ದೇಶ

GT4 European Series: ರೇಸ್ ವೇಳೆ ಮತ್ತೊಮ್ಮೆ ತಮಿಳು ನಟ ಅಜಿತ್ ಕುಮಾರ್ ಕಾರು ಅಪಘಾತ; ಅದೃಷ್ಟವಶಾತ್ ಅಪಾಯದಿಂದ ಪಾರು!

GT4 ಯುರೋಪಿಯನ್ ಸೀರೀಸ್ ನ ಅಧಿಕೃತ ಎಕ್ಸ್ ಖಾತೆಯಲ್ಲಿ ಅಜಿತ್ ಕಾರು ಅಪಘಾತಕ್ಕೀಡಾದ ನಂತರದ ವಿಡಿಯೋವೊಂದನ್ನು ಹಂಚಿಕೊಂಡಿದೆ.

GT4 European Series: ರೇಸ್ ವೇಳೆ ಮತ್ತೊಮ್ಮೆ ತಮಿಳು ನಟ ಅಜಿತ್ ಕುಮಾರ್ ಕಾರು ಅಪಘಾತ; ಅದೃಷ್ಟವಶಾತ್ ಅಪಾಯದಿಂದ ಪಾರು!
ಅಪಘಾತ್ಕೀಡಾದ ನಟ ಅಜಿತ್ ಕುಮಾರ್ ಅವರ ಕಾರು
Published On :

ಇಟಲಿ: ಇಟಲಿಯಲ್ಲಿ ನಡೆದ GT4 ಯುರೋಪಿಯನ್ ಸೀರೀಸ್ ನ ಕಾರು ರೇಸ್ ವೇಳೆ ತಮಿಳು ನಟ ಮತ್ತು ರೇಸರ್ ಅಜಿತ್ ಕುಮಾರ್ ಅವರ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿದೆ. GT4 ಯುರೋಪಿಯನ್ ಸೀರೀಸ್ ನ ಮಿಸಾನೊ ಟ್ರಾಕ್ ನಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಅಜಿತ್ ಕುಮಾರ್ ಅವರು ರೇಸ್ ನಿಂದ ಹೊರ ಬಿದ್ದಿದ್ದಾರೆ.

GT4 ಯುರೋಪಿಯನ್ ಸೀರೀಸ್ ನ ಅಧಿಕೃತ ಎಕ್ಸ್ ಖಾತೆಯಲ್ಲಿ ಅಜಿತ್ ಕಾರು ಅಪಘಾತಕ್ಕೀಡಾದ ನಂತರದ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಟ್ರಾಕ್ ನಲ್ಲಿ ಕಾರುವೊಂದಕ್ಕೆ ಅಜಿತ್ ಕಾರು ಡಿಕ್ಕಿಯಾಗಿದೆ. ಆದರೆ, ಅಜಿತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಬಳಿಕ ಕಾರಿನ ಪಕ್ಕ ನಿಂತಿರುವ ಅಜಿತ್, ಅವಶೇಷಗಳನ್ನು ತೆಗೆದುಹಾಕುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

2003ರಲ್ಲಿ ಫಾರ್ಮುಲಾ ಏಷ್ಯಾ ಬಿಎಂಡಬ್ಲ್ಯೂ ಚಾಂಪಿಯನ್ ಶಿಪ್ ಮೂಲಕ ಮೊದಲ ಬಾರಿಗೆ ಕಾರು ರೇಸಿಂಗ್ ನಲ್ಲಿ ಎಂಟ್ರಿ ನೀಡಿದ್ದ ಅಜಿತ್ ಕುಮಾರ್, 2010ರಲ್ಲಿ ಪಾರ್ಮುಲಾ 2 ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸಿದ್ದರು.

ಈ ವರ್ಷದ ಜನವರಿಯಲ್ಲಿ ದುಬೈನಲ್ಲಿ ನಡೆದ 24 ಗಂಟೆಗಳ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದರು. ಅವರ ತಂಡವು 992ನೇ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಗಳಿಸಿತ್ತು.

ಫೆಬ್ರವರಿಯಲ್ಲಿ ಸ್ಪೇನ್ ನ ವಲೆನ್ಸಿಯಾದಲ್ಲಿ ನಡೆದ ಪೋಶೆ ಸ್ಪ್ರಿಂಟ್ ಚಾಲೆಂಜ್ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ಅಜಿತ್ ಕುಮಾರ್ ಅವರ ಕಾರು ಎರಡು ಭಾರಿ ಅಪಘಾತಕ್ಕೀಡಾಗಿತ್ತು. ಆಗಲೂ ಅಪಾಯದಿಂದ ಪಾರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.