ಪ್ರಾಣ ಉಳಿಸಿಕೊಳ್ಳಲು ಓಡಿಹೋಗುತ್ತಿದ್ದ ಉಗ್ರನನ್ನು ಭಾರತೀಯ ಸೇನೆ ಸದೆಬಡಿದ ದೃಶ್ಯ; ಡ್ರೋನ್ ಕ್ಯಾಮೆರಾದಲ್ಲಿ ಸೆರೆ!
ಡ್ರೋನ್ ದೃಶ್ಯಗಳಲ್ಲಿ ಭಯೋತ್ಪಾದಕನೊಬ್ಬ ಮನೆಯಿಂದ ಹೊರಬಂದು ಓಡಿ ಹೋಗಲು ಯತ್ನಿಸುತ್ತಿದ್ದನು. ಈ ವೇಳೆ ಭಾರತೀಯ ಸೇನೆಯ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕನೊಬ್ಬ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಓಡಿಹೋಗುತ್ತಿದ್ದು ಆದರೆ ಸೇನಾ ಸಿಬ್ಬಂದಿಗಳು ಆತನನ್ನು ಕೊಂದಿದ್ದಾರೆ. ಬಾರಾಮುಲ್ಲಾದಲ್ಲಿ ಈ ಎನ್‌ಕೌಂಟರ್ ನಡೆದಿತ್ತು ರಾಷ್ಟ್ರೀಯ ರೈಫಲ್ಸ್ ಕಮಾಂಡರ್ ಬ್ರಿಗೇಡಿಯರ್ ಸಂಜಯ್ ಕನ್ನೋತ್ ಅವರು, 'ಬಾರಾಮುಲ್ಲಾದ ಚಕ್ ಟಪ್ಪರ್ ಕ್ರಿಯರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಡ್ರೋನ್ ದೃಶ್ಯಗಳಲ್ಲಿ ಭಯೋತ್ಪಾದಕನೊಬ್ಬ ಮನೆಯಿಂದ ಹೊರಬಂದು ಓಡಿ ಹೋಗಲು ಯತ್ನಿಸುತ್ತಿದ್ದನು. ಈ ವೇಳೆ ಭಾರತೀಯ ಸೇನೆಯ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಭೀಕರ ಗುಂಡಿನ ದಾಳಿಯ ನಡುವೆ, ಉಗ್ರ ನೆಲದ ಮೇಲೆ ಬಿದ್ದು ಕೆಲವು ಮೀಟರ್‌ಗಳವರೆಗೆ ನೆಲದ ಮೇಲೆ ತೆವಳುತ್ತಾ ಹೋಗೆ ಗಿಡಗಳ ಕೆಳಗೆ ಅವಿತು ಕುಳಿತುಕೊಳ್ಳುತ್ತಾನೆ. ಆದರೆ ಸೇನಾ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಭಯೋತ್ಪಾದಕ ಸಾವನ್ನಪ್ಪಿದ್ದಾನೆ.
ಭಯೋತ್ಪಾದಕರ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆದ ನಂತರ, ಭದ್ರತಾ ಪಡೆಗಳು ಶುಕ್ರವಾರ ತಡರಾತ್ರಿ ಉತ್ತರ ಕಾಶ್ಮೀರ ಜಿಲ್ಲೆಯ ಪಟ್ಟಾನ್ ಪ್ರದೇಶದ ಚಕ್ ತಪ್ಪರ್ ಕ್ರಿರಿಯಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು ಎಂದು ರಾಷ್ಟ್ರೀಯ ರೈಫಲ್ಸ್ ಕಮಾಂಡರ್ ಬ್ರಿಗೇಡಿಯರ್ ಸಂಜಯ್ ಕನ್ನೋತ್ ಹೇಳಿದ್ದಾರೆ. ಖಾಲಿ ಕಟ್ಟಡದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬ್ರಿಗೇಡಿಯರ್ ಕಣ್ಣೋತ್ ತಿಳಿಸಿದ್ದಾರೆ.
ನಾವು ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದ್ದೇವೆ. ಮೊದಲಿಗೆ ಸ್ಥಳವನ್ನು ಸುತ್ತುವರಿಯಲಾಯಿತು. ನಂತರ ಹೆಚ್ಚುವರಿ ಪಡೆಗಳನ್ನು ಅಲ್ಲಿಗೆ ಕರೆಸಿಕೊಳ್ಳಲಾಯಿತು. ರಾತ್ರಿಯಿಡೀ ಯೋಧರ ಮೇಲೆ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದ್ದು, ಅದಕ್ಕೆ ತಕ್ಕ ಉತ್ತರ ನೀಡಲಾಯಿತು. ಇದಕ್ಕೂ ಮೊದಲು ಕುಪ್ವಾರದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಇಬ್ಬರು ಸೇನಾ ಯೋಧರು ಹುತಾತ್ಮರಾಗಿದ್ದರು. ಸುಮಾರು ಹತ್ತು ವರ್ಷಗಳ ನಂತರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜಮ್ಮು-ಕಾಶ್ಮೀರದಲ್ಲಿ ಪ್ರಚಾರ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



