ದೇಶ

ಛತ್ತೀಸ್‌ಗಢ: ದಾಂತೇವಾಡದಲ್ಲಿ 3 ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಶರಣಾಗತಿ

ಇವರಲ್ಲಿ ಹಂಗಾ ತಮೋ ಅಲಿಯಾಸ್ ತಮೋ ಸೂರ್ಯ (37) ಮತ್ತು ಆತನ ಪತ್ನಿ ಆಯ್ತಿ ತಾತಿ (35) ತಲೆಯ ಮೇಲೆ ತಲಾ 8 ಲಕ್ಷ ರೂಪಾಯಿ ಬಹುಮಾನ ಘೋಷಸಲಾಗಿತ್ತು.

ಛತ್ತೀಸ್‌ಗಢ: ದಾಂತೇವಾಡದಲ್ಲಿ 3 ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಶರಣಾಗತಿ
ಸಾಂದರ್ಭಿಕ ಚಿತ್ರ
Published On :

ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಮೂವರು ಮಹಿಳಾ ನಕ್ಸಲೀಯರು ಹಾಗೂ ಓರ್ವ ಪುರುಷ ನಕ್ಸಲ್ ಸೇರಿದಂತೆ ಒಟ್ಟು ನಾಲ್ವರು ನಕ್ಸಲೀಯರು ಶರಣಾಗಿದ್ದಾರೆ. ಇವರ ತಲೆ ಒಟ್ಟು 20 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಇದರೊಂದಿಗೆ ಜೂನ್ 2020 ರಲ್ಲಿ ಪ್ರಾರಂಭಿಸಲಾದ 'ಲೋನ್ ವರ್ರಟು' (ಸ್ಥಳೀಯ ಗೊಂಡಿ ಭಾಷೆಯಲ್ಲಿ ನಿಮ್ಮ ಮನೆಗೆ, ಗ್ರಾಮಕ್ಕೆ ಹಿಂತಿರುಗಿ) ಅಭಿಯಾನದ ಅಡಿಯಲ್ಲಿ ತಲೆಗೆ ಬಹುಮಾನ ಘೋಷಿಸಲಾದ 187 ಸೇರಿದಂತೆ ಒಟ್ಟು 872 ನಕ್ಸಲೀಯರು ಜಿಲ್ಲೆಯಲ್ಲಿ ಹಿಂಸಾಚಾರವನ್ನು ತೊರೆದಿದ್ದಾರೆ ಎಂದು ಅವರು ಹೇಳಿದರು.

ಇತ್ತೀಚಿನ ದಂಪತಿ ಸೇರಿದಂತೆ ನಾಲ್ವರು ನಕ್ಸಲೀಯರು ದಾಂತೇವಾಡದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಪೊಳ್ಳು ಮತ್ತು "ಅಮಾನವೀಯ" ಮಾವೋವಾದಿ ಸಿದ್ಧಾಂತ ಮತ್ತು ಕಾನೂನುಬಾಹಿರ ಸಂಘಟನೆಯೊಳಗಿನ ಆಂತರಿಕ ಕಲಹ ತಮ್ಮಲ್ಲಿ ನಿರಾಸೆ ಉಂಟು ಮಾಡಿರುವುದಾಗಿ ಹೇಳಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಹೇಳಿದ್ದಾರೆ.

ಇವರಲ್ಲಿ ಹಂಗಾ ತಮೋ ಅಲಿಯಾಸ್ ತಮೋ ಸೂರ್ಯ (37) ಮತ್ತು ಆತನ ಪತ್ನಿ ಆಯ್ತಿ ತಾತಿ (35) ತಲೆಯ ಮೇಲೆ ತಲಾ 8 ಲಕ್ಷ ರೂಪಾಯಿ ಬಹುಮಾನ ಘೋಷಸಲಾಗಿತ್ತು. 2018 ರಲ್ಲಿ ಛತ್ತೀಸ್‌ಗಢ-ತೆಲಂಗಾಣ ಅಂತರರಾಜ್ಯ ಗಡಿಯಲ್ಲಿರುವ ಪಾಮ್ಡೆ (ಬಿಜಾಪುರ) ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಅವರು ಭಾಗಿಯಾಗಿದ್ದಾರೆ .

ಇತರ ಮೂವರು ಮಹಿಳಾ ನಕ್ಸಲೀಯರು ಕ್ರಮವಾಗಿ 3 ಲಕ್ಷ ಮತ್ತು 1 ಲಕ್ಷ ರೂಪಾಯಿ ಬಹುಮಾನವನ್ನು ಹೊಂದಿದ್ದರು.ಶರಣಾದ ನಾಲ್ವರಿಗೆ ತಲಾ 25,000 ರೂಪಾಯಿ ನೆರವು ನೀಡಲಾಗಿದ್ದು, ಸರ್ಕಾರದ ನೀತಿಯನ್ನು ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುವುದು ಎಂದು ರೈ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.