Sheikh Hasina ವಿರುದ್ಧ ಬಾಂಗ್ಲಾದೇಶ 2ನೇ ಬಂಧನ ವಾರೆಂಟ್; ಈ ಬಾರಿ ಗಡಿಪಾರಾಗ್ತಾರಾ ಮಾಜಿ ಪ್ರಧಾನಿ?
ಈ ಹೊಸ ಬಂಧನ ವಾರಂಟ್ ನ್ನು ಜನವರಿ 6 ರಂದು ಹೊರಡಿಸಲಾಗಿದೆ. ಶೇಖ್ ಹಸೀನಾ ಪದಚ್ಯುತಿಯ ಬಳಿಕ ಭಾರತದಲ್ಲಿ ಆಶ್ರಯ ಪಡೆದಿದ್ದು, ಅವರ ವಿರುದ್ಧ ಹೊರಡಿಸಲಾದ ಎರಡನೇ ಬಂಧನ ವಾರಂಟ್ ಇದಾಗಿದೆ. ಬಾಂಗ್ಲಾ ನ್ಯಾಯಮಂಡಳಿಯು ಹಸೀನಾ ವಿರುದ್ಧ ಇದುವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿದೆ.

ಢಾಕಾ: ಬಾಂಗ್ಲಾದೇಶದ ಅಂತರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ (ICT) ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಮಾಜಿ ಮಿಲಿಟರಿ ಜನರಲ್‌ಗಳು ಮತ್ತು ಮಾಜಿ ಪೊಲೀಸ್ ಮುಖ್ಯಸ್ಥರು ಸೇರಿದಂತೆ 11 ಇತರರ ವಿರುದ್ಧ ಬಲವಂತದ ನಾಪತ್ತೆ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಎರಡನೇ ಬಂಧನ ವಾರಂಟ್ ಹೊರಡಿಸಿದೆ.
ಈ ಹೊಸ ಬಂಧನ ವಾರಂಟ್ ನ್ನು ಜನವರಿ 6 ರಂದು ಹೊರಡಿಸಲಾಗಿದೆ. ಶೇಖ್ ಹಸೀನಾ ಪದಚ್ಯುತಿಯ ಬಳಿಕ ಭಾರತದಲ್ಲಿ ಆಶ್ರಯ ಪಡೆದಿದ್ದು, ಅವರ ವಿರುದ್ಧ ಹೊರಡಿಸಲಾದ ಎರಡನೇ ಬಂಧನ ವಾರಂಟ್ ಇದಾಗಿದೆ. ಬಾಂಗ್ಲಾ ನ್ಯಾಯಮಂಡಳಿಯು ಹಸೀನಾ ವಿರುದ್ಧ ಇದುವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿದೆ.
ನೂರಾರು ಬಲವಂತದ ನಾಪತ್ತೆ ಪ್ರಕರಣದ ಸಂಬಂಧ ಹಸೀನಾ ಸೇರಿದಂತೆ 12 ವ್ಯಕ್ತಿಗಳನ್ನು ಬಂಧಿಸಿ ಫೆಬ್ರವರಿ 12 ರಂದು ನ್ಯಾಯಾಧಿಕರಣದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯದ ಆದೇಶ ಪೊಲೀಸ್ ಮಹಾನಿರೀಕ್ಷಕರಿಗೆ ನಿರ್ದೇಶಿಸುತ್ತದೆ. ಪ್ರಕರಣದಲ್ಲಿ ಹೆಸರಿಸಲಾದವರಲ್ಲಿ ಹಸೀನಾ ಅವರ ಮಾಜಿ ರಕ್ಷಣಾ ಸಲಹೆಗಾರ, ಮೇಜರ್ ಜನರಲ್ (ನಿವೃತ್ತ) ತಾರಿಕ್ ಅಹ್ಮದ್ ಸಿದ್ದಿಕ್ ಮತ್ತು ಮಾಜಿ ಐಜಿಪಿ ಬೆನಜೀರ್ ಅಹ್ಮದ್ ಸೇರಿದ್ದಾರೆ. ಪ್ರಸ್ತುತ ಸಿದ್ದಿಕ್ ಬಂಧನದಲ್ಲಿದ್ದು, ಅಹ್ಮದ್ ಪರಾರಿಯಾಗಿದ್ದಾರೆ ಎಂದು ನಂಬಲಾಗಿದೆ.
ಕಾನೂನು ಏನು ಹೇಳುತ್ತದೆ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಎರಡನೇ ಬಂಧನ ವಾರಂಟ್ ಹೊರಡಿಸಿದ ಕುರಿತು ಎಎನ್‌ಐ ಜೊತೆಗೆ ಮಾತನಾಡಿರುವ ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್, “ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಬಾಂಗ್ಲಾದೇಶದಲ್ಲಿ ದೇಶೀಯ ಕಾನೂನಿನ ಆಧಾರದ ಮೇಲೆ ಸ್ಥಾಪಿಸಲಾದ ನ್ಯಾಯಮಂಡಳಿಯಾಗಿದೆ. ನ್ಯಾಯಾಲಯವು ಕೆಲವು ಅಂತರರಾಷ್ಟ್ರೀಯ ಅಪರಾಧಗಳನ್ನು ಗುರುತಿಸುತ್ತದೆ ಮತ್ತು ಈ ಬಂಧನ ವಾರಂಟ್ ಬಾಂಗ್ಲಾದೇಶದ ದೇಶೀಯ ನ್ಯಾಯಾಲಯ ಹೊರಡಿಸಿರುವ ಬಂಧನ ವಾರಂಟ್ ಆಗಿದೆ. ಈ ವಾರೆಂಟ್ ಜಾರಿಯಾಗಬೇಕಾದರೆ ಆಕೆ ಭಾರತದಿಂದ ಹಸ್ತಾಂತರ ಆಗಬೇಕು. ಭಾರತದಿಂದ ಹಸ್ತಾಂತರಿಸಿದ ನಂತರವೇ ಈ ವಾರಂಟ್ ನ್ನು ಜಾರಿಗೆ ತರಬಹುದು ಎಂದು ಹೇಳಿದ್ದಾರೆ.
ಹಸ್ತಾಂತರಕ್ಕಾಗಿ, ನಿರ್ದಿಷ್ಟ ಅಪರಾಧಿಗೆ ಹಲವಾರು ರಕ್ಷಣೆಗಳಿವೆ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ. "ಅವುಗಳಲ್ಲಿ ಒಂದು ರಾಜಕೀಯ ಅಪರಾಧಕ್ಕಾಗಿ, ನಿಮ್ಮನ್ನು ಹಸ್ತಾಂತರಿಸಲಾಗುವುದಿಲ್ಲ. ಇನ್ನೊಂದು ರಕ್ಷಣೆಯೆಂದರೆ, ಹಸ್ತಾಂತರವನ್ನು ಬಯಸುವ ದೇಶದಲ್ಲಿನ ಶಿಕ್ಷೆಯು ಭಾರತದಲ್ಲಿ ಇದೇ ರೀತಿಯ ಅಪರಾಧಕ್ಕೆ ಒದಗಿಸುವ ಶಿಕ್ಷೆಗಿಂತ ಹೆಚ್ಚಿನ ಶಿಕ್ಷೆಯನ್ನು ಹೊಂದಿರಬಾರದು" ಎಂದು ಅವರು ಹೇಳಿದರು.
"ಆದ್ದರಿಂದ, ಈ ಎಲ್ಲಾ ರಕ್ಷಣಾತ್ಮಕ ಕ್ರಮಗಳು ಮತ್ತು ಅವರಲ್ಲಿರುವ ಎಲ್ಲಾ ಇತರ ಸುರಕ್ಷತೆಗಳನ್ನು ಪರಿಗಣಿಸಿ, ಬಾಂಗ್ಲಾದೇಶ ಹಸ್ತಾಂತರವನ್ನು ಜಾರಿಗೆ ತರಲು ಭಾರತೀಯ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ಹಸ್ತಾಂತರವನ್ನು ನೀಡಬಹುದೇ ಎಂಬ ಅನುಮಾನವಿದೆ, ”ಎಂದು ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



