ಆಪರೇಷನ್ ಸಿಂಧೂರ್ ವೇಳೆ ಪ್ರತಿಪಕ್ಷಗಳು ಸರ್ಕಾರದೊಂದಿಗೆ ಬಂಡೆಯಂತೆ ನಿಂತಿದ್ದವು: ರಾಹುಲ್ ಗಾಂಧಿ
ಪ್ರಧಾನಿ ಮೋದಿಗೆ ಇಂದಿರಾ ಗಾಂಧಿಯವರಂತೆ ಧೈರ್ಯವಿದ್ದರೆ, ಅವರು ಇಲ್ಲಿ ನಿಂತು ಡೊನಾಲ್ಡ್ ಟ್ರಂಪ್, ನೀವು ಸುಳ್ಳುಗಾರ ಎಂದು ಹೇಳಲಿ" ಎಂದು ರಾಹುಲ್ ಗಾಂಧಿ ಸವಾಲು ಹಾಕಿದರು.

ನವದೆಹಲಿ: "ಆಪರೇಷನ್ ಸಿಂಧೂರ್ ಆರಂಭವಾದ ಕ್ಷಣ, ವಾಸ್ತವವಾಗಿ ಅದು ಪ್ರಾರಂಭವಾಗುವ ಮೊದಲೇ, ಎಲ್ಲಾ ವಿರೋಧ ಪಕ್ಷಗಳು ಭದ್ರತಾ ಪಡೆಗಳೊಂದಿಗೆ ಮತ್ತು ಭಾರತದ ಚುನಾಯಿತ ಸರ್ಕಾರದೊಂದಿಗೆ ಬಂಡೆಯಂತೆ ನಿಲ್ಲುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದವು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಆಪರೇಷನ್ ಸಿಂದೂರ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, "ರಾಷ್ಟ್ರಿಯ ಭದ್ರತೆ ವಿಚಾರದಲ್ಲಿ ಗಂಭೀರ ಹಾಗೂ ದೀರ್ಘಕಾಲೀನ ನೀತಿ ಅಗತ್ಯವಿದೆ. ಪ್ರತಿಕ್ರಿಯಾತ್ಮಕ ಹಾಗೂ ರಾಜಕೀಯ ಪ್ರೇರಿತ ಕ್ರಮಗಳು ಅನುಕೂಲಕರವಲ್ಲ" ಎಂದರು.
ಉಗ್ರರ ವಿರುದ್ದ ಸೇನೆ ನಡೆಸುವ ಕಾರ್ಯಚರಣೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ಆರೋಪಿಸಿದರು.
ಸಶಸ್ತ್ರ ಪಡೆಗಳನ್ನು ರಾಷ್ಟ್ರೀಯ ಹಿತಾಸಕ್ತಿಗಾಗಿ ಮತ್ತು ಸಂಪೂರ್ಣ "ಸ್ವಾತಂತ್ರ್ಯದೊಂದಿಗೆ" ಬಳಸಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಷ್ಠೆಯನ್ನು "ರಕ್ಷಿಸಲು" ಅಲ್ಲ, ಇದು "ದೇಶಕ್ಕೆ ಅಪಾಯಕಾರಿ" ಎಂದು ರಾಹುಲ್ ಗಾಂಧಿ ಕರೆದರು.
ಮೋದಿಗೆ ಧೈರ್ಯವಿದ್ದರೆ ಟ್ರಂಪ್ ಸುಳ್ಳುಗಾರ ಎಂದು ಹೇಳಲಿ
ನನ್ನ ಮಧ್ಯಸ್ಥಿಕೆಯಿಂದಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 29 ಬಾರಿ ಹೇಳಿದ್ದಾರೆ. ಸರಿ, ಅವರು ಸುಳ್ಳು ಹೇಳುತ್ತಿದ್ದರೆ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಇದನ್ನು ಸ್ಪಷ್ಟಪಡಿಸಲಿ ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು.
"ನೀವು ಸುಳ್ಳು ಹೇಳುತ್ತಿದ್ದೀರಿ. ಪ್ರಧಾನಿ ಮೋದಿಗೆ ಇಂದಿರಾ ಗಾಂಧಿಯವರಂತೆ ಧೈರ್ಯವಿದ್ದರೆ, ಅವರು ಇಲ್ಲಿ ನಿಂತು ಡೊನಾಲ್ಡ್ ಟ್ರಂಪ್, ನೀವು ಸುಳ್ಳುಗಾರ ಎಂದು ಹೇಳಲಿ" ಎಂದು ಸವಾಲು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



