ದೇಶ

ಪಾಕ್ ಜೈಲಿನಿಂದ ಬಿಡುಗಡೆಯಾದ 22 ಭಾರತೀಯ ಮೀನುಗಾರರು, ತಾಯ್ನಾಡಿಗೆ ವಾಪಸ್!

ಬಿಡುಗಡೆಯಾದ 22 ಮಂದಿ ಮೀನುಗಾರರಲ್ಲಿ 18 ಜನರು ಗುಜರಾತ್, ಮೂವರು ಡಿಯು ಮತ್ತು ಒಬ್ಬರು ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ

ಪಾಕ್ ಜೈಲಿನಿಂದ ಬಿಡುಗಡೆಯಾದ 22 ಭಾರತೀಯ ಮೀನುಗಾರರು, ತಾಯ್ನಾಡಿಗೆ ವಾಪಸ್!
ಪಾಕ್ ಜೈಲಿನಿಂದ ಬಿಡುಗಡೆಯಾದ ಭಾರತೀಯ ಮೀನುಗಾರರು
Published On :

ಅಹಮದಾಬಾದ್: ಪಾಕಿಸ್ತಾನದ ಕರಾಚಿ ಜೈಲಿನಿಂದ ಬಿಡುಗಡೆಯಾದ 22 ಭಾರತೀಯ ಮೀನುಗಾರರು ಮಂಗಳವಾರ ಗುಜರಾತ್ ನ ಗಿರ್ ಸೋಮನಾಥ ತಲುಪಿದರು. ತವರಿಗೆ ವಾಪಸ್ಸಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಇನ್ನೂ ಪಾಕಿಸ್ತಾನದ ಜೈಲಿನಲ್ಲಿರುವ ಇತರ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಗುಜರಾತಿನ ಅರಬ್ಬಿ ಸಮುದ್ರದದ ಕಡಲ ಗಡಿ ಬಳಿ ಮೀನುಗಾರಿಕೆ ಮಾಡುತ್ತಿದ್ದಾಗ ಏಪ್ರಿಲ್ 2021 ಮತ್ತು ಡಿಸೆಂಬರ್ 2022ರ ನಡುವಣ 22 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ನೌಕಾಪಡೆಯ ಭದ್ರತಾ ಸಂಸ್ಥೆ ಬಂಧಿಸಿತ್ತು.

ಇನ್ನೂ ಸುಮಾರು 195 ಮೀನುಗಾರರು ಪಾಕಿಸ್ತಾನದ ಜೈಲ್ಲಿನಲ್ಲಿದ್ದಾರೆ ಎಂದು ವೆರಾವಲ್ ನ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ವಿಕೆ ಗೋಹೆಲ್ ತಿಳಿಸಿದ್ದಾರೆ.

ಬಿಡುಗಡೆಯಾದ 22 ಮಂದಿ ಮೀನುಗಾರರಲ್ಲಿ 18 ಜನರು ಗುಜರಾತ್, ಮೂವರು ಡಿಯು ಮತ್ತು ಒಬ್ಬರು ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಮೀನುಗಾರರ ಬಿಡುಗಡೆಗೆ ಮುಖ್ಯಮಂತ್ರಿ ಭೂಪೇಂದ್ರ ಬಘೇಲ್ ಹಾಗೂ ಕೃಷಿ ಸಚಿವ ರಾಘವ್ ಜಿ ಪಟೇಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ಗುಜರಾತ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಕೆಲ ದಿನಗಳ ಹಿಂದೆ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ನಂತರ ಸೋಮವಾರ ಸಂಜೆ ರೈಲಿನಲ್ಲಿ ಮೀನುಗಾರರು ವಡೋದರ ತಲುಪಿಸಿದರು. ವಡೋದರಿಂದ ಬಸ್ ಮೂಲಕ ಗಿರಿ್ ಸೋಮನಾಥ ಜಿಲ್ಲೆಯ ವರವಲ್ ತಲುಪಿದ್ದಾರೆ ಎಂದು ಗೋಹೆಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.