ಮಹಾರಾಷ್ಟ್ರ: ಸಚಿವ ಸ್ಥಾನಕ್ಕೆ ಮಾಣಿಕ್ರಾವ್ ಕೊಕಾಟೆ ರಾಜೀನಾಮೆ!
ನಾಸಿಕ್ ಅಪಾರ್ಟ್‌ಮೆಂಟ್ ಹಗರಣದಿಂದ ಮಹಾರಾಷ್ಟ್ರ ರಾಜ್ಯ ಕ್ರೀಡಾ ಸಚಿವ ಮಾಣಿಕ್ರಾವ್ ಕೊಕಾಟೆ ಸಂಕಷ್ಟಕ್ಕೆ ಸಿಲುಕಿದ್ದು ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ನಾಸಿಕ್ ಅಪಾರ್ಟ್‌ಮೆಂಟ್ ಹಗರಣದಿಂದ ಮಹಾರಾಷ್ಟ್ರ ರಾಜ್ಯ ಕ್ರೀಡಾ ಸಚಿವ ಮಾಣಿಕ್ರಾವ್ ಕೊಕಾಟೆ ಸಂಕಷ್ಟಕ್ಕೆ ಸಿಲುಕಿದ್ದು ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪ್ರಕರಣ ಸಂಬಂಧ ನಾಸಿಕ್ ಸೆಷನ್ಸ್ ನ್ಯಾಯಾಲಯವು ಸಚಿವ ಮಾಣಿಕ್ರಾವ್ ಕೊಕಾಟೆ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. 1995ರಲ್ಲಿ ನಡೆದಿದ್ದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಕೊಕಾಟೆಗೆ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಅದರ ನಂತರ ನಾಸಿಕ್ ಸೆಷನ್ಸ್ ನ್ಯಾಯಾಲಯವು ಈಗ ಮಾಣಿಕ್ರಾವ್ ಕೊಕಾಟೆ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.
ನಾಸಿಕ್‌ನಲ್ಲಿ 1995ರ ಜುನ್ಯಾ ಸದನಿಕಾ ಹಗರಣ ಪ್ರಕರಣವು ಮಾಣಿಕ್ರಾವ್ ಕೊಕಾಟೆ ಅವರಿಗೆ ದೊಡ್ಡ ಹೊಡೆತ ನೀಡಿತ್ತು. ನಾಸಿಕ್ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಕೊಕಾಟೆ ವಿರುದ್ಧ ವಾರಂಟ್ ಹೊರಡಿಸಿತ್ತು. ಕೊಕಾಟೆ ಕಥೆ ಸುಮಾರು 30 ವರ್ಷಗಳಿಂದ ನಡೆಯುತ್ತಿದ್ದು ಯಾವುದೇ ಕ್ಷಣದಲ್ಲಾದರೂ ಅವರ ಬಂಧನವಾಗಬಹುದು.
ಏತನ್ಮಧ್ಯೆ, ಮಾಣಿಕ್ರಾವ್ ಕೊಕಾಟೆ ತಮ್ಮ ರಾಜೀನಾಮೆ ಪತ್ರವನ್ನು ಅಜಿತ್ ಪವಾರ್ ಅವರಿಗೆ ಸಲ್ಲಿಸಿದ್ದಾರೆ. ಸದ್ಯ ನಾಸಿಕ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶಗಳ ವಿರುದ್ಧ ಕೊಕಾಟೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್ ಶುಕ್ರವಾರ ತನ್ನ ನಿರ್ಧಾರವನ್ನು ನೀಡಲಿದೆ. ಆದ್ದರಿಂದ, ಹೈಕೋರ್ಟ್ ಆದೇಶದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.

MANREGA-VBGRAMG: NDA ಮೈತ್ರಿಯಲ್ಲಿ ಬಿರುಕು; BJP ನಿರ್ಧಾರದ ಬಗ್ಗೆ TDP ಅಸಮಾಧಾನ; ಇದು ಕೇವಲ ಹೆಸರಿನ ವಿಷಯವಲ್ಲ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


