ಜೂನ್‌ನಿಂದ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ
"ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ಆಯೋಜಿಸಿರುವ ಕೈಲಾಸ ಮಾನಸ ಸರೋವರ ಯಾತ್ರೆ ಜೂನ್ ನಿಂದ ಆಗಸ್ಟ್ 2025 ರವರೆಗೆ ನಡೆಯಲಿದೆ".

ನವದೆಹಲಿ: ಸುಮಾರು ಐದು ವರ್ಷಗಳ ಅಂತರದ ನಂತರ, ಜೂನ್‌ನಿಂದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸುವುದಾಗಿ ಭಾರತ ಶನಿವಾರ ಘೋಷಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಹಿ ಹಾಕಲಾದ ಒಪ್ಪಂದದ ಚೌಕಟ್ಟಿನಡಿಯಲ್ಲಿ ಸಂಬಂಧಗಳನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.
"ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ಆಯೋಜಿಸಿರುವ ಕೈಲಾಸ ಮಾನಸ ಸರೋವರ ಯಾತ್ರೆ ಜೂನ್ ನಿಂದ ಆಗಸ್ಟ್ 2025 ರವರೆಗೆ ನಡೆಯಲಿದೆ" ಎಂದು ಕೇಂದ್ರ ಸರ್ಕಾರ ತಿಳಿಸಿದೆ.
"ಈ ವರ್ಷ, 50 ಯಾತ್ರಿಗಳನ್ನು ಒಳಗೊಂಡ ಐದು ಬ್ಯಾಚ್‌ಗಳು ಮತ್ತು 50 ಯಾತ್ರಿಗಳನ್ನು ಒಳಗೊಂಡ 10 ಬ್ಯಾಚ್‌ಗಳು ಕ್ರಮವಾಗಿ ಲಿಪುಲೇಖ್ ಪಾಸ್‌ನಲ್ಲಿ ಉತ್ತರಾಖಂಡ ರಾಜ್ಯ ಕ್ರಾಸಿಂಗ್ ಓವರ್ ಮೂಲಕ ಮತ್ತು ನಾಥು ಲಾ ಪಾಸ್‌ನಲ್ಲಿ ಸಿಕ್ಕಿಂ ರಾಜ್ಯ ಕ್ರಾಸಿಂಗ್ ಓವರ್ ಮೂಲಕ ಪ್ರಯಾಣಿಸಲು ನಿರ್ಧರಿಸಲಾಗಿದೆ" ಎಂದು MEA ಪ್ರಕಟಣೆಯಲ್ಲಿ ತಿಳಿಸಿದೆ.
ಯಾತ್ರೆಗೆ ತೆರಳಲು kmy.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಎಂಇಎ ಹೇಳಿದೆ.
2020ರ ಕೋವಿಡ್ ಬಳಿಕ ಟಿಬೆಟ್‌ನ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಭೇಟಿ ನೀಡುವ ಈ ಯಾತ್ರೆಯನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಗಲ್ವಾನ್ ಘರ್ಷಣೆಯ ಬಳಿಕ ಬೀಜಿಂಗ್ ಮತ್ತು ನವದೆಹಲಿ ನಡುವಿನ ಮುನಿಸು ಮತ್ತೆ ಮುಂದುವರಿದಿತ್ತು. ಇದೀಗ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸಲು ಭಾರತ ಹಾಗೂ ಚೀನಾ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ನಿರ್ಧರಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



