ದೇಶ

ಉತ್ತರ ಪ್ರದೇಶ: ಸುಲ್ತಾನ್‌ಪುರದಲ್ಲಿ ಗುಂಡಿಕ್ಕಿ ಬಿಜೆಪಿ ಮುಖಂಡನ ಸೋದರಳಿಯನ ಹತ್ಯೆ

ಬಿಜೆಪಿ ಮಂಡಲ ಅಧ್ಯಕ್ಷ ರಾಮ್ ಅಭಿಲಾಖ್ ಸಿಂಗ್ ಅವರ ಸೋದರಳಿಯ ಅಭಯ್ ಪ್ರತಾಪ್ ಸಿಂಗ್ ಗುಂಡೇಟಿಗೆ ಬಲಿಯಾದ ಯುವಕ.

ಉತ್ತರ ಪ್ರದೇಶ: ಸುಲ್ತಾನ್‌ಪುರದಲ್ಲಿ ಗುಂಡಿಕ್ಕಿ ಬಿಜೆಪಿ ಮುಖಂಡನ ಸೋದರಳಿಯನ ಹತ್ಯೆ
ಸಾಂದರ್ಭಿಕ ಚಿತ್ರ
Published On :

ಸುಲ್ತಾನ್ ಪುರ: ಉತ್ತರ ಪ್ರದೇಶದ ಸುಲ್ತಾನ್ ಪುರ ಬಳಿ ಮಂಗಳವಾರ ನಡೆದ ಹೊಡೆದಾಟದ ವೇಳೆ ಬಿಜೆಪಿ ಮುಖಂಡನ 23 ವರ್ಷದ ಸೋದರಳಿಯನನ್ನು ಮತ್ತೊಬ್ಬ ಯುವಕ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಮಂಡಲ ಅಧ್ಯಕ್ಷ ರಾಮ್ ಅಭಿಲಾಖ್ ಸಿಂಗ್ ಅವರ ಸೋದರಳಿಯ ಅಭಯ್ ಪ್ರತಾಪ್ ಸಿಂಗ್ ಗುಂಡೇಟಿಗೆ ಬಲಿಯಾದ ಯುವಕ.

ಕೋಟ್ವಾಲಿ ನಗರದ ಪಯಾಗಿಪುರ ಪ್ರದೇಶದ ರೆಸ್ಟೋರೆಂಟ್‌ನ ಹೊರಗೆ ಘಟನೆ ನಡೆದಿದ್ದು, ಕ್ಷುಲಕ ವಿವಾದಕ್ಕೆ ಇಬ್ಬರು ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೆಲವು ಕಾಲ ಗಲಾಟೆ ನಡೆದಿದ್ದು, ಒಬ್ಬ ಯುವಕ ಅಭಿಲಾಸ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾನೆ.

ನಂತರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಆತನ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ವೈಯಕ್ತಿಕ ವಿವಾದದಿಂದ ಈ ಘಟನೆ ನಡೆದಿದ್ದು, ಶಂಕಿತನನ್ನು ಬಂಧಿಸಿದ ನಿಖರ ಕಾರಣ ತಿಳಿದುಬರಲಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮೆನ್ ಬರ್ಮಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.