ಈಗ, ಬಿಹಾರದಲ್ಲಿ ಪ್ರಿಯಕರನ ಸಹಾಯದಿಂದ ಪತಿ ಹತ್ಯೆ ಮಾಡಿದ ಪತ್ನಿ, ಬಂಧನ
"ಜೂನ್ 25 ರಂದು ಮಹಿಳೆಯನ್ನು ಬಂಧಿಸಲಾಗಿದೆ ಮತ್ತು ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ಸಂಚನ್ನು ಮಹಿಳೆ ಮತ್ತು ಅವಳ ಪ್ರೇಮಿ ಇಬ್ಬರೂ ಕಾರ್ಯಗತಗೊಳಿಸಿದ್ದಾರೆ"

ಔರಂಗಾಬಾದ್: ಮೇಘಾಲಯದ ಹನಿಮೂನ್ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಬಿಹಾರದ ಔರಂಗಾಬಾದ್ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಜೂನ್ 25 ರಂದು ಬಂದೇಯಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೌನಾ ಗ್ರಾಮದ ಹೊಲದಲ್ಲಿ ಪತಿ ಬಿಕ್ಕುವಿನ ಶವ ಪತ್ತೆಯಾದ ನಂತರ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ದೌದ್ನಗರ(ಔರಂಗಾಬಾದ್) ಉಪ-ವಿಭಾಗೀಯ ಪೊಲೀಸ್ ಅಧಿಕಾರಿ(SDPO) ಕುಮಾರ್ ರಿಷಿರಾಜ್, "ಜೂನ್ 21 ರಂದು ಪತ್ತೆಯಾಗಿರುವ ಶವದಲ್ಲಿ ಗಾಯದ ಗುರುತುಗಳಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆ ಮತ್ತು ಮೃತ ಕುಟುಂಬ ಸದಸ್ಯರ ಹೇಳಿಕೆಗಳ ಪ್ರಕಾರ ಬಿಕ್ಕುವನ್ನು ಕೊಲೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಮೃತನ ಪತ್ನಿ ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ತನಿಖಾ ತಂಡಕ್ಕೆ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
"ಜೂನ್ 25 ರಂದು ಮಹಿಳೆಯನ್ನು ಬಂಧಿಸಲಾಗಿದೆ ಮತ್ತು ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ಸಂಚನ್ನು ಮಹಿಳೆ ಮತ್ತು ಅವಳ ಪ್ರೇಮಿ ಇಬ್ಬರೂ ಕಾರ್ಯಗತಗೊಳಿಸಿದ್ದಾರೆ" ಎಂದು SDPO ತಿಳಿಸಿದ್ದಾರೆ.
ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆ ಪ್ರಿಯಕರನನ್ನು ಬಂಧಿಸಲು ಶೋಧ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



