ದೇಶ

ಕಾರಿಗೆ ಬೆಂಕಿ: ಲಗ್ನ ಪತ್ರಿಕೆ ಹಂಚಲು ತೆರಳಿದ್ದ ಮದುಮಗ ಸಾವು

ದೆಹಲಿಯ ಗಾಜಿಪುರ ಪ್ರದೇಶದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ಈ ಘಟನೆ ನಡೆದಿದೆ.

ಕಾರಿಗೆ ಬೆಂಕಿ: ಲಗ್ನ ಪತ್ರಿಕೆ ಹಂಚಲು ತೆರಳಿದ್ದ ಮದುಮಗ ಸಾವು
ದೆಹಲಿ ಕಾರಿಗೆ ಬೆಂಕಿ (ಸಂಗ್ರಹ ಚಿತ್ರ)
Published On :

ನವದೆಹಲಿ: ತನ್ನ ಮದುವೆ ಲಗ್ನ ಪತ್ರಿಕೆ ಹಂಚಲು ಹೋಗುತ್ತಿದ್ದ ಮಧುಮಗನ ಕಾರು ಬೆಂಕಿಗಾಹುತಿಯಾಗಿ ಆತ ಸುಟ್ಟು ಕರಕಲಾದ ಧಾರುಣ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಗಾಜಿಪುರ ಪ್ರದೇಶದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ಈ ಘಟನೆ ನಡೆದಿದ್ದು, ಲಗ್ನ ಪತ್ರಿಕೆ ಹಂಚಲು ತೆರಳಿದ್ದ ಮಧಮಗ ಇದ್ದ ವ್ಯಾಗನ್ ಆರ್ ಕಾರಿಗೆ ಬೆಂಕಿ ತಗುಲಿ ಮದುಮಗ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ.

ಮೃತ ಮದುಮಗನನ್ನು ಗ್ರೇಟರ್ ನೋಯ್ಡಾದ ನಾವಡಾ ನಿವಾಸಿ ಅನಿಲ್ ಎಂದು ಗುರುತಿಸಲಾಗಿದ್ದು, ಅನಿಲ್ ರ ಮದುವೆ ಫೆಬ್ರವರಿ 14 ರಂದು ನಿಶ್ಚಯವಾಗಿತ್ತು. ಹೀಗಾಗಿ ತನ್ನ ಮದುವೆಯ ಕಾರ್ಡ್‌ಗಳನ್ನು ವಿತರಿಸಲು ಹೊರಟಿದ್ದರು ಎನ್ನಲಾಗಿದೆ.

ಮನೆಗೆ ವಾಪಸ್ ಆಗದೇ ಇದ್ದಾಗ ಅನುಮಾನ

ಕುಟುಂಬಸ್ಥರು ತಿಳಿಸಿರುವಂತೆ ಮಧ್ಯಾಹ್ನ ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲು ಅನಿಲ್ ಹೋಗಿದ್ದರು. ಆದರೆ ತಡರಾತ್ರಿಯವರೆಗೆ ಮನೆಗೆ ಹಿಂತಿರುಗದಿದ್ದಾಗ ಮನೆಯವರು ಅನಿಲ್ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ಡ್​ಆಫ್ ಬಂದಿದೆ. ಬಳಿಕ ರಾತ್ರಿ 11.30ರ ವೇಳೆಗೆ ದೆಹಲಿ ಪೊಲೀಸರು ಕರೆ ಮಾಡಿ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಕೂಡಲೇ ಅನಿಲ್ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದು, ಅಷ್ಟು ಹೊತ್ತಿಗಾಗಲೇ ಅನಿಲ್ ಅವರನ್ನು ಆಗಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಬಳಿಕ ಅನಿಲ್ ಸಾವಿನ ಕುರಿತು ಮಾಹಿತಿ ನೀಡಿದರು ಎಂದು ಸಂತ್ರಸ್ತೆಯ ಹಿರಿಯ ಸಹೋದರ ಸುಮಿತ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.