ದೇಶ

ಅಮೆರಿಕದಲ್ಲಿ ವಿಮಾನ-ಹೆಲಿಕಾಪ್ಟರ್ ಢಿಕ್ಕಿ: ಪ್ರಧಾನಿ ಮೋದಿ ಸಂತಾಪ

ಅಮೆರಿಕನ್ ಏರ್​ಲೈನ್ಸ್​ ವಿಮಾನವು ಮಿಲಿಟರಿ ಹೆಲಿಕಾಪ್ಟರ್​ಗೆ ಡಿಕ್ಕಿ ಹೊಡೆದ ನಂತರ ಎರಡೂ ವಿಮಾನಗಳು ಅಪಘಾತಕ್ಕೀಡಾಗಿ 67 ಮಂದಿ ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ವಿಮಾನ-ಹೆಲಿಕಾಪ್ಟರ್ ಢಿಕ್ಕಿ: ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಅಮೆರಿಕದ ವಾಷಿಂಗ್ಟನ್​ ಡಿಸಿಯಲ್ಲಿ ​ ವಿಮಾನ ಹಾಗೂ ಸೇನಾ ಹೆಲಿಕಾಪ್ಟರ್​ ನಡುವೆ ಘರ್ಷಣೆ ಸಂಭವಿಸಿ 67 ಮಂದಿ ಸಾವನ್ನಪ್ಪಿದ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಮಾಡಿರುವ ಅವರು, ವಾಷಿಂಗ್ಟನ್ ಡಿಸಿಯಲ್ಲಿ ಸಂಭವಿಸಿದ ದುರಂತ ಘರ್ಷಣೆಯಲ್ಲಿನ ಪ್ರಾಣಹಾನಿಯಿಂದ ತೀವ್ರ ದುಃಖವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಸಂತಾಪಗಳು. ನಾವು ಯುನೈಟೆಡ್ ಸ್ಟೇಟ್ಸ್ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆಂದು ಹೇಳಿದ್ದಾರೆ.

ಅಮೆರಿಕನ್ ಏರ್​ಲೈನ್ಸ್​ ವಿಮಾನವು ಮಿಲಿಟರಿ ಹೆಲಿಕಾಪ್ಟರ್​ಗೆ ಡಿಕ್ಕಿ ಹೊಡೆದ ನಂತರ ಎರಡೂ ವಿಮಾನಗಳು ಅಪಘಾತಕ್ಕೀಡಾಗಿ 67 ಮಂದಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಅಮೆರಿಕಾದ ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪೊಟೊಮ್ಯಾಕ್ ನದಿಯಲ್ಲಿ ವಿಮಾನ ಬಿದ್ದಿದೆ. ಈಗಾಗಲೇ 28 ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಅಪಘಾತದಿಂದ ಯಾರೂ ಬದುಕುಳಿದಿಲ್ಲ ಎಂದು ವಾಷಿಂಗ್ಟನ್ ಅಗ್ನಿಶಾಮಕ ಮುಖ್ಯಸ್ಥ ಜಾನ್ ಡೊನೆಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.