ಭಾರತ-ಪಾಕಿಸ್ತಾನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ: ಇನ್ನೂ ಐದು ವರ್ಷ ವಿಸ್ತರಣೆ!
2021ರಲ್ಲಿ ಭಾರತದಿಂದ ಒಟ್ಟು 10, 025 ಯಾತ್ರಿಕರು 4 ಕಿ. ಮೀ. ದೂರದ ಕರ್ತಾರ್ ಪುರ ಕಾರಿಡಾರ್ ಮೂಲಕ ಗುರದ್ವಾರಕ್ಕೆ ತೆರಳಿದ್ದರೆ, 2022 ರಲ್ಲಿ 86, 097 ಮತ್ತು 2023ರಲ್ಲಿ 96,555 ಯಾತ್ರಿಕರು ತೆರಳಿದ್ದಾರೆ ಎನ್ನಲಾಗಿದೆ.

ಚಂಡೀಗಢ: ಭಾರತದಿಂದ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳುವ ಯಾತ್ರಿಕರ ಅಡೆತಡೆಯಿಲ್ಲದ ಪ್ರಯಾಣ ಖಾತ್ರಿಗೆ ಕರ್ತಾರ್‌ಪುರ- ಕಾರಿಡಾರ್‌ನ ಒಪ್ಪಂದದ ಮಾನ್ಯತೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ.
ಗುರುದ್ವಾರಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಾರತೀಯ ಯಾತ್ರಾರ್ಥಿಗಳ ಮೇಲೆ ವಿಧಿಸುವ 20 ಅಮೆರಿಕನ್ ಡಾಲರ್ ಸೇವಾ ಶುಲ್ಕವನ್ನು ಪಾಕಿಸ್ತಾನ ರದ್ದು ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪುನರುಚ್ಚರಿಸಿದೆ.
ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಒಪ್ಪಂದದ ಮಾನ್ಯತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಮೂಲಕ ಪಾಕಿಸ್ತಾನದ ನರೋವಾಲ್‌ನ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರಕ್ಕೆ ಭಾರತದಿಂದ ಯಾತ್ರಿಕರ ಭೇಟಿಗೆ ಅನುಕೂಲವಾಗುವಂತೆ ಅಕ್ಟೋಬರ್ 24, 2019 ರಂದು ಐದು ವರ್ಷಗಳ ಅವಧಿಗೆ ಉಭಯ ದೇಶಗಳ ನಡುವೆ ಒಪ್ಪಂದವಾಗಿತ್ತು.
ಈಗ ಒಪ್ಪಂದದ ಮಾನ್ಯತೆ ವಿಸ್ತರಣೆಯಿಂದ ಪಾಕಿಸ್ತಾನದ ಪವಿತ್ರ ಗುರುದ್ವಾರಕ್ಕೆ ಭೇಟಿ ನೀಡಲು ಭಾರತದಿಂದ ಯಾತ್ರಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಯಾತ್ರಾರ್ಥಿಗಳಿಗೆ ಪಾಕಿಸ್ತಾನ ವಿಧಿಸುವ 20 ಅಮೆರಿಕನ್ ಡಾಲರ್ ಸೇವಾ ಶುಲ್ಕ ರದ್ದತಿ ಕುರಿತ ಯಾತ್ರಾರ್ಥಿಗಳ ಮನವಿ ಹಿನ್ನೆಲೆಯಲ್ಲಿ ಅವರ ಮೇಲೆ ಯಾವುದೇ ಶುಲ್ಕ ಅಥವಾ ಶುಲ್ಕವನ್ನು ವಿಧಿಸದಂತೆ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ಒತ್ತಾಯಿಸಿದೆ ಎಂದು MEA ಹೇಳಿದೆ.
2021ರಲ್ಲಿ ಭಾರತದಿಂದ ಒಟ್ಟು 10, 025 ಯಾತ್ರಿಕರು 4 ಕಿ. ಮೀ. ದೂರದ ಕರ್ತಾರ್ ಪುರ ಕಾರಿಡಾರ್ ಮೂಲಕ ಗುರದ್ವಾರಕ್ಕೆ ತೆರಳಿದ್ದರೆ, 2022 ರಲ್ಲಿ 86, 097 ಮತ್ತು 2023ರಲ್ಲಿ 96,555 ಯಾತ್ರಿಕರು ತೆರಳಿದ್ದಾರೆ ಎನ್ನಲಾಗಿದೆ. ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಮುಚ್ಚಲಾಗಿದ್ದ ಕಾರಿಡಾರ್ ಒಂದೂವರೆ ವರ್ಷಗಳ ನಂತರ ನವೆಂಬರ್ 2021 ರಲ್ಲಿ ಮತ್ತೆ ಕಾರ್ಯಾರಂಭ ಮಾಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



