ದೇಶ

ಜಾರ್ಖಂಡ್‌: ಪತಿ-ಪತ್ನಿ ಜಗಳ, ಬಾವಿಗೆ ಹಾರಿದ ವ್ಯಕ್ತಿ ರಕ್ಷಿಸಲು ಹೋದ ನಾಲ್ಕು ಮಂದಿ ಸೇರಿ ಐವರು ಸಾವು

ಸುಂದರ್ ಕುರ್ಮಾಲಿ (27) ಮೃತ ವ್ಯಕ್ತಿ. ಈತ ತನ್ನ ಪತ್ನಿ ರೂಪಾ ದೇವಿಯೊಂದಿಗೆ ಮನೆಯಲ್ಲಿ ಜಗಳವಾಡಿದ್ದ. ಕುಪಿತಗೊಂಡ ಸುಂದರ್ ತನ್ನ ಬೈಕ್ ವೇಗವಾಗಿ ಚಲಾಯಿಸಿ ಬೈಕ್ ಅನ್ನು ಬಾವಿಗೆ ತಳ್ಳಿದ್ದಾನೆ.

ಜಾರ್ಖಂಡ್‌: ಪತಿ-ಪತ್ನಿ ಜಗಳ, ಬಾವಿಗೆ ಹಾರಿದ ವ್ಯಕ್ತಿ ರಕ್ಷಿಸಲು ಹೋದ ನಾಲ್ಕು ಮಂದಿ ಸೇರಿ ಐವರು ಸಾವು
ಸಾಂದರ್ಭಿಕ ಚಿತ್ರ
Published On :

ಜಾರ್ಖಂಡ್‌ : ಹೆಂಡತಿ ಜೊತೆ ಜಗಳದ ನಂತರ ಕೋಪದಿಂದ ಪತಿ ಬಾವಿಗೆ ಹಾರಿದ ವ್ಯಕ್ತಿಯನ್ನು ರಕ್ಷಿಸಲು ಹೋದ ನಾಲ್ವರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ.

ಸುಂದರ್ ಕುರ್ಮಾಲಿ (27) ಮೃತ ವ್ಯಕ್ತಿ. ಈತ ತನ್ನ ಪತ್ನಿ ರೂಪಾ ದೇವಿಯೊಂದಿಗೆ ಮನೆಯಲ್ಲಿ ಜಗಳವಾಡಿದ್ದ. ಕುಪಿತಗೊಂಡ ಸುಂದರ್ ತನ್ನ ಬೈಕ್ ವೇಗವಾಗಿ ಚಲಾಯಿಸಿ ಬೈಕ್ ಅನ್ನು ಬಾವಿಗೆ ತಳ್ಳಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಬೈಕ್ ತೆಗೆಯಲು ಬಾವಿಗೆ ಇಳಿದ. ಆದರೆ ಅವನು ಮರಳಿ ಬರಲೇ ಇಲ್ಲ.

ಗಾಬರಿಗೊಂಡ ಪತ್ನಿ ರೂಪಾ ಪತಿಯನ್ನು ರಕ್ಷಿಸುವಂತೆ ಕಿರುಚಿದ್ದಾರೆ. ನೆರೆಮನೆಯವರು ಸುಂದರ್‌ನನ್ನು ರಕ್ಷಿಸಲು ನಾಲ್ವರು ಒಬ್ಬರ ಹಿಂದೆ ಒಬ್ಬರು ಬಾವಿಗೆ ಇಳಿದಿದ್ದಾರೆ. ಈ ಐವರು ಬಾವಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರಾಹುಲ್ ಕರ್ಮಾಲಿ, ವಿನಯ್ ಕರ್ಮಾಲಿ, ಪಂಕಜ್ ಕರ್ಮಾಲಿ ಮತ್ತು ಸೂರಜ್ ಭುಯಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಮೃತರೆಲ್ಲರೂ 25 ರಿಂದ 28 ವರ್ಷದೊಳಗಿನವರು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆಯ ವೇಳೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.