ದೇಶ

ಜಾಮ್ ನಗರದಿಂದ ದ್ವಾರಕಾಕ್ಕೆ ಅನಂತ್ ಅಂಬಾನಿ 141 ಕಿ.ಮೀ ಪಾದಯಾತ್ರೆ!

ದೈವಭಕ್ತರೂ ಆಗಿರುವ ಅನಂತ್, ಗುಜರಾತ್‌ನ ಜಾಮ್‌ನಗರದಿಂದ ದೇವಭೂಮಿ ದ್ವಾರಕಾಕ್ಕೆ 141 ಕಿ.ಮೀ ಪಾದಯಾತ್ರೆ ಹೊರಟಿದ್ದಾರೆ.

ಜಾಮ್ ನಗರದಿಂದ ದ್ವಾರಕಾಕ್ಕೆ ಅನಂತ್ ಅಂಬಾನಿ 141 ಕಿ.ಮೀ ಪಾದಯಾತ್ರೆ!
ಅನಂತ್ ಅಂಬಾನಿ ಪಾದಯಾತ್ರೆ
Published On :

ಮುಂಬಯಿ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಯ ನಿರ್ದೇಶಕ ಅನಂತ್ ಅಂಬಾನಿ ಅವರು ಪಾದಯಾತ್ರೆ ಹೊರಟಿದ್ದಾರೆ.

ದೈವಭಕ್ತರೂ ಆಗಿರುವ ಅನಂತ್, ಗುಜರಾತ್‌ನ ಜಾಮ್‌ನಗರದಿಂದ ದೇವಭೂಮಿ ದ್ವಾರಕಾಕ್ಕೆ 141 ಕಿ.ಮೀ ಪಾದಯಾತ್ರೆ ಹೊರಟಿದ್ದಾರೆ. ಸದ್ಯ ಅವರು ದ್ವಾರಕಾದ ಸನಿಹ ಇದ್ದಾರೆ. ಮುಂದಿನ ನಾಲ್ಕೈದು ದಿನದಲ್ಲಿ ಅವರು ದ್ವಾರಕಾ ತಲುಪಲಿದ್ದಾರೆ.

ಏಪ್ರಿಲ್ 10 ರಂದು ಅನಂತ್ ಅವರ ಜನ್ಮದಿನವಿದ್ದು ಆ ಪ್ರಯುಕ್ತ ಪಾದಯಾತ್ರೆ ಮೂಲಕ ದ್ವಾರಕಾ ತೆರಳಿ ಭಗವಾನ್ ಕೃಷ್ಣನ ದರ್ಶನ ಮಾಡಲಿದ್ದಾರೆ. ಅಲ್ಲದೇ ಅವರು ದ್ವಾರಕಾದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಭದ್ರತೆ ಕಾರಣದಿಂದ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂದು ಅನಂತ್ ಅಂಬಾನಿ ಅವರು ರಾತ್ರಿ ಹೊತ್ತು ಪಾದಯಾತ್ರೆಯನ್ನು ಮಾಡುತ್ತಿದ್ದಾರೆ.

ಕಳೆದ ಐದು ದಿನದ ಹಿಂದೆ ಜಾಮ್‌ನಗರದ ನಮ್ಮ ಮನೆಯಿಂದ ದ್ವಾರಕಾಕ್ಕೆ ಪಾದಯಾತ್ರೆ ಆರಂಭಿಸಿದ್ದೇನೆ. ಯಾವುದೇ ಕೆಲಸ ಮಾಡುವ ಮೊದಲು ನಾವು ದೇವರಲ್ಲಿ ನಂಬಿಕೆ ಇಟ್ಟರೇ ಅದು ಖಂಡಿತವಾಗಿಯೂ ಕೈಗೂಡುತ್ತದೆ. ದೇವರು ಇರುವಾಗ ಚಿಂತೆಗೆ ಜಾಗ ಇಲ್ಲ. ದ್ವಾರಕಾಧೀಶನು ನಮ್ಮನ್ನು ಆಶೀರ್ವದಿಸಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.