ಶಿಕ್ಷಕರ ಉದ್ಯೋಗ ಭದ್ರತೆ ಬಗ್ಗೆ ಸರ್ಕಾರ 'ಕಾಳಜಿ ವಹಿಸುತ್ತದೆ': ಮಮತಾ; 'ಪೊಳ್ಳು ಭರವಸೆ' ಎಂದ ಪ್ರತಿಭಟನಾಕಾರರು
ಸೋಮವಾರ ಸಂಜೆ 6 ಗಂಟೆಯೊಳಗೆ ಕಳಂಕರಹಿತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಮತ್ತು ಅರ್ಹ ಶಿಕ್ಷಕರನ್ನು ಗುರುತಿಸಲು ವಿಫಲವಾದ ನಂತರ ಎಸ್ಎಸ್ಸಿ ಎಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.

ಕೋಲ್ಕತ್ತಾ: ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಶಿಕ್ಷಕರು ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ಪ್ರಧಾನ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಉದ್ಯೋಗ ಭದ್ರತೆಯ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಭರವಸೆ ನೀಡಿದ್ದಾರೆ. ಆದರೆ ಇದು 'ಪೊಳ್ಳು ಭರವಸೆ' ಎಂದು ಪ್ರತಿಭಟನಾನಿರತ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಂಜೆ 6 ಗಂಟೆಯೊಳಗೆ ಕಳಂಕರಹಿತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಮತ್ತು ಅರ್ಹ ಶಿಕ್ಷಕರನ್ನು ಗುರುತಿಸಲು ವಿಫಲವಾದ ನಂತರ ಎಸ್ಎಸ್ಸಿ ಎಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ, ಹಿಂದಿನ ದಿನ, ಪ್ರತಿಭಟನಾ ನಿರತ ಶಿಕ್ಷಕರು ಕೆಲಸಕ್ಕೆ ಮರಳುವಂತೆ ಒತ್ತಾಯಿಸಿದರು ಮತ್ತು ತಮ್ಮ ಸರ್ಕಾರ ನಿಮ್ಮ ಉದ್ಯೋಗವನ್ನು ರಕ್ಷಿಸುತ್ತದೆ ಎಂದು ಭರವಸೆ ನೀಡಿದರು.
"ಯಾರು ಕಳಂಕಿತರು ಮತ್ತು ಯಾರು ಕಳಂಕ ರಹಿತರು ಎಂಬ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ನಿಮಗೆ ನಿಮ್ಮ ಕೆಲಸವಿದೆಯೇ ಮತ್ತು ನೀವು ನಿಮ್ಮ ಸಂಬಳವನ್ನು ಸಮಯಕ್ಕೆ ಪಡೆಯುತ್ತಿದ್ದೀರಾ ಎಂಬುದರ ಬಗ್ಗೆ ಮಾತ್ರ ಯೋಚಿಸಿ. ಕಳಂಕಿತ ಮತ್ತು ಕಳಂಕರಹಿತ ಶಿಕ್ಷಕರನ್ನು ಗುರುತಿಸುವ ಪಟ್ಟಿ ಸರ್ಕಾರ ಮತ್ತು ನ್ಯಾಯಾಲಯದಲ್ಲಿ ಉಳಿದಿದೆ" ಎಂದು ಮಮತಾ ಬ್ಯಾನರ್ಜಿ ಮಿಡ್ನಾಪುರದಲ್ಲಿ ನಡೆದ ಆಡಳಿತಾತ್ಮಕ ಕಾರ್ಯಕ್ರಮದಲ್ಲಿ ಹೇಳಿದ್ದರು.
"ನಿಮ್ಮ ಉದ್ಯೋಗ ಸದ್ಯಕ್ಕೆ ಸುರಕ್ಷಿತವಾಗಿದೆ ಮತ್ತು ನಿಮಗೆ ಸಂಬಳ ಸಿಗುತ್ತದೆ ಎಂದು ನಾವು ಭರವಸೆ ನೀಡುತ್ತೇವೆ. ದಯವಿಟ್ಟು ನಿಮ್ಮ ಶಾಲೆಗಳಿಗೆ ಹಿಂತಿರುಗಿ ಮತ್ತು ತರಗತಿಗಳನ್ನು ಪುನರಾರಂಭಿಸಿ. ನಿನ್ನೆ ರಾತ್ರಿಯಿಂದ ನಾನು ಇದರ ಬಗ್ಗೆ ಹಲವಾರು ಬಾರಿ ಮಾತನಾಡಿದ್ದೇನೆ. ನಾವು ನಿಮ್ಮೊಂದಿಗಿದ್ದೇವೆ" ಎಂದು ಸಿಎಂ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



