ಸತತ ಎರಡನೇ ದಿನವೂ Air India ಸಮಸ್ಯೆ; ಮತ್ತೆರಡು ವಿಮಾನಗಳ ಕಾರ್ಯಾಚರಣೆ ಸ್ಥಗಿತ!
ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ವಿಮಾನಗಳ ಮಾರ್ಗ ಬದಲಾವಣೆಯ ಪರಿಣಾಮ ವಿಮಾನ ರದ್ದತಿ ನಿರ್ಧಾರಕ್ಕೆ ಕಾರಣವಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಸತತ ಎರಡನೇ ದಿನವೂ ಏರ್ ಇಂಡಿಯಾದ ಹಲವು ವಿಮಾನಗಳ ಹಾರಾಟ ರದ್ದುಗೊಂಡಿದೆ. "ಕಾರ್ಯಾಚರಣೆಯ ಕಾರಣಗಳು" ಮತ್ತು ವಿಮಾನಗಳ ಮಾರ್ಗ ಬದಲಾವಣೆಯ ಪರಿಣಾಮದಿಂದಾಗಿ ಜೂನ್ 17 ರಂದು ನಿಗದಿಯಾಗಿದ್ದ ಮುಂಬೈ-ಲಕ್ನೋ ವಿಮಾನವನ್ನು ರದ್ದುಗೊಳಿಸಲಾಗಿದೆ.
ಇದಷ್ಟೇ ಅಲ್ಲದೇ ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟಗೊಂಡ ಕಾರಣ ಏರ್ ಇಂಡಿಯಾ ಬುಧವಾರ ದೆಹಲಿ-ಬಾಲಿ ವಿಮಾನವನ್ನು ಮಧ್ಯದಲ್ಲೇ ದೆಹಲಿಗೆ ತಿರುಗಿಸಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಂಬೈ-ಲಖನೌ ವಿಮಾನ ಕಾರ್ಯಾಚರಣೆ ರದ್ದತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ, ಪ್ರಯಾಣಿಕರನ್ನು ಅವರ ಗಮ್ಯಸ್ಥಾನವಾದ ಲಕ್ನೋಗೆ ಆದಷ್ಟು ಬೇಗ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದೆ. ಜೂನ್ 17 ರಂದು ಮುಂಬೈನಿಂದ ಲಕ್ನೋಗೆ ನಿಗದಿಯಾಗಿದ್ದ ಏರ್ ಇಂಡಿಯಾ ವಿಮಾನ AI2491 ಅನ್ನು "ಕಾರ್ಯಾಚರಣೆಯ ಕಾರಣಗಳಿಂದ" ರದ್ದುಗೊಳಿಸಲಾಗಿದೆ.
ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ವಿಮಾನಗಳ ಮಾರ್ಗ ಬದಲಾವಣೆಯ ಪರಿಣಾಮ ವಿಮಾನ ರದ್ದತಿ ನಿರ್ಧಾರಕ್ಕೆ ಕಾರಣವಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಇದಲ್ಲದೆ, ಮಾರ್ಗ ಬದಲಾವಣೆ ಮಾಡಿದ್ದರಿಂದಾಗಿ ವಿಮಾನಗಳ ಆಗಮದಲ್ಲಿ ವಿಳಂಬವಾಗಿದ್ದು, ಸಿಬ್ಬಂದಿ ತಮ್ಮ ನಿಯಂತ್ರಕ ಹಾರಾಟದ ಸಮಯ ಮಿತಿಗಳನ್ನು ತಲುಪಲು ಕಾರಣವಾಯಿತು. ಆದ್ದರಿಂದ, ಹವಾಮಾನ ಸಂಬಂಧಿತ ವಿಳಂಬ ಮತ್ತು ಅಡೆತಡೆಗಳಿಂದಾಗಿ ಬದಲಿ ಸಿಬ್ಬಂದಿಯನ್ನು ತಕ್ಷಣವೇ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಅನಾನುಕೂಲತೆಯನ್ನು ಕಡಿಮೆ ಮಾಡಲು ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ಸೌಕರ್ಯವನ್ನು ಸಹ ಒದಗಿಸಲಾಗಿದೆ ಎಂದು ಅದು ಹೇಳಿದೆ. ಅವರು ಆಯ್ಕೆ ಮಾಡಿಕೊಂಡರೆ ರದ್ದತಿಗಳ ಪೂರ್ಣ ಮರುಪಾವತಿ ಅಥವಾ ಉಚಿತ ಮರು ಪ್ರಯಾಣದ ಆಯ್ಕೆಯನ್ನೂ ಸಹ ಅವರಿಗೆ ನೀಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಮೂರುವರೆ ವರ್ಷಗಳ ಹಿಂದೆ ಟಾಟಾ ಗ್ರೂಪ್ ಏರ್‌ಲೈನ್ಸ್ ಖರೀದಿಸಿದ ನಂತರದ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಏರ್ ಇಂಡಿಯಾದಲ್ಲಿ ಸಮಸ್ಯೆ ಮುಂದುವರೆದಿದೆ. ಜೂ.16 ರಂದು ವಿವಿಧ ಕಾರಣಗಳಿಗಾಗಿ ಏಳು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋ-ಮುಂಬೈ ವಿಮಾನದ ದೋಷದಿಂದಾಗಿ ವಿಮಾನ ಚಾಲಕರು ನಿಲುಗಡೆಯ ಸಮಯದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



