ದೇಶ

ಪುದುಚೇರಿ: ನಟ ವಿಜಯ್ ರ್‍ಯಾಲಿಗೆ ಗನ್ ಹಿಡಿದು ಬಂದಿದ್ದ ವ್ಯಕ್ತಿಯ ಬಂಧನ!

ಹೆಚ್ಚಿನ ವಿಚಾರಣೆಗಾಗಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ತನ್ನ ಸೊಂಟದಲ್ಲಿ ಹ್ಯಾಂಡ್‌ಗನ್ ಇಟ್ಟುಕೊಂಡಿದ್ದನು ಮತ್ತು ಸ್ಥಳದ ಪ್ರವೇಶದ್ವಾರದಲ್ಲಿದ್ದ ಪೊಲೀಸರು ಆತನನ್ನು ಪರಿಶೀಲಿಸಿದಾಗ ಗನ್ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪುದುಚೇರಿ: ನಟ ವಿಜಯ್ ರ್‍ಯಾಲಿಗೆ ಗನ್ ಹಿಡಿದು ಬಂದಿದ್ದ ವ್ಯಕ್ತಿಯ ಬಂಧನ!
ಸೊಂಟದಲ್ಲಿ ಹ್ಯಾಂಡ್‌ಗನ್ ಇಟ್ಟುಕೊಂಡಿದ್ದ ವ್ಯಕ್ತಿ
Published On :

ಪುದುಚೇರಿ: ಪುದುಚೇರಿಯಲ್ಲಿ ಮಂಗಳವಾರ ನಡೆದ ವಿಜಯ್ ನೇತೃತ್ವದ ಟಿವಿಕೆ ರ್ಯಾಲಿ ವೇಳೆ ಭದ್ರತಾ ಲೋಪವಾಗಿದ್ದು, ಹ್ಯಾಂಡ್‌ಗನ್ ಹಿಡಿದು ನಟನ ಬಳಿ ತೆರಳಲು ಯತ್ನಿಸಿದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆದಾಗ್ಯೂ, ಉಪ್ಪಳಂನ ಎಕ್ಸ್‌ಪೋ ಮೈದಾನದಲ್ಲಿ(ನ್ಯೂ ಪೋರ್ಟ್) ನಡೆದ ನಿರ್ಬಂಧಿತ ರ್‍ಯಾಲಿ ಸ್ಥಳ ಪ್ರವೇಶಿಸುತ್ತಿದ್ದ ಎಲ್ಲರನ್ನೂ ಎಚ್ಚರಿಕೆಯಿಂದ ತಪಾಸಣೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯವನೆಂದು ಮತ್ತು ತಾನು ಖಾಸಗಿ ಭದ್ರತಾ ಅಧಿಕಾರಿಯಾಗಿದ್ದು, ಸಮಯಕ್ಕೆ ಸರಿಯಾಗಿ ತನ್ನ ತಂಡವನ್ನು ಸೇರಲು ಸಾಧ್ಯವಾಗಲಿಲ್ಲ ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ ಬಳಿ ಪರವಾನಗಿ ಪಡೆದ ರಿವಾಲ್ವರ್ ಇದೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ವರದಿಗಾರರು ಆತನ ಗುರುತನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಮತ್ತು ನೀವು ಯಾರಿಗೆ ಭದ್ರತೆ ನೀಡುತ್ತಿದ್ದೀರಿ ಎಂದು ಕೇಳಿದಾಗ, ಆ ವ್ಯಕ್ತಿ ಉತ್ತರಿಸಲು ನಿರಾಕರಿಸಿದರು. ಆದರೆ ಗನ್ ಪರವಾನಗಿ ಹೊಂದಿದ್ದೇನೆ ಎಂದು ತಿಳಿಸಿದರು.

ಹೆಚ್ಚಿನ ವಿಚಾರಣೆಗಾಗಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ತನ್ನ ಸೊಂಟದಲ್ಲಿ ಹ್ಯಾಂಡ್‌ಗನ್ ಇಟ್ಟುಕೊಂಡಿದ್ದನು ಮತ್ತು ಸ್ಥಳದ ಪ್ರವೇಶದ್ವಾರದಲ್ಲಿದ್ದ ಪೊಲೀಸರು ಆತನನ್ನು ಪರಿಶೀಲಿಸಿದಾಗ ಗನ್ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ಪಕ್ಷದ ಸಂಸ್ಥಾಪಕ ವಿಜಯ್ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ ನಂತರ, ತಮಿಳಗ ವೆಟ್ರಿ ಕಳಗಂ ರ್‍ಯಾಲಿಗೆ ಕೇವಲ 5,000 ಜನರಿಗೆ ಮಾತ್ರ ಪ್ರವೇಶ ನಿರ್ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.