ದೇಶ

ಮಲಯಾಳಂ ನಿರ್ದೇಶಕ ಖಾಲಿದ್ ರೆಹಮಾನ್, ಅಶ್ರಫ್ ಹಮ್ಜಾ ಬಂಧನ: ಹೈಬ್ರಿಡ್ ಗಾಂಜಾ ವಶಕ್ಕೆ

ಇಬ್ಬರ ಬಳಿಯಿದ್ದ ಹೈಬ್ರಿಡ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಲಯಾಳಂ ನಿರ್ದೇಶಕ ಖಾಲಿದ್ ರೆಹಮಾನ್, ಅಶ್ರಫ್ ಹಮ್ಜಾ ಬಂಧನ: ಹೈಬ್ರಿಡ್ ಗಾಂಜಾ ವಶಕ್ಕೆ
ಬಂಧಿತ ಮಲಯಾಳಂ ನಿರ್ದೇಶಕರು.
Published On :

ಕೊಚ್ಚಿ: ಮಾದಕ ವಸ್ತುಗಳ ಇಟ್ಟುಕೊಂಡಿದ್ದ ಮಲೆಯಾಳಂ ಸಿನಿಮಾ ಇಬ್ಬರು ನಿರ್ದೇಶಕರನ್ನು ಕೊಚ್ಚಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಖಾಲೀದ್‌ ರೆಹಮಾನ್ ಹಾಗೂ ಆಶ್ರಫ್ ಹಮ್ಜಾ ಬಂಧಿತ ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರ ಬಳಿಯಿದ್ದ ಹೈಬ್ರಿಡ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೌಪ್ಯ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಇಂದು ಬೆಳಗಿನ ಜಾವ 2:30 ರ ಸುಮಾರಿಗೆ ನಿರ್ದೇಶಕರನ್ನು ಬಂಧನಕ್ಕೊಳಪಡಿಸಿದ್ದಾರೆ.

ಆಲಪ್ಪುಳ ಜಿಮ್ಖಾನಾ ಮತ್ತು ತಲ್ಲುಮಾಲಾದಂತಹ ಸಿನಿಮಾಗಳನ್ನು ನಿರ್ದೇಶಿಸಿದ ಮತ್ತು ಮಂಜುಮಲ್ ಬಾಯ್ಸ್ ಚಿತ್ರದಲ್ಲಿ ನಟಿಸಿದ್ದ ರೆಹಮಾನ್, ತಮಾಶಾ, ಭೀಮಂತೆ ವಾಝಿ ಮತ್ತು ಸುಲೈಖಾ ಮಂಜಿಲ್ ಚಿತ್ರದ ನಿರ್ದೇಶಕ ಹಮ್ಜಾ ಮನೆಗಳ ಮೇಲೆ ದಾಳಿ ನಡೆಸಿದಾಗ ಗಾಂಜಾ ಪತ್ತೆಯಾಗಿದ್ದು, ನಂತಹ ಇಬ್ಬರು ನಿರ್ದೇಶಕರು ಸೇರಿ ಹಲವರನ್ನು ಬಂಧನಕ್ಕೊಳಪಡಿಸಲಿದ್ದಾರೆಂದು ತಿಳಿದುಬಂದಿದೆ.

ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ, ಕೊಚ್ಚಿಯ ಗೋರ್ಸಿ ಬ್ರಿಡ್ಜ್‌ ಮೇಲೆ ದಾಳಿ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ರೆಹಮಾನ್ ಮತ್ತು ಹಮ್ಜಾ ನಿಯಮಿತ ಮಾದಕ ದ್ರವ್ಯ ಬಳಕೆದಾರರು ಎಂದು ಅಬಕಾರಿ ಇಲಾಖೆ ದೃಢಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.