ದೇಶ

'ಮತ ಕಳ್ಳತನ' BJP ತಿರುಗೇಟು: ಭಾರತದ ಪೌರತ್ವ ಇಲ್ಲದೆಯೇ ಸೋನಿಯಾ ಗಾಂಧಿ ಮತದಾರರ ಪಟ್ಟಿ ಸೇರಿದ್ದೇಗೆ?

ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಭಾರತೀಯ ಜನತಾ ಪಕ್ಷ (BJP) ಪ್ರತಿದಾಳಿ ನಡೆಸಿದ್ದು, ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ ಸಮಯವನ್ನು ಪ್ರಶ್ನಿಸಿದ್ದಾರೆ.

'ಮತ ಕಳ್ಳತನ' BJP ತಿರುಗೇಟು: ಭಾರತದ ಪೌರತ್ವ ಇಲ್ಲದೆಯೇ ಸೋನಿಯಾ ಗಾಂಧಿ ಮತದಾರರ ಪಟ್ಟಿ ಸೇರಿದ್ದೇಗೆ?
ಸೋನಿಯಾ ಗಾಂಧಿ-ರಾಹುಲ್ ಗಾಂಧಿ
Published On :

ನವದೆಹಲಿ: ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಭಾರತೀಯ ಜನತಾ ಪಕ್ಷ (BJP) ಪ್ರತಿದಾಳಿ ನಡೆಸಿದ್ದು, ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ ಸಮಯವನ್ನು ಪ್ರಶ್ನಿಸಿದ್ದು ಮತದಾರರ ಪಟ್ಟಿಯಲ್ಲಿನ ಅಕ್ರಮಗಳಿಂದ ವಿರೋಧ ಪಕ್ಷದ ನಾಯಕರು ಲಾಭ ಪಡೆದಿದ್ದಾರೆ ಎಂದು ಆರೋಪಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕೆಲವು ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರು ಒಳನುಸುಳುವವರ ಮತಗಳ ಸಹಾಯದಿಂದ ಚುನಾವಣೆಗಳನ್ನು ಗೆದ್ದಿದ್ದಾರೆ ಎಂದು ಆರೋಪಿಸಿದರು. ತನ್ನ 'ಮತ ಬ್ಯಾಂಕ್' ಅನ್ನು ರಕ್ಷಿಸಿಕೊಳ್ಳಲು ಬಿಹಾರದಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಪ್ರತಿನಿಧಿಸುವ ರಾಯ್‌ಬರೇಲಿ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರತಿನಿಧಿಸುವ ಕನ್ನೌಜ್‌ನಂತಹ ಕ್ಷೇತ್ರಗಳಲ್ಲಿ ನಕಲಿ ಮತದಾರರು, ನಕಲಿ ವಿಳಾಸಗಳು ಮತ್ತು ಸಾಮೂಹಿಕ ಮತದಾನದ ಪ್ರಕರಣಗಳನ್ನು ಠಾಕೂರ್ ಉಲ್ಲೇಖಿಸಿದ್ದಾರೆ.

ಪ್ರತ್ಯೇಕವಾಗಿ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಈ ಹಿಂದೆ 1980ರಲ್ಲಿ ಸೋನಿಯಾ ಗಾಂಧಿ ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲು ತಾವು ಇನ್ನೂ ಇಟಲಿಯ ಪೌರತ್ವವನ್ನು ಹೊಂದಿದ್ದಾಗಿ ಹೇಳಿಕೊಂಡಿದ್ದರು. ಸೋನಿಯಾ ಹೆಸರು ನವದೆಹಲಿಯ ಸಂಸದೀಯ ಕ್ಷೇತ್ರದ ಪಟ್ಟಿಯಲ್ಲಿ 1 ಮತ್ತು ಸಫ್ದರ್ಜಂಗ್ ರಸ್ತೆಯ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು ಅಂದು ಅದು ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕೃತ ನಿವಾಸವಾಗಿತ್ತು. ಗಾಂಧಿ ಕುಟುಂಬದ ಇತರ ಸದಸ್ಯರ ಜೊತೆಗೆ ಅವರ ಹೆಸರು ಕಾಣಿಸಿಕೊಂಡಿತ್ತು ಎಂದು ಮಾಳವೀಯ ಹೇಳಿದ್ದಾರೆ.

ಮತದಾರರ ನೋಂದಣಿಗೆ ಭಾರತೀಯ ಪೌರತ್ವ ಅಗತ್ಯವಿದ್ದರೂ ಅವರನ್ನು ಮತದಾರರಪಟ್ಟಿಯಲ್ಲಿ ಹೇಗೆ ಸೇರಿಸಲಾಯಿತು. ಈ ಮೂಲಕ ಚುನಾವಣಾ ಕಾನೂನುಗಳನ್ನು ನಮೂದು ಉಲ್ಲಂಘಿಸಿದೆ. ಅಲ್ಲದೆ 1983ರಲ್ಲಿ ಮತ್ತೆ ಕಾಣಿಸಿಕೊಳ್ಳುವ ಮೊದಲು ಅವರ ಹೆಸರನ್ನ 1982ರಲ್ಲಿ ಡಿಲೀಟ್ ಮಾಡಲಾಗಿತ್ತು ಎಂದು ಮಾಳವೀಯ ಆರೋಪಿಸಿದರು. ಇದು ಸ್ಪಷ್ಟ ಚುನಾವಣಾ ದುಷ್ಕೃತ್ಯವಲ್ಲದಿದ್ದರೆ, ಏನು? ಎಂತು ಮಾಳವೀಯ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬರೆದಿದ್ದಾರೆ.

ಆಗಸ್ಟ್ 7ರಂದು ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ "ಮತ ಕಳ್ಳತನ" ಆರೋಪ ಮಾಡಿದ್ದು ಈ ಬಗ್ಗೆ ತಮ್ಮ ಬಳಿ ಸಾಕ್ಷಿ ಇವೆ ಎಂದು ಹೇಳಿಕೊಂಡಿದ್ದರು. ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳ ಉದಾಹರಣೆಗಳನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿ, 'ಒಂದು ಕೋಟಿ ನಿಗೂಢ ಮತದಾರರು' ಇದ್ದಾರೆ ಎಂದು ಆರೋಪಿಸಿದರು. ಸಿಸಿಟಿವಿ ದೃಶ್ಯಾವಳಿಗಳ ನಾಶ ಮತ್ತು ಮತದಾರರಿಗೆ ಸಂಬಂಧಿಸಿದ ಡೇಟಾವನ್ನು ಹಂಚಿಕೊಳ್ಳಲು ಚುನಾವಣಾ ಸಂಸ್ಥೆ ನಿರಾಕರಿಸಿದೆ. ಚುನಾವಣಾ ಆಯೋಗವು ಎರಡೂ ಕಡೆಯ ಇತ್ತೀಚಿನ ಆರೋಪಗಳಿಗೆ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.