Pahalgam attack: ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ; ಉಗ್ರರ ಗುಂಡಿಗೆ ಬಲಿಯಾದ ಶೈಲೇಶ್ ಕಲಾಥಿಯಾ ಪತ್ನಿ ರೋಧನ!
ಇನ್ನೂ ಆಘಾತದಲ್ಲಿರುವ ಶೀತಲ್, ಸಿನಿಮಾಗಳಲ್ಲಿ ಮಾತ್ರ ಹೀಗೆ ನಡೆಯುವುದನ್ನು ನೋಡಿದ್ದೆ. ಆದರೆ, ಇದನ್ನು ನಿಜ ಜೀವನದಲ್ಲಿ ನೋಡಿದಾಗ ಸಾಕಷ್ಟು ದು:ಖವಾಯಿತು ಎಂದರು.

ಸೂರತ್: ಜಮ್ಮು ಮತ್ತು ಕಾಶ್ಮೀರದಲ್ಲಿ ಪಹಲ್ಗಾಮ್ ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದಾಗ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿಯೂ ಇರಲಿಲ್ಲ ಎಂದು ದಾಳಿಯಲ್ಲಿ ಬಲಿಯಾದ ಉತ್ತರ ಪ್ರದೇಶದ ಶೈಲೇಶ್ ಕಲಾಥಿಯಾ ಅವರ ಪತ್ನಿ ಶೀತಲ್ ಕಲಥಿಯಾ ಹೇಳಿದ್ದಾರೆ.
ಭೀಕರ ಘಟನೆ ಕುರಿತು ಸುದ್ದಿಗಾರರೊಂದಿಗೆ ಕಣ್ಣೀರಿಟ್ಟು ಮಾತನಾಡಿದ ಅವರು, ಮಿನಿ ಸ್ವಿಟ್ಜರ್ಲೆಂಡ್‌ನ ತುದಿಯನ್ನು ತಲುಪಿದಾಗ ಎರಡು ಬಾರಿ ಗುಂಡಿನ ಸದ್ದು ಕೇಳಿತು. ತಕ್ಷಣ ಅಲ್ಲಿದ್ದವರು ಓಡಲು ಶುರು ಮಾಡಿದರು. ನಮ್ಮನ್ನು ಸುತ್ತುವರೆದ ಉಗ್ರರು, ಮುಸ್ಲಿಂ ಪುರುಷರಿಂದ ಹಿಂದೂ ವ್ಯಕ್ತಿಗಳು ಬೇರೆಯಾಗಲು ಹೇಳಿದರು. ನಾವೆಲ್ಲಾ ಮೌನವಾಗಿದ್ದೆವು. ಅವರು ಹೋಗ್ತಾರೆ ಅಂದುಕೊಂಡಿದ್ದೇವು. ಆದರೆ, ಒಂದೇ ಒಂದು ಸೆಕೆಂಡ್ ನಲ್ಲಿ ಎಲ್ಲವೂ ಮುಗಿಯಿತು. ಅವರೆಲ್ಲರೂ ಸಾಯುವುದನ್ನು ಅವರು ನೋಡಿದರು. ನಾನು ಏನು ಮಾಡಲು ಸಾಧ್ಯವಾಗಿಲಿಲ್ಲ ಎಂದು ತಿಳಿಸಿದರು.
ಇನ್ನೂ ಆಘಾತದಲ್ಲಿರುವ ಶೀತಲ್, ಸಿನಿಮಾಗಳಲ್ಲಿ ಮಾತ್ರ ಹೀಗೆ ನಡೆಯುವುದನ್ನು ನೋಡಿದ್ದೆ. ಆದರೆ, ಇದನ್ನು ನಿಜ ಜೀವನದಲ್ಲಿ ನೋಡಿದಾಗ ಸಾಕಷ್ಟು ದು:ಖವಾಯಿತು ಎಂದರು.
ಅಲ್ಲಿ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ಅಂತಹ ಪ್ರದೇಶಗಳಲ್ಲಿ ಉಗ್ರರ ಅಪಾಯದ ಬಗ್ಗೆ ತಿಳಿದಿದ್ದರೆ, ಭದ್ರತಾ ಸಿಬ್ಬಂದಿ ಯಾರನ್ನೂ ಅಲ್ಲಿಗೆ ಹೋಗಲು ಬಿಡಬಾರದು ಎಂದು ಅವರು ಹೇಳಿದರು. "ನನ್ನ ತಂದೆ, ನನ್ನ ತಾಯಿ ಮತ್ತು ನನ್ನ ಸಹೋದರಿ ಸೇರಿದಂತೆ ನಾವು ನಾಲ್ವರು ಹೋಗಿದ್ದೇವೆ" ಎಂದು ಉಗ್ರರ ಗುಂಡಿಗೆ ಬಲಿಯಾದ ಮೃತರ ಪುತ್ರ ನಕ್ಷ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



