ದೇಶ

ಇಸ್ರೇಲ್ ಜತೆ ಯುದ್ಧ ಎಂಟನೇ ದಿನಕ್ಕೆ: ಸಾವಿರ ಭಾರತೀಯರ ಸ್ಥಳಾಂತರಕ್ಕೆ ವಾಯುಪ್ರದೇಶ ನಿರ್ಬಂಧ ಸಡಿಲಿಸಿದ ಇರಾನ್

ಮೊದಲ ವಿಮಾನ ಶುಕ್ರವಾರ ರಾತ್ರಿ 11:30 ಕ್ಕೆ ಭಾರತಕ್ಕೆ ಆಗಮಿಸಲಿದೆ. ಉಳಿದ ಎರಡು ವಿಮಾನಗಳು ಶನಿವಾರ ಲ್ಯಾಂಡ್ ಆಗಲಿವೆ.

ಇಸ್ರೇಲ್ ಜತೆ ಯುದ್ಧ ಎಂಟನೇ ದಿನಕ್ಕೆ: ಸಾವಿರ ಭಾರತೀಯರ ಸ್ಥಳಾಂತರಕ್ಕೆ ವಾಯುಪ್ರದೇಶ ನಿರ್ಬಂಧ ಸಡಿಲಿಸಿದ ಇರಾನ್
ಟೆಹ್ರಾನ್‌ನಲ್ಲಿ ಇಸ್ರೇಲಿ ದಾಳಿಗೆ ತುತ್ತಾದ ಕಟ್ಟಡದ ಸ್ಥಳದಲ್ಲಿ ಭಗ್ನಾವಶೇಷಗಳು. — Photo | AFP
Published On :

ನವದೆಹಲಿ: ಇಸ್ರೇಲ್ ಜೊತೆಗಿನ ಯುದ್ಧ ಶುಕ್ರವಾರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಇರಾನ್ ತನ್ನ ವಾಯುಪ್ರದೇಶದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ.

ಇರಾನ್ ಅಧಿಕಾರಿಗಳ ವಿಶೇಷ ಸೂಚನೆ ಎಂದು ವಿವರಿಸಲಾದ ಈ ನಿರ್ಧಾರವು, ಭಾರತವು ತನ್ನ ನಾಗರಿಕರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ತುರ್ತು ಸ್ಥಳಾಂತರಕ್ಕೆ ವಿಮಾನಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಇರಾನ್‌ನ ಮಹನ್ ಏರ್ ನಿರ್ವಹಿಸುವ ಮೂರು ವಿಶೇಷ ವಿಮಾನಗಳು ಈಶಾನ್ಯ ಇರಾನಿನ ನಗರವಾದ ಮಶಾದ್‌ನಿಂದ ನವದೆಹಲಿಗೆ ಸುಮಾರು 1,000 ಭಾರತೀಯ ಪ್ರಜೆಗಳನ್ನು ಕರೆತರಲಿವೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಮೊದಲ ವಿಮಾನ ಶುಕ್ರವಾರ ರಾತ್ರಿ 11:30 ಕ್ಕೆ ಭಾರತಕ್ಕೆ ಆಗಮಿಸಲಿದೆ. ಉಳಿದ ಎರಡು ವಿಮಾನಗಳು ಶನಿವಾರ ಲ್ಯಾಂಡ್ ಆಗಲಿವೆ. ಒಂದು ನಾಳೆ ಬೆಳಗ್ಗೆ 10:00 ಗಂಟೆಗೆ ಮತ್ತು ಇನ್ನೊಂದು ನಾಳೆ ಸಂಜೆ 4:30ಕ್ಕೆ ದೆಹಲಿಗೆ ಬರಲಿದೆ.

ತಮ್ಮ ದೇಶದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಪ್ರಸ್ತುತ ಸುರಕ್ಷಿತವಾಗಿದ್ದಾರೆ ಎಂದು ಇರಾನ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಗತ್ಯವಿದ್ದರೆ ಸ್ಥಳಾಂತರಕ್ಕೆ ಹೆಚ್ಚಿನ ವಿಮಾನಗಳ ವ್ಯವಸ್ಥೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಆಪರೇಷನ್ ಸಿಂಧು ಕಾರ್ಯಾಚರಣೆ ಅಡಿ ಭಾರತ, ಇರಾನ್ ನಿಂದ ಭಾರತೀಯರನ್ನು ಕರೆತರುತ್ತಿದ್ದು, ಈಗಾಗಲೇ 110 ಭಾರತೀಯ ವಿದ್ಯಾರ್ಥಿಗಳನ್ನು ಇರಾನ್‌ನಿಂದ ಯಶಸ್ವಿಯಾಗಿ ಕರೆತಂದಿದೆ.

ಯುದ್ಧ ಪೀಡಿತ ಇರಾನ್ ನಲ್ಲಿರುವ ವಿದ್ಯಾರ್ಥಿಗಳನ್ನು ಮೊದಲು ಅರ್ಮೇನಿಯಾಗೆ ಸ್ಥಳಾಂತರಿಸಲಾಯಿತು, ನಂತರ ದೋಹಾಗೆ ವಿಮಾನದಲ್ಲಿ ಕರೆದೊಯ್ಯಲಾಯಿತು ಮತ್ತು ಅಂತಿಮವಾಗಿ ಗುರುವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.