ತೆಲಂಗಾಣ: ಹಣಕ್ಕಾಗಿ ಲೈಂಗಿಕ ಚಟುವಟಿಕೆಯ live streaming! ಖತರ್ನಾಕ್ ದಂಪತಿಯ ಬಂಧನ
ಲೈವ್ ಲಿಂಕ್ ವೀಕ್ಷಿಸಲು ಗ್ರಾಹಕರಿಗೆ ಶುಲ್ಕ ವಿಧಿಸಲಾಗುತಿತ್ತು.

ತೆಲಂಗಾಣ: ಆಘಾತಕಾರಿ ಘಟನೆಯೊಂದರಲ್ಲಿ ಹಣಕ್ಕಾಗಿ ಮೊಬೈಲ್ ಆ್ಯಪ್ ನಲ್ಲಿ ಲೈಂಗಿಕ ಚಟುವಟಿಕೆಯ ಲೈವ್ ಸ್ಟ್ರೀಮಿಂಗ್ ಆರೋಪದ ಮೇಲೆ ಖತರ್ನಾಕ್ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಲೈವ್ ಲಿಂಕ್ ವೀಕ್ಷಿಸಲು ಗ್ರಾಹಕರಿಗೆ ಶುಲ್ಕ ವಿಧಿಸಲಾಗುತಿತ್ತು. ಲೈವ್ ಸ್ಟ್ರೀಮ್ ಸಮಯದಲ್ಲಿ ವೃತ್ತಿಯಲ್ಲಿ ಕಾರ್ ಡ್ರೈವರ್ ಆಗಿರುವ ವ್ಯಕ್ತಿ (41) ಮತ್ತು ಅವರ ಪತ್ನಿ (37) ತಮ್ಮ ಗುರುತನ್ನು ಮರೆಮಾಚಲು ಮಾಸ್ಕ್ ಧರಿಸಿದ್ದರು ಎಂದು ವರದಿಯಾಗಿದೆ.
ಲೈವ್ ಲಿಂಕ್ ವೀಕ್ಷಿಸಲು ರೂ.2,000 ಶುಲ್ಕ ವಿಧಿಸಲಾಗುತಿತ್ತು. ರೆಕಾರ್ಡ್ ಮಾಡಿದ ವಿಡಿಯೋಗಳಿಗೆ ರೂ. 500 ಶುಲ್ಕ ವಿಧಿಸುತ್ತಿದ್ದರು. ಅಲ್ಲದೇ ತಮ್ಮ ವಿಡಿಯೋಗಳನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಹಣ ತೆಗೆದುಕೊಂಡು ಗ್ರಾಹಕರಿಗೆ ಲಿಂಕ್ ಕಳುಹಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಈ ದಂಪತಿ ತಮ್ಮ ನಗ್ನ ವಿಡಿಯೋಗಳನ್ನು ಇನ್ಸಾಟಾಗ್ರಾಂ ಮತ್ತಿತರ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ 'ಸ್ವೀಟ್ ತೆಲುಗು ಕಪಲ್ 2027 'ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ದೊರೆತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದು, ದಂಪತಿ ಬಂಧಿಸಲಾಗಿದೆ. ದಾಳಿ ವೇಳೆಯಲ್ಲಿ ಲೈವ್ ಲಿಂಕ್ ಹಂಚಿಕೆಗೆ ಬಳಸಲಾದ ಕ್ಯಾಮರಾಗಳು, ಲೈವ್ ಸ್ಟ್ರೀಮಿಂಗ್ ಸಾಧನಗಳು, ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯದಲ್ಲಿ ತೊಡಗಿದ್ದಾಗಿ ದಂಪತಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



