ಸಾವಿಗೇ ಚಳ್ಳೆಹಣ್ಣು: Air India ವಿಮಾನ ದುರಂತದಲ್ಲಿ ಪ್ರಯಾಣಿಕನ ಜೀವ ಉಳಿಸಿದ್ದು 'ಯಾರಿಗೂ ಬೇಡವಾಗಿದ್ದ ಸೀಟ್ 11A'!
ಅಚ್ಚರಿಯಾದರೂ ಸತ್ಯ.. ಗುಜರಾತ್ನ ಅಹಮದಾಬಾದ್ನಿಂದ (Ahmedabad Plane Crash) ಗ್ಯಾಟ್ವಿಕ್ (ಇಂಗ್ಲೆಂಡ್)ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿತು.

ಅಹ್ಮದಾಬಾದ್: ನಿನ್ನೆ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್ ನ ಜೀವ ಉಳಿಸಿದ್ದು 'ಯಾರಿಗೂ ಬೇಡವಾಗಿದ್ದ ಸೀಟ್ 11A'..
ಅಚ್ಚರಿಯಾದರೂ ಸತ್ಯ.. ಗುಜರಾತ್ನ ಅಹಮದಾಬಾದ್ನಿಂದ (Ahmedabad Plane Crash) ಗ್ಯಾಟ್ವಿಕ್ (ಇಂಗ್ಲೆಂಡ್)ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿತು. ವಿಮಾನದಲ್ಲಿ 10 ಸಿಬ್ಬಂದಿ, ಇಬ್ಬರು ಪೈಲಟ್ ಗಳು ಸೇರಿದಂತೆ 242 ಜನರು ಈ ವಿಮಾನದಲ್ಲಿದ್ದರು.
ಈ ಪೈಕಿ 241 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಈ ಪೈಕಿ ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ರಮೇಶ್ ವಿಶ್ವಾಸ್ ಕುಮಾರ್ ಮಾತ್ರ ಬದುಕುಳಿದಿದ್ದು, ಅವರ ಪ್ರಾಣ ಉಳಿಯಲು ಸೀಟ್ ನಂಬರ್ 11A ಕಾರಣ ಎಂದು ಹೇಳಲಾಗಿದೆ.
ಇಡೀ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ
ಸೀಟ್ ಸಂಖ್ಯೆ 11A ನಲ್ಲಿ ಕುಳಿತಿದ್ದ ರಮೇಶ್ ಬ್ರಿಟಿಷ್ ಪ್ರಜೆಯಾಗಿದ್ದು, ಕಳೆದ 20 ವರ್ಷಗಳಿಂದ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಸಹೋದರ ಅಜಯ್ ಕುಮಾರ್ ರಮೇಶ್ ಅವರೊಂದಿಗೆ ತಮ್ಮ ಕುಟುಂಬವನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಆದರೆ ನಿನ್ನೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದಾರೆ.
ಕಣ್ಣು ಬಿಟ್ಟಾಗ ಸುತ್ತಲೂ ಹೆಣದ ರಾಶಿ
ಅಪಘಾತದ ನಂತರ ಸುದ್ದಿಗಾರರೊಂದಿ ಮಾತನಾಡಿದ ರಮೇಶ್, "ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ, ದೊಡ್ಡ ಸ್ಫೋಟ ಸಂಭವಿಸಿತು. ವಿಮಾನ ಗಾಳಿಯಲ್ಲಿ ಸುತ್ತಿ ನಂತರ ಅಪ್ಪಳಿಸಿತು. ನಾನು ಕಣ್ಣು ತೆರೆದಾಗ, ಸುತ್ತಲೂ ಶವಗಳು ಮತ್ತು ಅವಶೇಷಗಳು ಇದ್ದವು. ನಾನು ಭಯಭೀತನಾಗಿದ್ದೆ, ಆದರೆ ಹೇಗೋ ಸೀಟಿನಿಂದ ಎದ್ದು ಉರಿಯುತ್ತಿರುವ ಅವಶೇಷಗಳಿಂದ ಹೊರಗೆ ಓಡಿಹೋದೆ. ಈ ವೇಳೆ ಮುಖ ಮತ್ತು ಕಾಲುಗಳ ಮೇಲೆ ಗಂಭೀರ ಗಾಯಗಳಾಗಿದ್ದರೂ, ನಾನು ಕುಂಟುತ್ತಾ ಸ್ಥಳದಿಂದ ಹೊರಬಂದೆ ಎಂದರು.
ಸಾವಿಗೇ ಚಳ್ಳೆಹಣ್ಣು: ಪ್ರಾಣ ಉಳಿಸಿದ 11A ಸೀಟ್
11A ಸೀಟು ವಿಶ್ವಶ್ಕುಮಾರ್ ರಮೇಶ್ ಅವರ ಜೀವನಾಡಿಯಾಯಿತು. ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ, ಡ್ರೀಮ್ಲೈನರ್ ವಿಮಾನ ಪತನವಾಗಿ ಛಿದ್ರವಾಯಿತು. ಟೇಕ್ ಆಫ್ ಆದ ಕೇವಲ 30 ಸೆಕೆಂಡುಗಳ ನಂತರ ಎಂಜಿನ್ ದೋಷ ಅವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು. ಗಾಳಿಯಲ್ಲಿ ಎಂದಿಗೂ ತೆರೆಯದಂತೆ ವಿನ್ಯಾಸಗೊಳಿಸಲಾದ ಬಾಗಿಲುಗಳು ದುರಂತದ ಬಳಿಕ ನೆಲದ ಮೇಲೆ ಕಾರ್ಯ ನಿರ್ವಹಿಸಬಹುದಾದ ಅವಶೇಷಗಳಾದವು. ಅಪಘಾತದ ಬಳಿಕ ಇದೇ ಸೀಟ್ ನ ತುರ್ತು ಬಾಗಿಲು ಸ್ಫೋಟದಿಂದ ರಮೇಶ್ ವಿಶ್ವಾಸ್ ಕುಮಾರ್ ರನ್ನು ರಕ್ಷಿಸಿದೆ.
ಸಾಮಾನ್ಯವಾಗಿ ಹಾರಾಟದ ಸಂದರ್ಭದಲ್ಲಿ ತುರ್ತು ನಿರ್ಗಮನಗಳು ತೆರೆಯುವುದಿಲ್ಲ. ಕ್ಯಾಬಿನ್ ಒತ್ತಡ ಮತ್ತು ಇಂಟರ್ಲಾಕ್ಗಳು ಅದನ್ನು ಅಸಾಧ್ಯವಾಗಿಸುತ್ತದೆ. ಆದರೆ ಉಕ್ಕು ಮತ್ತು ರಚನೆ ಮುರಿದಾಗ, ಅದೇ ನಿರ್ಗಮನಗಳು ತಪ್ಪಿಸಿಕೊಳ್ಳುವ ಮಾರ್ಗಗಳಾಗಿ ರೂಪಾಂತರಗೊಳ್ಳುತ್ತವೆ. ಬಾಗಿಲಿನಿಂದ ಕೇವಲ ಒಂದು ಮೀಟರ್ ದೂರದಲ್ಲಿ ಇದು ತೆರೆಯಲ್ಪಟ್ಟಿತು. ಇದೇ 11A ಸೀಟು ರಮೇಶ್ ಬದುಕುಳಿಯಲು ಒಂದು ರೀತಿಯಲ್ಲಿ ನೆರವಾಯಿತು ಎಂದು ಹೇಳಲಾಗಿದೆ.

Air India Plane Crash: ವಿಮಾನದ ಎಮೆರ್ಜೆನ್ಸಿ ವಿಂಡೋದಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕ; Video Viral!
ಯಾರಿಗೂ ಬೇಡವಾದ 11A ಸೀಟ್
ಸಾಮಾನ್ಯವಾಗಿ ಬಹುತೇಕ ಎಲ್ಲ ಪ್ರಯಾಣಿಕ ಬೋಯಿಂಗ್ ವಿಮಾನಗಳಲ್ಲಿ ಈ 11A ಸೀಟ್ ತುರ್ತು ನಿರ್ಗಮನದ ಬಾಗಿಲಿನ ಬಳಿ ಇರುತ್ತದೆ. ಹೀಗಾಗಿ ತುರ್ತು ನಿರ್ಗಮನ ಬಾಗಿಲಿಗೆ ವಿಂಡೋ ಅಥವಾ ಕಿಟಕಿ ಇರುವುದಿಲ್ಲ. ಹೀಗಾಗಿ ಬಹುತೇಕ ಪ್ರಯಾಣಿಕರು ಈ ಸೀಟ್ ಬುಕ್ ಮಾಡಲು ಹಿಂಜರಿಯುತ್ತಾರೆ. ಪ್ರಯಾಣದ ಆನಂದ ಅನುಭವಿಸಲು ಮತ್ತು ಹೊರದಿನ ಪ್ರಕೃತಿ ಸೌಂದರ್ಯ ಸವಿಯಲು ವಿಂಡೋ ಸೀಟ್ ಗಳನ್ನೇ ಹೆಚ್ಚಾಗಿ ಬುಕ್ ಮಾಡುತ್ತಾರೆ. ಆದರೆ ಈ ಬಾರಿ ರಮೇಶ್ ವಿಶ್ವಾಸ್ ಕುಮಾರ್ ಈ ಸೀಟ್ ಕುಳಿತಿದ್ದರು. ಇದೀಗ ಇದೇ ಸೀಟ್ ಅವರ ಪ್ರಾಣ ರಕ್ಷಣೆಗೆ ಪರೋಕ್ಷವಾಗಿ ನೆರವಾಗಿದೆ.
ತುರ್ತು ನಿರ್ಗಮನದ ತರಬೇತಿ ನೀಡಿದ್ದ ಸಿಬ್ಬಂದಿ
ಇನ್ನು ವಿಮಾನ ದುರಂತಕ್ಕೀಡಾದರೆ 90 ಸೆಕೆಂಡ್ ಗಳಲ್ಲಿ ತುರ್ತು ನಿರ್ಗಮನದ ಬಾಗಿಲಿನ ಮೂಲಕ ಹೊರಗೆ ಬರುವ ವಿಧಾನವನ್ನು ಸಿಬ್ಬಂದಿ ಪ್ರಯಾಣಿಕರಿಗೆ ಸೂಚನೆ ನೀಡಿದ್ದರು. ಈ ಸೂಚನೆಗಳು ರಮೇಶ್ ವಿಶ್ವಾಸ್ ಕುಮಾರ್ ನೆರವಿಗೆ ಬಂದಿದ್ದು, ಅಪಘಾತದ ಬಳಿಕ ತುರ್ತು ನಿರ್ಗಮನದ ಬಾಗಿಲಿನ ಮೂಲಕ ಹೊರಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ರಮೇಶ್ ಅವಶೇಷಗಳಿಂದ ಹೊರಬರುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



