ಚಲಿಸುತ್ತಿದ್ದ ರೈಲಿನಲ್ಲಿ ಹಿಂದೂ ಯುವತಿಗೆ ಮರ್ಮಾಂಗ ತೋರಿಸಿ ವಿಕೃತಿ: ವೃದ್ಧನಿಗೆ ಚಪ್ಪಲಿಯಿಂದ ಥಳಿತ, Video Viral!
ರೈಲಿನ ಸಾಮಾನ್ಯ ಬೋಗಿಯಲ್ಲಿ ಕುಳಿತಿದ್ದ 15 ವರ್ಷದ ಬಾಲಕಿಗೆ ತನ್ನ ಮರ್ಮಾಂಗ ತೋರಿಸಿ ವೃದ್ಧ ವ್ಯಕ್ತಿಯೋರ್ವ ವಿಕೃತಿ ಮೆರೆದಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ.

ರೈಲಿನ ಸಾಮಾನ್ಯ ಬೋಗಿಯಲ್ಲಿ ಕುಳಿತಿದ್ದ 15 ವರ್ಷದ ಬಾಲಕಿಗೆ ತನ್ನ ಮರ್ಮಾಂಗ ತೋರಿಸಿ ವೃದ್ಧ ವ್ಯಕ್ತಿಯೋರ್ವ ವಿಕೃತಿ ಮೆರೆದಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ. ಅಗರ್ತಲಾ ಮತ್ತು ಫಿರೋಜ್‌ಪುರದ ನಡುವೆ ಚಲಿಸುವ ತ್ರಿಪುರ ಸುಂದರಿ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದ್ದು ನಂತರ ಬಾಲಕಿ ತನ್ನ ಚಪ್ಪಲಿಯಿಂದ ವ್ಯಕ್ತಿಗೆ ಥಳಿಸಿದ್ದಾಳೆ.
ಘಟನೆ ಸಂಬಂಧ ತ್ರಿಪುರಾದ ಧರ್ಮನಗರ ಪಟ್ಟಣದಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) ಅಮರ್‌ಪುರದ ನಿವಾಸಿ ಮೊಹಮ್ಮದ್ ಇಬ್ರಾಹಿಂ ಎಂಬ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಂಬಾಸ್ಸಾ ನಿಲ್ದಾಣದಲ್ಲಿ ರೈಲಿನಿಂದ ಹಲವು ಪ್ರಯಾಣಿಕರು ಇಳಿದು ಹೋಗಿದ್ದರು. ರೈಲು ಸುರಂಗದ ಮೂಲಕ ಹಾದುಹೋಗುತ್ತಿದ್ದಾಗ ಈ ಪರಿಸ್ಥಿತಿಯನ್ನು ಬಳಸಿಕೊಂಡ ಇಬ್ರಾಹಿಂ ಬಾಲಕಿಯ ಮುಂದೆ ಕುಳಿತು ತನ್ನ ಮರ್ಮಾಂಗವನ್ನು ಪ್ರದರ್ಶಿಸಿದ್ದಾನೆ.
ಮೊಹಮ್ಮದ್ ಇಬ್ರಾಹಿಂನ ನೀಚ ಕೃತ್ಯದ ವೀಡಿಯೊವನ್ನು ಸಂತ್ರಸ್ತೆ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಷಯವು ಇತರ ಪ್ರಯಾಣಿಕರ ಗಮನಕ್ಕೆ ಬಂದಿದ್ದು ಆರೋಪಿಗೆ ಹಿಡಿದು ಪದೇ ಪದೇ ಕಪಾಳಮೋಕ್ಷ ಮಾಡಿದ್ದಾರೆ. ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಮಹಿಳೆಯೊಬ್ಬರು ಇಬ್ರಾಹಿಂಗೆ ಚಪ್ಪಲಿಯಿಂದ ಹೊಡೆಯುತ್ತಿರುವುದು ಕಂಡುಬಂದಿದೆ.
ರೈಲು ಧರ್ಮನಗರ ಪಟ್ಟಣವನ್ನು ತಲುಪಿದ ನಂತರ, ಆರೋಪಿಯನ್ನು ರೈಲಿನಿಂದ ಇಳಿಸಿ ಸರ್ಕಾರಿ ರೈಲ್ವೆ ಪೊಲೀಸರಿಗೆ (GRP) ಒಪ್ಪಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



