ಜರ್ಮನಿಯಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ನಾಪತ್ತೆ!
ಬಿಲಾಸ್‌ಪುರ ಜಿಲ್ಲೆಯ ಕಂಡ್ರೂರ್ ಕಸ್ವಾ ಪ್ರದೇಶದದ ಆರ್ಯನ್, 2024 ರಿಂದ ಜರ್ಮನಿಯ ಮ್ಯೂನಿಚ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮಗ ನಾಪತ್ತೆಯಾಗಿದ್ದಾರೆ

ನವದೆಹಲಿ: ಜರ್ಮನಿಯಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ಆತನ ಕುಟುಂಬ ಗುರುವಾರ ಗುರುವಾರ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮತ್ತು ಸಚಿವ ರಾಜೇಶ್ ಧರ್ಮಾನಿ ಅವರನ್ನು ಸಂಪರ್ಕಿಸಿದ್ದು, ಸಾಧ್ಯವಿರುವ ಎಲ್ಲ ನೆರವಿಗಾಗಿ ಜರ್ಮನ್ ಸರ್ಕಾರವನ್ನು ಸಂಪರ್ಕಿಸಲು ವಿದೇಶಾಂಗ ಸಚಿವಾಲಯ ಸಂಪರ್ಕಿಸುವಂತೆ ಕೋರಿದೆ.
ಬಿಲಾಸ್‌ಪುರ ಜಿಲ್ಲೆಯ ಕಂಡ್ರೂರ್ ಕಸ್ವಾ ಪ್ರದೇಶದದ ಆರ್ಯನ್, 2024 ರಿಂದ ಜರ್ಮನಿಯ ಮ್ಯೂನಿಚ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮಗ ನಾಪತ್ತೆಯಾಗಿದ್ದಾರೆ ಎಂದು ಆರ್ಯನ್ ತಂದೆ ವಿಚಿತ್ರಾ ಸಿಂಗ್ ಚಾಂಡೆಲ್ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ 1.30ರ ಸುಮಾರಿಗೆ ಸರೋವರವೊಂದಕ್ಕೆ ಈಜಲು ಹೋಗಿದ್ದ ಆರ್ಯನ್ ಅಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆರ್ಯನ್ ನುರಿತ ಈಜುಗಾರರಾಗಿದ್ದರು ಎಂದು ಜರ್ಮನಿಯಲ್ಲಿರುವ ಅವರ ಪರಿಚಯಸ್ಥರು ಹೇಳಿದ್ದಾರೆ. ಆದರೆ ಅವರು ಮುಳುಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಆದರೆ, ಆತನ ಮೃತದೇಹವಾಗಲಿ, ಆತ ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆರ್ಯನ್ ಏಕೈಕ ಮಗನಾಗಿದ್ದರಿಂದ ನಾಪತ್ತೆ ಸುದ್ದಿ ಬಂದಾಗಿನಿಂದ ನೋವು ಅನುಭವಿಸುತ್ತಿರುವುದಾಗಿ ಪೋಷಕರು ಹೇಳಿಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ 'ಫಾದರ್ ಡೇ' ದಿನ ಆರ್ಯನ್ ತನ್ನ ಸ್ನೇಹಿತರೊಂದಿಗೆ ಸರೋವರದ ದಡದಲ್ಲಿ ವಾಕ್ ಮಾಡಲು ಹೋದಾಗ ತನಗೆ ಕರೆ ಮಾಡಿದ್ದ ಎಂದು ಚಾಂಡೆಲ್ ಹೇಳಿದ್ದಾರೆ.
ಅಂದು ತನ್ನ ಚಿಕ್ಕಪ್ಪನಿಗೂ ಫೋನ್ ಮಾಡಿ ವಿಶ್ ಮಾಡಿದ್ರು. ಈ ಕುರಿತು ಅಧಿಕೃತ ವಕ್ತಾರರನ್ನು ಸಂಪರ್ಕಿಸಿದಾಗ, ನಾಪತ್ತೆಯಾದ ವಿದ್ಯಾರ್ಥಿಯ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯದ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



