ದೇಶ

Theaterisation: 'ಥಿಯೇಟರ್ ಕಮಾಂಡ್‌' ರಚನೆ; ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಥಿಯೇಟರ್ ಕಮಾಂಡ್ ರಚನೆಯನ್ನು ಅಂತಿಮ ಗುರಿಯಾಗಿಟ್ಟುಕೊಂಡು ಏಕೀಕೃತ ಯೋಜನೆ, ಸಾಮಾನ್ಯ ಚಿತ್ರ ಮತ್ತು ಸಮಗ್ರ ಕಾರ್ಯಾಚರಣೆಯ ಉದ್ದೇಶದೊಂದಿಗೆ ಮುನ್ನಡೆಯುತ್ತಿದ್ದೇವೆ.

Theaterisation: 'ಥಿಯೇಟರ್ ಕಮಾಂಡ್‌' ರಚನೆ; ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...
ಆಡ್ಮಿರಲ್ ಡಿಕೆ ತ್ರಿಪಾಠಿ
Published On :

ಮಹೋ: ಭಾರತದ ಮಿಲಿಟರಿ ಪುನರ್ ರಚನೆ ಬಗ್ಗೆ ಹೆಚ್ಚಾದ ಚರ್ಚೆಗಳು ನಡೆಯುತ್ತಿರುವಂತೆಯೇ ಏಕೀಕೃತ ಥಿಯೇಟರ್ ಕಮಾಂಡ್‌ಗಳ (ITC) ರಚನೆ "ಮಹತ್ವದ ಪ್ರಯತ್ನವಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಡಿ ಕೆ ತ್ರಿಪಾಠಿ ಹೇಳಿದ್ದಾರೆ.

ಮಧ್ಯಪ್ರದೇಶದ ಡಾ.ಅಂಬೇಡ್ಕರ್ ನಗರದಲ್ಲಿರುವ ಆರ್ಮಿ ವಾರ್ ಕಾಲೇಜಿನಲ್ಲಿ ನಡೆದ ಯುದ್ಧ ಕುರಿತ ಸಂವಾದದಲ್ಲಿ ಮಾತನಾಡಿದ ಅಡ್ಮಿರಲ್ ತ್ರಿಪಾಠಿ, ಥಿಯೇಟರ್ ಕಮಾಂಡ್‌ಗಳ (ITC) ರಚನೆ ಅಂತಿಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಭಾರತೀಯ ಸೇನಾ ಪಡೆಗಳ ನಡುವಿನ ಉತ್ತಮ ಸಮನ್ವಯತೆ ಹಾಗೂ ಸಂವಹನಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಮೂರು ಪಡೆಗಳು ಸೇರಿದ ಜಾಯಿಂಟ್ ಥಿಯೇಟರ್ ಕಮಾಂಡ್ ರಚಿಸಲು ನಾವು ಬದ್ದರಾಗಿದ್ದೇವೆ ಎಂದು ಅವರು ಹೇಳಿದರು.

ಆರಂಭಿಕ ಹಂತವಾಗಿ ಮಾನವ ಮಟ್ಟದಲ್ಲಿರುವ ಏಕೀಕೃತವನ್ನು ಉಲ್ಲೇಖಿಸಿದ ಅವರು, ಎಲ್ಲಾ ಹಂತದಲ್ಲಿ ಗರಿಷ್ಠ ಮಾತುಕತೆಗೆ ಸೇನಾಪಡೆ ಗಮನಹರಿಸಿದೆ. ಹೀಗಾಗಿ ಈಗ ನಾನು ಸೇನಾ ಸಹಚರ ಡಿ-ಕ್ಯಾಂಪ್ (ADC) ಹೊಂದಿದ್ದೇನೆ. ವಾಯು ಪಡೆ ಮುಖ್ಯಸ್ಥರು ನೌಕಪಡೆಯ ಲೆಫ್ಟಿನೆಂಟ್ ಪಡೆದಿದ್ದಾರೆ ಎಂದು ತಿಳಿಸಿದರು.

ಥಿಯೇಟರ್ ಕಮಾಂಡ್ ರಚನೆಯನ್ನು ಅಂತಿಮ ಗುರಿಯಾಗಿಟ್ಟುಕೊಂಡು ಏಕೀಕೃತ ಯೋಜನೆ, ಸಾಮಾನ್ಯ ಚಿತ್ರ ಮತ್ತು ಸಮಗ್ರ ಕಾರ್ಯಾಚರಣೆಯ ಉದ್ದೇಶದೊಂದಿಗೆ ಮುನ್ನಡೆಯುತ್ತಿದ್ದೇವೆ. ಈ ಒಗ್ಗಟ್ಟಿಗಾಗಿ ಕೌಶಲ್ಯ, ಸಾಮರ್ಥ್ಯ ಮತ್ತು ಟೀಮ್‌ವರ್ಕ್ ಪಡೆಯುವಾಗ ನಾಯಕತ್ವವು ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.