹಲವು ಆರೋಪಗಳ ಮೇಲೆ ಬಂಧಿತ ವ್ಯಕ್ತಿ ಯುಎಸ್‌ಗೆ ಬೇಕಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.