ದೇಶ ಮೊದಲು, ನಂತರ ಹಬ್ಬ: ಮುಂಬೈ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ 'ಜನ ಗಣ ಮನ'; Video Viral
ಚರ್ಚ್ ನಲ್ಲಿ ಗಾಯಕವೃಂದವು ಭಾರತೀಯ ರಾಷ್ಟ್ರಗೀತೆಯ ನುಡಿಸುವಿಕೆಯೊಂದಿಗೆ ಕ್ರಿಸ್‌ಮಸ್ ಕರೋಲ್ ನ್ನು ಆರಂಭಿಸಿದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆಯುತ್ತಿದೆ.

ಮುಂಬೈನ ಸೇಂಟ್ ಥಾಮಸ್ ಕ್ಯಾಥೆಡ್ರಲ್‌ನಲ್ಲಿ ಕ್ರಿಸ್‌ಮಸ್ ಕೋರಲ್ ಗಾಯನ ಪ್ರಾರಂಭವಾಗುತ್ತಿದ್ದಂತೆ ಭಾರತದ ರಾಷ್ಟ್ರಗೀತೆ ಮೊದಲು ಮೊಳಗಿತು. ಮೊದಲು ದೇಶ ಎಂಬ ತತ್ವದಡಿಯಲ್ಲಿ ಜನಗಣ ಮನ ಗೀತೆಯನ್ನು ಹಾಕಲಾಯಿತು.
ಚರ್ಚ್ ನಲ್ಲಿ ಗಾಯಕವೃಂದವು ಭಾರತೀಯ ರಾಷ್ಟ್ರಗೀತೆಯ ನುಡಿಸುವಿಕೆಯೊಂದಿಗೆ ಕ್ರಿಸ್‌ಮಸ್ ಕರೋಲ್ ನ್ನು ಆರಂಭಿಸಿದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆಯುತ್ತಿದೆ.
ಐತಿಹಾಸಿಕ ಸೇಂಟ್ ಥಾಮಸ್ ಕ್ಯಾಥೆಡ್ರಲ್‌ನಲ್ಲಿ ಈ ಪ್ರದರ್ಶನ ನಡೆಯಿತು. ಅಲ್ಲಿ ವೈಲ್ಡ್ ವಾಯ್ಸಸ್ ಕಾಯಿರ್ ಇಂಡಿಯಾ ಕ್ರಿಸ್‌ಮಸ್ ಕೋರಲ್ ಸಂಜೆಯನ್ನು "ಜನ ಗಣ ಮನ" ದ ಭಾವಪೂರ್ಣ ಮತ್ತು ಶಿಷ್ಟಾಚಾರ-ಅನುಸರಣೆಯ ಪ್ರದರ್ಶನದೊಂದಿಗೆ ಪ್ರಾರಂಭಿಸಿ ನಂತರ ಸಾಂಪ್ರದಾಯಿಕ ಕರೋಲ್ ಹಾಡಿದರು.
ಛಾಯಾಗ್ರಾಹಕ ಮಾಲ್ಕಮ್ ಸ್ಟೀಫನ್ಸ್ ಹಂಚಿಕೊಂಡ ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ದೇಶಭಕ್ತಿ ಮತ್ತು ಹಬ್ಬದ ಮನೋಭಾವದ ಈ ಹೃದಯಸ್ಪರ್ಶಿ ಕ್ಷಣವನ್ನು ನೆಟ್ಟಿಗರು ಕೊಂಡಾಡಿದ್ದಾರೆ.
ಸೈಂಟ್ ಥಾಮಸ್ ಕ್ಯಾಥಡ್ರಲ್ ಚರ್ಚ್ 300ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದು. ಇದು ಮುಂಬೈ ಮಹಾನಗರದ ಅತಿ ಹಳೆಯ ಚರ್ಚ್. ಬ್ರಿಟಿಷರ ವಸಾಹತುಶಾಹಿ ಜೀವನದಲ್ಲಿ ನೆಲೆಕಂಡ ಮುಂಬೈ ನಗರದ ಮೊದಲ ಆಂಗ್ಲನ್ನರ ಚರ್ಚ್. 1718ರಲ್ಲಿ ಇದನ್ನು ನಿರ್ಮಿಸಲಾಗಿದ್ದು ದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಕುರುಹಾಗಿದೆ. ಈ ಚರ್ಚ್ ನಲ್ಲಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


