ನಟಿ ಜೊತೆ BJP ಮಾಜಿ ಶಾಸಕ 2ನೇ ವಿವಾಹ Uttarakhand UCC ಗೆ ವಿರುದ್ಧ; ಪಕ್ಷದಿಂದ ಶೋಕಾಸ್ ನೋಟಿಸ್
ಮಾಜಿ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಸಹರಾನ್‌ಪುರ ನಟಿ ಊರ್ಮಿಳಾ ಸನಾವರ್ ಅವರೊಂದಿಗಿನ ಎರಡನೇ ವಿವಾಹದ ಕುರಿತು ಪ್ರಶ್ನೆಗಳು ಎದ್ದಿವೆ. ಅಲ್ಲದೆ ಈ ಸಂಬಂಧ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ.

ಮಾಜಿ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಸಹರಾನ್‌ಪುರ ನಟಿ ಊರ್ಮಿಳಾ ಸನಾವರ್ ಅವರೊಂದಿಗಿನ ಎರಡನೇ ವಿವಾಹದ ಕುರಿತು ಪ್ರಶ್ನೆಗಳು ಎದ್ದಿವೆ. ಅಲ್ಲದೆ ಈ ಸಂಬಂಧ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಥೋಡ್, ಕಾಂಗ್ರೆಸ್ ವೀಡಿಯೊಗಳನ್ನು ಬಿಡುಗಡೆ ಮಾಡಲು ಬಯಸಿದರೆ, ಅದು ಎನ್‌ಡಿ ತಿವಾರಿ, ಹರಕ್ ಸಿಂಗ್ ರಾವತ್ ಮತ್ತು ಹರೀಶ್ ರಾವತ್ ಅವರಂತಹ ನಾಯಕರ ವಿಡಿಯೋವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಸುರೇಶ್ ರಾಥೋಡ್ ನಟಿ ಊರ್ಮಿಳಾ ಸನವರ್ ಅವರೊಂದಿಗಿನ ಸಂಬಂಧದ ಬಗ್ಗೆ ಹಲವು ತಿಂಗಳುಗಳಿಂದ ಮುಜುಗರವನ್ನು ಎದುರಿಸುತ್ತಿದ್ದರು. ದೀರ್ಘ ಆರೋಪಗಳು ಮತ್ತು ಮೊಕದ್ದಮೆಗಳ ನಂತರ, ಕಳೆದ ವಾರ ಸುರೇಶ್ ರಾಥೋಡ್ ಮತ್ತು ಊರ್ಮಿಳಾ ಸನವರ್ ಸಹರಾನ್‌ಪುರದಲ್ಲಿ ಮಾಧ್ಯಮಗಳ ಮುಂದೆ ಬಂದು ಊರ್ಮಿಳಾ ಸುರೇಶ್ ರಾಥೋಡ್ ಅವರು ತನ್ನನ್ನು ಪತ್ನಿಯಾಗಿ ಸ್ವೀಕರಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ಈ ಸಂಬಂಧ ವಿರೋಧ ಪಕ್ಷ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿಯ ಮೇಲೆ ದಾಳಿ ನಡೆಸಿತ್ತು. ಶಾಸಕರ ಎರಡನೇ ವಿವಾಹವು ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆಗೆ ವಿರುದ್ಧವಾಗಿದೆ ಎಂದು ಕರೆದಿದೆ.
ಅದೇ ಸಮಯದಲ್ಲಿ, ಬಿಜೆಪಿ ಸುರೇಶ್ ರಾಥೋಡ್ ಗೆ ನೋಟಿಸ್ ನೀಡಿ 7 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಮಾಜಿ ಶಾಸಕ ಮತ್ತು ನಟಿ ಊರ್ಮಿಳಾ ಸನಾವರ್ ನಡುವಿನ ದೀರ್ಘಕಾಲದ ಸಂಬಂಧ ಸಾರ್ವಜನಿಕಗೊಂಡ ನಂತರ ಈ ವಿವಾದ ಹುಟ್ಟಿಕೊಂಡಿತು. ರಾಥೋಡ್ ಇತ್ತೀಚೆಗೆ ಸನಾವರ್ ಅವರನ್ನು ವಿವಾಹವಾಗಿದ್ದು ಅದರ ವಿಡಿಯೋಗಳು ಇದೀಗ ವೈರಲ್ ಆಗಿದೆ.

ಜಾಮೀನು ಸಿಕ್ಕರೂ 28 ದಿನ ಜೈಲುವಾಸ: ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ; 5 ಲಕ್ಷ ರೂ ಪರಿಹಾರಕ್ಕೆ ಆದೇಶ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


