ದೇಶ

ಮುಂಬೈ: ದೇಶದ ಅತಿ ಉದ್ದದ ಸಮುದ್ರ ಸೇತುವೆಗೆ ಜ.12 ರಂದು ಚಾಲನೆ, ಕಾರುಗಳಿಗೆ 250 ರೂ. ಟೋಲ್!

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 12 ರಂದು ಉದ್ಘಾಟಿಸಲಿರುವ ದೇಶದ ಅತಿ ಉದ್ದದ ಸಮುದ್ರ ಸೇತುವೆ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್(MTHL) ನಲ್ಲಿ ಕಾರುಗಳಿಗೆ ಒಂದು ಸೈಡ್ ಗೆ 250 ರೂಪಾಯಿ ಟೋಲ್ ವಿಧಿಸುವ ಪ್ರಸ್ತಾವನೆಗೆ...

ಮುಂಬೈ: ದೇಶದ ಅತಿ ಉದ್ದದ ಸಮುದ್ರ ಸೇತುವೆಗೆ ಜ.12 ರಂದು ಚಾಲನೆ, ಕಾರುಗಳಿಗೆ 250 ರೂ. ಟೋಲ್!
ಸಮುದ್ರ ಸೇತುವೆ
Published On :

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 12 ರಂದು ಉದ್ಘಾಟಿಸಲಿರುವ ದೇಶದ ಅತಿ ಉದ್ದದ ಸಮುದ್ರ ಸೇತುವೆ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್(MTHL) ನಲ್ಲಿ ಕಾರುಗಳಿಗೆ ಒಂದು ಸೈಡ್ ಗೆ 250 ರೂಪಾಯಿ ಟೋಲ್ ವಿಧಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.

ಟೋಲ್ ಸಂಗ್ರಹ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಅರ್ಧದಷ್ಟು ಮೊತ್ತವನ್ನು ಮಾತ್ರ ವಿಧಿಸಲಾಗುತ್ತಿದೆ ಎಂದು ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರದ ಕುರಿತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಯಾಣಿಕ ಕಾರಿಗೆ 250 ಏಕಮುಖ ಟೋಲ್ ವಿಧಿಸಲಾಗುವುದು. ಆದರೆ ಹಿಂದಿರುಗುವ ಪ್ರಯಾಣಕ್ಕೆ ಮತ್ತು ದೈನಂದಿನ ಮತ್ತು ಆಗಾಗ್ಗೆ ಪ್ರಯಾಣಿಕರಿಗೆ ಶುಲ್ಕಗಳು ವಿಭಿನ್ನವಾಗಿರುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ.

ಒಟ್ಟು 21.8 ಕಿಮೀ ಉದ್ದದ ಈ ಸೇತುವೆ, ಅಧಿಕೃತವಾಗಿ ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುವೆಯನ್ನು 21,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈ ಸೇತುವೆ ರಾಯಗಢ ಜಿಲ್ಲೆಯ ಪನ್ವೆಲ್ ಮತ್ತು ದಕ್ಷಿಣ ಮಧ್ಯ ಮುಂಬೈನ ಸೆವ್ರಿ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ ಮತ್ತು ಪ್ರಯಾಣದ ಸಮಯ ಸುಮಾರು ಎರಡು ಗಂಟೆಗಳಿಂದ 15 ರಿಂದ 20 ನಿಮಿಷಗಳಿಗೆ ಇಳಿಯಲಿದೆ ಎಂದು ಕ್ಯಾಬಿನೆಟ್ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿ ಪ್ರಯಾಣಕ್ಕೆ ಇಂಧನ ವೆಚ್ಚದಲ್ಲಿ ಸುಮಾರು 500 ರೂಪಾಯಿ ಉಳಿತಾಯವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.