ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯೋಜನೆ ಇಲ್ಲ: ಸಂಸತ್ತಿಗೆ ಕೇಂದ್ರ ಸ್ಪಷ್ಟನೆ
ಹಸುಗಳ ಉತ್ತೇಜನ, ರಕ್ಷಣೆ ಮತ್ತು ಪಾಲನೆಗಾಗಿ ಕೈಗೊಂಡ ಉಪಕ್ರಮಗಳನ್ನು ಬೆಂಬಲಿಸಲು ಮತ್ತು ಬಲಪಡಿಸಲು ಕೇಂದ್ರ ಸರ್ಕಾರ ಡಿಸೆಂಬರ್ 2014 ರಿಂದ ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ಜಾರಿಗೊಳಿಸಿದೆ ಎಂದು ಸಚಿವರು ತಿಳಿಸಿದರು.

ನವದೆಹಲಿ: ಗೋವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಎಸ್ ಪಿ ಸಿಂಗ್ ಬಾಘೇಲ್ ಅವರು ಮಂಗಳವಾರ ಸಂಸತ್ತಿಗೆ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಹಿರಿಯ ಬಿಜೆಪಿ ನಾಯಕ ಮತ್ತು ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಬಘೇಲ್, "ಇಲ್ಲ ಸರ್. ಸಂವಿಧಾನದ 246(3) ನೇ ವಿಧಿಯ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸಕಾಂಗ ಅಧಿಕಾರಗಳ ವಿತರಣೆಯ ಅಡಿಯಲ್ಲಿ, ಪ್ರಾಣಿಗಳ ಸಂರಕ್ಷಣೆಯು ರಾಜ್ಯ ಶಾಸಕಾಂಗ ಶಾಸನ ಮಾಡಲು ವಿಶೇಷ ಅಧಿಕಾರ ಹೊಂದಿರುವ ವಿಷಯವಾಗಿದೆ" ಎಂದು ಹೇಳಿದರು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಸುಗಳ ಉತ್ತೇಜನ, ರಕ್ಷಣೆ ಮತ್ತು ಪಾಲನೆಗಾಗಿ ಕೈಗೊಂಡ ಉಪಕ್ರಮಗಳನ್ನು ಬೆಂಬಲಿಸಲು ಮತ್ತು ಬಲಪಡಿಸಲು ಕೇಂದ್ರ ಸರ್ಕಾರ ಡಿಸೆಂಬರ್ 2014 ರಿಂದ ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ಜಾರಿಗೊಳಿಸಿದೆ ಎಂದು ಸಚಿವರು ತಿಳಿಸಿದರು.
ಹಾಲು ಉತ್ಪಾದನೆಯಲ್ಲಿ, 2024 ರಲ್ಲಿ ದೇಶದ ಒಟ್ಟು ಹಾಲು ಉತ್ಪಾದನೆಯಾದ 239.30 ಮಿಲಿಯನ್ ಟನ್ಗಳಲ್ಲಿ ಹಸುವಿನ ಹಾಲಿನ ಕೊಡುಗೆ ಶೇಕಡಾ 53.12 ರಷ್ಟು ಇದೆ ಮತ್ತು ಎಮ್ಮೆ ಹಾಲು ಶೇಕಡಾ 43.62 ರಷ್ಟಿದೆ ಎಂದು ಬಘೇಲ್ ಸದನಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



