ದೇಶ

ಮುಂಬೈ: ಇಂಡಿಗೋ ವಿಮಾನದ ಹಿಂಭಾಗ ರನ್‌ವೇ ಸ್ಪರ್ಶಿಸಿ ಆತಂಕ, ಎರಡನೇ ಪ್ರಯತ್ನದಲ್ಲಿ ಯಶಸ್ವಿ ಲ್ಯಾಂಡಿಂಗ್!

ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟ ಮಾಡುವಾಗ ಈ ಘಟನೆ ನಡೆದಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಇಂಡಿಗೋ ತಿಳಿಸಿದೆ.

ಮುಂಬೈ: ಇಂಡಿಗೋ ವಿಮಾನದ ಹಿಂಭಾಗ ರನ್‌ವೇ ಸ್ಪರ್ಶಿಸಿ ಆತಂಕ, ಎರಡನೇ ಪ್ರಯತ್ನದಲ್ಲಿ ಯಶಸ್ವಿ ಲ್ಯಾಂಡಿಂಗ್!
ಇಂಡಿಗೋ ವಿಮಾನದ ಸಾಂದರ್ಭಿಕ ಚಿತ್ರ
Published On :

ಮುಂಬೈ: ಹವಾಮಾನ ವೈಫರೀತ್ಯದಿಂದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ಆಗುವಾಗ ಅದರ ಹಿಂಭಾಗ ರನ್ ವೇಗೆ ಸ್ಪರ್ಶಿಸಿರುವ ಘಟನೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ.

ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟ ಮಾಡುವಾಗ ಈ ಘಟನೆ ನಡೆದಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಇಂಡಿಗೋ ತಿಳಿಸಿದೆ.

ಬ್ಯಾಂಕಾಂಕ್ ನಿಂದ ಮುಂಬೈಗೆ ಆಗಮಿಸಿದ ಇಂಡಿಗೋದ ಏರ್‌ಬಸ್ ಎ-321 ವಿಮಾನ ಮಳೆಯ ಕಾರಣ ರನ್‌ವೇಯಲ್ಲಿ ಮೊದಲು ಲ್ಯಾಂಡಿಂಗ್‌ ಮಾಡಲು ಸಾಧ್ಯವಾಗಿರಲಿಲ್ಲ. ಈ ವೇಳೆ ವಿಮಾನವನ್ನು ಟೇಕ್ ಆಫ್ ಮಾಡುವಾಗ ಹಿಂಭಾಗ ರನ್‌ವೇಯನ್ನು ಸ್ಪರ್ಶಿಸಿದೆ. ಆದರೆ ಪೈಲಟ್ ಎರಡನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.

ನಿಯಮಗಳ ಪ್ರಕಾರ, ಅಗತ್ಯ ತಪಾಸಣೆ, ದುರಸ್ತಿ ಮತ್ತು ನಿಯಂತ್ರಕ ಅನುಮತಿ ಪಡೆದ ನಂತರವೇ ಸಂಬಂಧಪಟ್ಟ ವಿಮಾನವನ್ನು ಹಾರಿಸಲಾಗುತ್ತದೆ ಎಂದು ಏರ್ ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಸುರಕ್ಷತೆಯು ತನ್ನ ಪ್ರಮುಖ ಆದ್ಯತೆಯಾಗಿದೆ ಎಂದು IndiGo ಹೇಳಿದೆ. ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಘಟನೆಯಿಂದ ಪ್ರಯಾಣಿಕರಿಗೆ ಆದ ಅನಾನುಕೂಲತೆ ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.