ದೇಶ

ಬಿಜೆಪಿಯಿಂದ ಶಾಸಕರ ಖರೀದಿ ಆರೋಪಕ್ಕೆ ಪುರಾವೆ ನೀಡಿ: ಕೇಜ್ರಿವಾಲ್‌ಗೆ ಎಸಿಬಿ ನೋಟಿಸ್

ಬಿಜೆಪಿ, ಎಎಪಿ ಪಕ್ಷದ ಶಾಸಕರಿಗೆ ಲಂಚ ನೀಡಲು ಯತ್ನಿಸಿದೆ ಎಂಬ ನಿಮ್ಮ ಆರೋಪಕ್ಕೆ ಪುರಾವೆಗಳನ್ನು ಒದಗಿಸುವಂತೆ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಗೆ ಎಸಿಬಿ ಸೂಚಿಸಿದೆ.

ಬಿಜೆಪಿಯಿಂದ ಶಾಸಕರ ಖರೀದಿ ಆರೋಪಕ್ಕೆ ಪುರಾವೆ ನೀಡಿ: ಕೇಜ್ರಿವಾಲ್‌ಗೆ ಎಸಿಬಿ ನೋಟಿಸ್
ಕೇಜ್ರಿವಾಲ್ ಮನೆ ಮುಂದೆ ಎಸಿಬಿ ಅಧಿಕಾರಿಗಳು
Published On :

ನವದೆಹಲಿ: ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದ AAP ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ(ACB) ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಬಿಜೆಪಿ, ಎಎಪಿ ಪಕ್ಷದ ಶಾಸಕರಿಗೆ ಲಂಚ ನೀಡಲು ಯತ್ನಿಸಿದೆ ಎಂಬ ನಿಮ್ಮ ಆರೋಪಕ್ಕೆ ಪುರಾವೆಗಳನ್ನು ಒದಗಿಸುವಂತೆ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಗೆ ಎಸಿಬಿ ಸೂಚಿಸಿದೆ.

"ಆಪರೇಷನ್ ಲೋಟಸ್" ಅಡಿಯಲ್ಲಿ ಬಿಜೆಪಿ, ತಮ್ಮ ಪಕ್ಷದ 16 ಅಭ್ಯರ್ಥಿಗಳನ್ನು ಖರೀದಿಸಿಲು ಪ್ರಯತ್ನಿಸುತ್ತಿದೆ. ಎಎಪಿ ಅಭ್ಯರ್ಥಿಗಳು, ಬಿಜೆಪಿ ಸೇರಿದರೆ ಸಚಿವ ಸ್ಥಾನ ಮತ್ತು ತಲಾ 15 ಕೋಟಿ ರೂ.ಗಳ ನೀಡುವ ಆಫರ್‌ ನೀಡಲಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಆ ಶಾಸಕರ ಹೆಸರುಗಳು ಮತ್ತು ಆಫರ್‌ ನೀಡಿದವರ ಸಂಪರ್ಕ ವಿವರಗಳನ್ನು ಸಲ್ಲಿಸುವಂತೆ ACB ಕೇಜ್ರಿವಾಲ್ ಅವರಿಗೆ ಕೇಳಿಕೊಂಡಿದೆ.

ಈ ನೋಟಿಸ್‌ನಲ್ಲಿ ಆರೋಪಗಳನ್ನು "ಅತ್ಯಂತ ಗಂಭೀರ" ಎಂದು ಕರೆಯಲಾಗಿದ್ದು, ತುರ್ತು ವಿಚಾರಣೆ ಅಗತ್ಯ ಎಂದು ಹೇಳಲಾಗಿದೆ. ಸಂಪರ್ಕಿಸಲಾಗಿದೆ ಎನ್ನಲಾದ 16 ಅಭ್ಯರ್ಥಿಗಳ ಹೆಸರುಗಳನ್ನು ಮತ್ತು ಆಫರ್‌ ನೀಡಿದವರ ಫೋನ್ ಸಂಖ್ಯೆಗಳನ್ನು ಒದಗಿಸುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಲಾಗಿದೆ.

ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಶುಕ್ರವಾರ ತಮ್ಮ ಭೇಟಿಗೆ ಸಮಯ ನೀಡುವಂತೆ ACB ಕೇಜ್ರಿವಾಲ್ ಅವರನ್ನು ಕೇಳಿಕೊಂಡಿದೆ.

ಎಎಪಿ ನಾಯಕರ ಆರೋಪದ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಶುಕ್ರವಾರ ಎಸಿಬಿ ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿ ಶೋಧ ನಡೆಸಲು ಮುಂದಾಗಿದ್ದರು. ಆದರೆ ಕೇಜ್ರಿವಾಲ್ ಅವರು ಎಸಿಬಿ ಅಧಿಕಾರಿಗಳು ತಮ್ಮ ಮನೆ ಪ್ರವೇಶಿಸಲು ಅವಕಾಶ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.