ರೈಲು ಹರಿದು ಮಹಾಕುಂಭ ಮೇಳ ಭಕ್ತಾದಿಗಳು ಸಾವು!
ಪೂರ್ವ ಮಧ್ಯ ರೈಲ್ವೆಯ ಜಮಾಲ್ಪುರ್-ಸುಲ್ತಾಂಗಂಜ್ ರೈಲ್ವೆ ವಿಭಾಗದ ಋಷಿಕುಂಡ್ ರೈಲ್ವೆ ನಿಲುಗಡೆಯ ಬಳಿ ಬಲಿಪಶುಗಳು ರೈಲು ಹಳಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಪಾಟ್ನ: ರೈಲು ಹರಿದು ಇಬ್ಬರು ಮಹಾಕುಂಭಮೇಳ ಭಕ್ತಾದಿಗಳು ಸಾವನ್ನಪ್ಪಿರುವ ಘಟನೆ ಫೆ.06 ರಂದು ನಡೆದಿದೆ.
ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಡೆದ ಅಪಘಾತದಲ್ಲಿ ಮೃತಪಟ್ಟವರನ್ನು ರಾಮ್ ರುಚಿ ದೇವಿ (65), ಅಮಿತ್ ಕುಮಾರ್ (41) ಮತ್ತು ಉಷಾ ದೇವಿ (61) ಎಂದು ಗುರುತಿಸಲಾಗಿದೆ, ಇವರು ಮಹಾ ಕುಂಭ ಮೇಳದಲ್ಲಿ ಸಂಗಮ (ಪ್ರಯಾಗ್ ರಾಜ್) ನಲ್ಲಿ ಪವಿತ್ರ ಸ್ನಾನ ಮಾಡಿ ಮನೆಗೆ ಹಿಂತಿರುಗುತ್ತಿದ್ದರು.
ಪೂರ್ವ ಮಧ್ಯ ರೈಲ್ವೆಯ ಜಮಾಲ್ಪುರ್-ಸುಲ್ತಾಂಗಂಜ್ ರೈಲ್ವೆ ವಿಭಾಗದ ಋಷಿಕುಂಡ್ ರೈಲ್ವೆ ನಿಲುಗಡೆಯ ಬಳಿ ಬಲಿಪಶುಗಳು ರೈಲು ಹಳಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಳಿ ದಾಟುವಾಗ ಗಯಾ-ಹೌರಾ ಎಕ್ಸ್‌ಪ್ರೆಸ್ ವೇಗವಾಗಿ ಬಂದಿದ್ದು ಭಕ್ತಾದಿಗಳು ಸಾವನ್ನಪ್ಪಿದ್ದಾರೆ ದು ಸ್ಥಳೀಯರು ಹೇಳಿದ್ದಾರೆ. ದಟ್ಟವಾದ ಮಂಜಿನಿಂದಾಗಿ ಕಳಪೆ ಗೋಚರತೆಯೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಘಟನೆಯ ನಂತರ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತ್ತು. ಸರ್ಕಾರಿ ರೈಲ್ವೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆಯವರು ಗುಂಪನ್ನು ಚದುರಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



