ಆಲ್ ಇಂಡಿಯಾ ಅನಿಮಲ್ ಪ್ರೊಟೆಕ್ಷನ್ ಬಿಷ್ಣೋಯ್ ಯುವ ಸಮಾಜದ ಮುಖ್ಯಸ್ಥನಾಗಿ ಲಾರೆನ್ಸ್ ಬಿಷ್ಣೋಯ್ ಆಯ್ಕೆ!
ಅಕ್ಟೋಬರ್ 29 ರಂದು ಸಂಜೆ ಅಬೋಹರ್‌ನಲ್ಲಿ ನಡೆದ ಬಿಷ್ಣೋಯ್ ಸಮಾಜದ ಸಭೆಯಲ್ಲಿ ಬಿಷ್ಣೋಯ್ ನನ್ನು ಆಯ್ಕೆ ಮಾಡಲಾಯಿತು.

ಚಂಡೀಗಡ: ಸದ್ಯ ಅಹಮದಾಬಾದ್‌ನ ಸಬರಮತಿ ಸೆಂಟ್ರಲ್ ಜೈಲಿನಲ್ಲಿರುವ 33 ವರ್ಷದ ಲಾರೆನ್ಸ್ ಬಿಷ್ಣೋಯ್ ನನ್ನು ಆಲ್ ಇಂಡಿಯಾ ಅನಿಮಲ್ ಪ್ರೊಟೆಕ್ಷನ್ ಬಿಷ್ಣೋಯ್ ಸೊಸೈಟಿಯ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾನೆ.
ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಮುಂಬೈನಲ್ಲಿ ಮೂರು ಡಜನ್‌ಗಿಂತಲೂ ಹೆಚ್ಚು ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದಾನೆ, ಭಾರತ ಸರ್ಕಾರದ ಆದೇಶದ ಮೇರೆಗೆ ಆತನಿಗೆ ಗುತ್ತಿಗೆ ನೀಡಿ ಅಪರಾಧ ನಡೆಸಲಾಗತ್ತಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ.
ಅಕ್ಟೋಬರ್ 29 ರಂದು ಸಂಜೆ ಅಬೋಹರ್‌ನಲ್ಲಿ ನಡೆದ ಬಿಷ್ಣೋಯ್ ಸಮಾಜದ ಸಭೆಯಲ್ಲಿ ಬಿಷ್ಣೋಯ್ ನನ್ನು ಆಯ್ಕೆ ಮಾಡಲಾಯಿತು. ಬಿಷ್ಣೋಯ್ ಸಮಾಜದ ಮುಖ್ಯಸ್ಥ ಇಂದರ್‌ಪಾಲ್ ಬಿಷ್ಣೋಯ್ ನೀಡಿದ ನೇಮಕಾತಿ ಪ್ರಮಾಣಪತ್ರದ ಪ್ರಕಾರ, ಬಿಷ್ಣೋಯ್ ಸಮುದಾಯದ ತತ್ವಗಳ ಪ್ರಕಾರ ಪ್ರಾಣಿಗಳ ರಕ್ಷಣೆಯನ್ನು ಮಾಡುವ ಕಾರ್ಯವನ್ನು ವಹಿಸಲಾಗಿದೆ. ಪಂಜಾಬ್‌ನ ಅಬೋಹರ್‌ನಲ್ಲಿರುವ ದುತ್ರನ್‌ವಾಲಿ ಗ್ರಾಮದ ರವೀಂದರ್ ಪುತ್ರ ಲಾರೆನ್ಸ್ ಬಿಷ್ಣೋಯ್ ನನ್ನು ಆಲ್ ಇಂಡಿಯಾ ಅನಿಮಲ್ ಪ್ರೊಟೆಕ್ಷನ್ ಬಿಷ್ಣೋಯ್ ಸಮಾಜದ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ನೇಮಿಸಲಾಗಿದೆ ಎಂದು ಪ್ರಮಾಣೀಕರಿಸಲಾಗಿದೆ.
ಪ್ರಾಣಿಗಳು, ಪರಿಸರವನ್ನು ರಕ್ಷಿಸುವುದು ಮತ್ತು ಕೆಲಸವನ್ನು ಮುಂದುವರಿಸಬೇಕಾಗಿದೆ. 1730 ರಲ್ಲಿ ರಾಜಸ್ಥಾನದಲ್ಲಿ ಖೇಜರಿ ಮರಗಳನ್ನು ಉಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಮೃತಾ ದೇವಿ ಬಿಷ್ಣೋಯಿ ಮತ್ತು 363 ಬಿಷ್ಣೋಯಿಗಳ ಪರಂಪರೆಯನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



