ದೇಶ

ರೈಲ್ವೆಯಿಂದ ಮೊದಲ ಬಾರಿ ರೌಂಡ್-ಟ್ರಿಪ್ ಪ್ಯಾಕೇಜ್ ಘೋಷಣೆ, ರಿಟರ್ನ್ ಟಿಕೆಟ್‌ ಮೇಲೆ ಭಾರಿ ರಿಯಾಯಿತಿ

ಈ ಯೋಜನೆ ಅಡಿ ಬುಕಿಂಗ್ ಆಗಸ್ಟ್ 14 ರಿಂದ ಬುಕಿಂಗ್ ಪ್ರಾರಂಭವಾಗಲಿದೆ. ಆದರೆ ಯೋಜನೆ ಅಡಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಶುಲ್ಕ ಮರುಪಾವತಿಯನ್ನು ಅನುಮತಿಸಲಾಗುವುದಿಲ್ಲ ಎಂದು ಸಚಿವಾಲಯ ಶನಿವಾರ ತಿಳಿಸಿದೆ.

ರೈಲ್ವೆಯಿಂದ ಮೊದಲ ಬಾರಿ ರೌಂಡ್-ಟ್ರಿಪ್ ಪ್ಯಾಕೇಜ್ ಘೋಷಣೆ, ರಿಟರ್ನ್ ಟಿಕೆಟ್‌ ಮೇಲೆ ಭಾರಿ ರಿಯಾಯಿತಿ
ಭಾರತೀಯ ರೈಲ್ವೆ
Published On :

ನವದೆಹಲಿ: ರೈಲ್ವೆ ಸಚಿವಾಲಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ, ರಿಟರ್ನ್ ಪ್ರಯಾಣ ಟಿಕೆಟ್‌ಗಳನ್ನು ಬುಕ್ ಮಾಡುವ ಪ್ರಯಾಣಿಕರಿಗೆ ಶೇ. 20 ರಷ್ಟು ರಿಯಾಯಿತಿ ನೀಡುವ ರೌಂಡ್-ಟ್ರಿಪ್ ಪ್ಯಾಕೇಜ್ ಘೋಷಿಸಿದೆ. ಈ ಯೋಜನೆ ಆರಂಭದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.

ಫ್ಲೆಕ್ಸಿ-ಫೇರ್ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುವ ರಾಜಧಾನಿ, ಡುರೊಂಟೊ ಮತ್ತು ಶತಾಬ್ದಿ ರೈಲುಗಳನ್ನು ಹೊರತುಪಡಿಸಿ, ಇತರ ಎಲ್ಲಾ ಕಾಯ್ದಿರಿಸಿದ ರೈಲುಗಳಲ್ಲಿ ಹೋಗಿ ಬರುವ ಎರಡೂ ಟಿಕೆಟ್ ಒಟ್ಟಿ ಬುಕ್ ಮಾಡಿದರೆ ಟಿಕೆಟ್ ದರದಲ್ಲಿ ಶೇ. 20 ರಷ್ಟು ರಿಯಾಯಿತಿ ಲಭ್ಯವಿದೆ.

ಈ ಯೋಜನೆ ಅಡಿ ಬುಕಿಂಗ್ ಆಗಸ್ಟ್ 14 ರಿಂದ ಬುಕಿಂಗ್ ಪ್ರಾರಂಭವಾಗಲಿದೆ. ಆದರೆ ಯೋಜನೆ ಅಡಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಶುಲ್ಕ ಮರುಪಾವತಿಯನ್ನು ಅನುಮತಿಸಲಾಗುವುದಿಲ್ಲ ಎಂದು ಸಚಿವಾಲಯ ಶನಿವಾರ ತಿಳಿಸಿದೆ.

ಶುಕ್ರವಾರ ಸಂಜೆ ಹೊರಡಿಸಲಾದ ವಾಣಿಜ್ಯ ಸುತ್ತೋಲೆಯ ಪ್ರಕಾರ, ಜನದಟ್ಟಣೆಯನ್ನು ತಪ್ಪಿಸಲು, ತೊಂದರೆ-ಮುಕ್ತ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು, ಹಬ್ಬದ ಋತುವಿನಲ್ಲಿ ಗರಿಷ್ಠ ದಟ್ಟಣೆಯನ್ನು ಮರುಹಂಚಿಕೆ ಮಾಡಲು ಮತ್ತು ವಿಶೇಷ ರೈಲುಗಳು ಸೇರಿದಂತೆ ರೈಲುಗಳ ಎರಡೂ ಮಾರ್ಗಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ರೂಪಿಸಲಾಗಿದೆ.

'ರೌಂಡ್-ಟ್ರಿಪ್ ಪ್ಯಾಕೇಜ್' (RTP) ಎಂದು ಹೆಸರಿಸಲಾದ ಈ ಯೋಜನೆಯು ಅಕ್ಟೋಬರ್ 13 ರಿಂದ ಅಕ್ಟೋಬರ್ 26 ರವರೆಗಿನ ಪ್ರಯಾಣಕ್ಕಾಗಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಶೇ. 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅದೇ ರೈಲಿನಲ್ಲಿ ನವೆಂಬರ್ 17 ರಿಂದ ಡಿಸೆಂಬರ್ 1 ರವರೆಗೆ ಹಿಂದಿರುಗುವ ಪ್ರಯಾಣಕ್ಕೆ ಮಾತ್ರ ಅನ್ವಯವಾಗುತ್ತದೆ. ಆಗಸ್ಟ್ 14 ರಿಂದ ಬುಕ್ ಮಾಡಿದ ಟಿಕೆಟ್‌ಗಳಿಗೆ ಮಾತ್ರ ರಿಯಾಯಿತಿ ಅನ್ವಯಿಸುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ರಾಜಧಾನಿ, ಶತಾಬ್ದಿ ಮತ್ತು ಡುರೊಂಟೊದಂತಹ ಫ್ಲೆಕ್ಸಿ-ಫೇರ್ ರೈಲುಗಳಲ್ಲಿ ಅಥವಾ ಫ್ಲೆಕ್ಸಿ-ಫೇರ್ ವ್ಯವಸ್ಥೆಯನ್ನು ಹೊಂದಿರುವ ಇತರ ರೈಲುಗಳಲ್ಲಿ ರಿಯಾಯಿತಿ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.