ದೇಶ

ಭಾರತದಲ್ಲಿ ಅಕ್ರಮ ವಾಸ: ಎಂಟು ಮ್ಯಾನ್ಮಾರ್ ಪ್ರಜೆಗಳಿಗೆ 2 ವರ್ಷ ಜೈಲು ಶಿಕ್ಷೆ!

ಆರೋಪಿಗಳು ವಿದೇಶಿಯರಲ್ಲ ಎಂದು ಸಾಬೀತುಪಡಿಸಲು ಸಾಕ್ಷಿಗಳ ಕೊರತೆಯಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿಟಿ ಪವಾರ್ ಅವರು ಜೂನ್ 10 ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದರು.

ಭಾರತದಲ್ಲಿ ಅಕ್ರಮ ವಾಸ: ಎಂಟು ಮ್ಯಾನ್ಮಾರ್ ಪ್ರಜೆಗಳಿಗೆ 2 ವರ್ಷ ಜೈಲು ಶಿಕ್ಷೆ!
ಸಾಂದರ್ಭಿಕ ಚಿತ್ರ
Published On :

ಥಾಣೆ: ಭಾರತದಲ್ಲಿ ಅಕ್ರಮವಾಗಿ ತಂಗಿದ್ದಕ್ಕಾಗಿ ಥಾಣೆ ನ್ಯಾಯಾಲಯ ಎಂಟು ಮ್ಯಾನ್ಮಾರ್ ಪ್ರಜೆಗಳಿಗೆ ಎರಡು ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಶಿಕ್ಷೆಯ ಅವಧಿ ಮುಗಿದ ನಂತರ ಅವರನ್ನು ಗಡೀಪಾರು ಮಾಡುವಂತೆ ಆದೇಶಿಸಿದೆ.

ಆರೋಪಿಗಳು ವಿದೇಶಿಯರಲ್ಲ ಎಂದು ಸಾಬೀತುಪಡಿಸಲು ಸಾಕ್ಷಿಗಳ ಕೊರತೆಯಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿಟಿ ಪವಾರ್ ಅವರು ಜೂನ್ 10 ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದರು.

UNHCR ನೀಡಿದ ನಿರಾಶ್ರಿತರ ಕಾರ್ಡ್‌ಗಳು ಭಾರತದಲ್ಲಿ ಉಳಿಯಲು ಯಾವುದೇ ಕಾನೂನು ಮಾನ್ಯತೆಯನ್ನು ಹೊಂದಿಲ್ಲ, ಏಕೆಂದರೆ ದೇಶವು 1951 ರ ಯುಎನ್ ನಿರಾಶ್ರಿತರ ಸಮಾವೇಶಕ್ಕೆ ಸಹಿ ಹಾಕಿಲ್ಲ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ. ಶನಿವಾರ ತೀರ್ಪಿನ ಪ್ರತಿ ಲಭ್ಯವಾಗಿದೆ.

ವಿದೇಶಿಯರ ಕಾಯ್ದೆ 1946 ರ ನಿಬಂಧನೆಗಳ ಅಡಿಯಲ್ಲಿ ಎಂಟು ವ್ಯಕ್ತಿಗಳನ್ನು ತಪ್ಪಿತಸ್ಥರೆಂದು ಘೋಷಿಸಲಾಯಿತು ಮತ್ತು ಪ್ರತಿಯೊಬ್ಬರಿಗೂ 10,000 ರೂ. ದಂಡ ವಿಧಿಸಲಾಯಿತು. ಒಂಬತ್ತನೇ ಆರೋಪಿ ಭಾರತದ ರಿಯಾಜ್ ಅಹ್ಮದ್ ಅಕ್ಬರ್ ಅಲಿ ಶೇಖ್ ವಿರುದ್ಧದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆತನನ್ನು ಖುಲಾಸೆಗೊಳಿಸಲಾಗಿದೆ.

ಏನಿದು ಕೇಸ್? ಉತ್ತನ್ ಸಾಗರಿ ಪೊಲೀಸರು ದೊರೆತ ಸುಳಿವಿನ ಆಧಾರದ ಮೇಲೆ ಫೆಬ್ರವರಿ 26, 2024 ರಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಚೌಕ್‌ಗಾಂವ್ ಜೆಟ್ಟಿಯಲ್ಲಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದರು. ಅವರ ಬಳಿ ಮೊಬೈಲ್ ಫೋನ್‌ಗಳು ಮತ್ತು ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಹೈ ಕಮಿಷನರ್ ನೀಡುವ ಕಾರ್ಡ್‌ಗಳು ಪತ್ತೆಯಾಗಿತ್ತು. ಅವುಗಳಲ್ಲಿ ಅವರು ಮ್ಯಾನ್ಮಾರ್‌ನ ನಾಗರಿಕರು ಎಂದು ಹೇಳಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.